ಚಂಡೀಗಡ: ಭಾರತದ ಖ್ಯಾತ ಸ್ಪ್ರಿಂಟರ್ ಮಿಲ್ಖಾ ಸಿಂಗ್ ಆಕ್ಸಿಜನ್ ಬೆಂಬಲದೊಂದಿಗೆ ಚೇತರಿಸಿಕೊಂಡು ಬುಧವಾರ ಐಸಿಯುನಿಂದ ಸಾಮಾನ್ಯ ವಾರ್ಡ್ಗೆ ಶಿಫ್ಟ್ ಆಗಿದ್ದಾರೆ. ಅವರಿಗೆ ಕೋವಿಡ್ ನ್ಯುಮೇನಿಯಾ ಚಿಕಿತ್ಸೆ ನೀಡಲಾಗಿದ್ದು ಅವನ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಆಸ್ಪತ್ರೆ ತಿಳಿಸಿದೆ.
ಆದರೆ ಅವರ ಪತ್ನಿ ಹಾಗೂ ಭಾರತದ ಮಾಜಿ ವಾಲಿಬಾಲ್ ತಂಡದ ನಾಯಕಿ 82 ವರ್ಷದ ನಿರ್ಮಲಾ ಕೌರ್ ಬುಧವಾರ ಕೋವಿಡ್ ಪೂರ್ವ ಲಕ್ಷಣಗಳು ಕಾಣಿಸಿಕೊಂಡ ಹಿನ್ನಲೆ ಮಿಲ್ಖಾ ಸಿಂಗ್ ದಾಖಲಾಗಿದ್ದ ಮೊಹಾಲಿಯ ಫಾರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಿಲ್ಖಾ ಸಿಂಗ್ ಆಮ್ಲಜನಕದ ಬೆಂಬಲದಲ್ಲಿ ಸ್ಥಿರವಾಗಿ ಮುಂದುವರೆದಿದ್ದಾರೆ. ಆದಾಗ್ಯೂ, ಅವರು ತುಂಬಾ ದುರ್ಬಲರಾಗಿದ್ದಾರೆ. ಹಾಗಾಗಿ ಅವರ ಆಹಾರ ಸೇವನೆಯನ್ನು ಹೆಚ್ಚಿಸಲು ನಾವು ಮನವೊಲಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಿದೆ.
ನಾವು ಅವರನ್ನು ಐಸಿಯುನಿಂದ ವಾರ್ಡ್ಗೆ ಶಿಫ್ಟ್ ಮಾಡಿದ್ದೇವೆ. ಇದೀಗ ಅವರ ಪತ್ನಿ ನಿರ್ಮಲಾ ಇರುವ ರೂಮ್ನಲ್ಲೇ ಇದ್ದಾರೆ . ನಾವು ಇಬ್ಬರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಹೇಳಿಕೆಯಲ್ಲಿ ವೈದ್ಯರು ತಿಳಿಸಿದ್ದಾರೆ.
ಮಿಲ್ಖಾ ಸಿಂಗ್ಗೆ ಪಾಸಿಟಿವ್ ಕಾಣಿಸಿಕೊಂಡಿದ್ದ ಸಮಯದಲ್ಲಿ ಕುಟುಂಬಸ್ಥರ ಜೊತೆ ಕೌರ್ ಕೂಡ ನೆಗೆಟಿವ್ ಪಡೆದಿದ್ದರು. ಮಿಲ್ಖಾ ಸಿಂಗ್ ಮತ್ತು ಪತ್ನಿಗೆ ಅವರ ಮನೆ ಕೆಲಸದ ಸಹಾಯಕರಿಂದ ವೈರಸ್ ತಗುಲಿರಬಹುದು ಎನ್ನಲಾಗುತ್ತಿದೆ.
ಇದನ್ನು ಓದಿ:ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಪದಕ ತಂದುಕೊಡಬಲ್ಲ ಟಾಪ್ 5 ಕ್ರೀಡಾಪಟುಗಳು