ETV Bharat / sports

ಕ್ರೀಡೆಗೆ ಪ್ರವೇಶಿಸಲು ಇಚ್ಛಿಸುವ ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಿ : ಪೋಷಕರಿಗೆ 'ಬೆಳ್ಳಿ'ಚುಕ್ಕಿ ಚನು ಮನವಿ - ಟೋಕಿಯೋ ಒಲಿಂಪಿಕ್ಸ್​

ಚನು 21 ವರ್ಷಗಳ ನಂತರ ವೇಟ್​ಲಿಫ್ಟಿಂಗ್​ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟಿದ್ದಾರೆ. 49 ಕೆಜಿ ವಿಭಾಗದಲ್ಲಿ ಪದಕ ಗೆದ್ದಿದ್ದಾರೆ. ಚನು ದೇಶಕ್ಕೆ ಪಿವಿ ಸಿಂಧು ನಂತರ ಬೆಳ್ಳಿ ಪದಕ ಗೆದ್ದ ಎರಡನೇ ಮಹಿಳಾ ಕ್ರೀಡಾಪಟು ಎನಿಸಿಕೊಂಡಿದ್ದಾರೆ..

Mirabai Chanu
ಮೀರಾಬಾಯಿ ಚನು
author img

By

Published : Aug 25, 2021, 9:13 PM IST

ಪಟಿಯಾಲಾ : ಯಾವುದೇ ಕ್ರೀಡೆಯಲ್ಲಿ ತಮ್ಮನ್ನ ತೊಡಗಿಸಿಕೊಳ್ಳಲು ಇಚ್ಛಿಸುವ ಹೆಣ್ಣು ಮಕ್ಕಳನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕೆಂದು ಟೋಕಿಯೊ ಒಲಿಂಪಿಕ್ಸ್​ನಲ್ಲಿ ಬೆಳ್ಳಿಪದಕ ಗೆದ್ದ ಭಾರತದ ವೇಟ್​ ಲಿಫ್ಟರ್​ ಮೀರಾಬಾಯಿ ಚನು ಬುಧವಾರ ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ.

"ನಾನು 14 ವರ್ಷದವಳಿದ್ದಾಗ ಕ್ರೀಡೆಯನ್ನು ಆರಂಭಿಸಿದೆ. ಅಲ್ಲಿಂದ ಸಾಕಷ್ಟು ಸಮಸ್ಯೆಗಳನ್ನು ನಾನು ಎದುರಿಸಬೇಕಾಗಿತ್ತು. ಮೊದಲು ಹೆಚ್ಚು ಸೌಲಭ್ಯಗಳಿರಲಿಲ್ಲ ಮತ್ತು ನನ್ನ ಕುಟುಂಬಗಳು ಬಹಳ ಕಷ್ಟಗಳನ್ನು ಎದುರಿಸಬೇಕಾಯಿತು. ತರಬೇತಿಯ ದಿನಗಳಲ್ಲಿ ನನ್ನ ಕುಟುಂಬ ನನ್ನನ್ನು ಸಂಪೂರ್ಣವಾಗಿ ಬೆಂಬಲಿಸಿತು. ನನ್ನ ಕನಸನ್ನು ಹಿಂಬಾಲಿಸಲು ನನ್ನ ಹೆತ್ತವರು ಸದಾ ಪ್ರೋತ್ಸಾಹಿಸುತ್ತಿದ್ದರು.

ಇದೀಗ ಅವರ ಕನಸನ್ನು ನನಸಾಗಿಸಿದ್ದಕ್ಕೆ ತುಂಬಾ ಸಂತೋಷವಿದೆ. ಸರ್ಕಾರದಿಂದ ನನಗೆ ಸಾಕಷ್ಟು ಬೆಂಬಲ ಸಿಕ್ಕಿದೆ. ಪ್ರತಿಯೊಬ್ಬರು ಕ್ರೀಡಾ ಕ್ಷೇತ್ರಕ್ಕೆ ಪ್ರವೇಶಿಸಲು ಬಯಸುವ ಹುಡುಗಿಯರನ್ನು ಬೆಂಬಲಿಸುವಂತೆ ವಿನಂತಿಸುತ್ತೇನೆ" ಎಂದು ಚಾನು ಎಎನ್​ಐಗೆ ತಿಳಿಸಿದ್ದಾರೆ.

ನಾನು ತುಂಬಾ ಅದೃಷ್ಟವಂತೆ. ಯಾಕೆಂದರೆ, ನನ್ನ ಕುಟುಂಬ ಕ್ರೀಡೆಯನ್ನು ಪ್ರೀತಿಸುತ್ತದೆ. ಕುಟುಂಬದ ಬೆಂಬಲ ಕ್ರೀಡಾಪಟುಗಳಿಗೆ ಮಹತ್ವದ್ದಾಗಿರುತ್ತದೆ. ನಮ್ಮನ್ನು ಸರ್ಕಾರ ಯಾವಾಗಲೂ ಬೆಂಬಲಿಸುತ್ತದೆ. ಇದೇ ಭಾವನೆಯಲ್ಲಿ ಮುಂದೆಯೂ ನಮ್ಮನ್ನು ಬೆಂಬಲಿಸಲಿದೆ ಎಂದು ನಾನು ಭಾವಿಸಿದ್ದೇವೆ.

ಭಾರತದ ಕ್ರೀಡಾಪಟುಗಳು ತುಂಬಾ ಕಠಿಣ ಪರಿಶ್ರಮಿಗಳಾಗಿದ್ದಾರೆ. ಯುವ ಪೀಳಿಗೆ ಅವರು ಬಯಸಿದ ಬೆಂಬಲವನ್ನು ಪಡೆದರೆ, ಖಂಡಿತ ದೇಶ ಹೆಮ್ಮೆ ಪಡುವಂತೆ ಮಾಡುತ್ತಾರೆ ಎಂದು ಚನು ಹೇಳಿದ್ದಾರೆ.

ಚನು 21 ವರ್ಷಗಳ ನಂತರ ವೇಟ್​ಲಿಫ್ಟಿಂಗ್​ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟಿದ್ದಾರೆ. 49 ಕೆಜಿ ವಿಭಾಗದಲ್ಲಿ ಪದಕ ಗೆದ್ದಿದ್ದಾರೆ. ಚನು ದೇಶಕ್ಕೆ ಪಿವಿ ಸಿಂಧು ನಂತರ ಬೆಳ್ಳಿ ಪದಕ ಗೆದ್ದ ಎರಡನೇ ಮಹಿಳಾ ಕ್ರೀಡಾಪಟು ಎನಿಸಿಕೊಂಡಿದ್ದಾರೆ.

ಇದನ್ನು ಓದಿ: ಒಲಿಂಪಿಕ್ಸ್​ನಲ್ಲಿ​ ನೀರಜ್​ ಚೋಪ್ರಾ ಚಿನ್ನ ತಪ್ಪಿಸಲು ಯತ್ನಿಸಿದ್ರಾ ಪಾಕ್​ ಪ್ಲೇಯರ್​? ಚೋಪ್ರಾ ಹೇಳಿದ್ದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.