ಹೈದರಾಬಾದ್: ಚೀನಾದಲ್ಲಿ ನಡೆಯಲಿರುವ ಒಲಿಂಪಿಕ್ ಕ್ವಾಲಿಫೈಯರ್ಗೆ ಪಂದ್ಯಕ್ಕೆ 51 ಕೆಜಿ ವಿಭಾಗದಿಂದ ಪಾಲ್ಗೊಳ್ಳುವ ಮುನ್ನ ಟ್ರಯಲ್ ಪಂದ್ಯದಲ್ಲಿ 6 ಬಾರಿಯ ವಿಶ್ವ ಚಾಂಪಿಯನ್ ಮೇರಿಕೋಮ್ ವಿರುದ್ಧ ಯುವ ಬಾಕ್ಸರ್ ಝರೀನ್ ಪೈಪೋಟಿ ನಡೆಸಲಿದ್ದಾರೆ.
51 ಕೆಜಿ ವಿಭಾಗದಿಂದ ವಿಶ್ವಚಾಂಪಿಯನ್ಶಿಪ್ನಲ್ಲಿ ಪಾಲ್ಗೊಂಡಿದ್ದ ಮೇರಿಕೋಮ್ ಕಂಚಿನ ಪದಕ ಗೆದ್ದಿದ್ದರು. ಆದರೆ ಅದೇ ವಿಭಾಗದಿಂದ ಟೋಕಿಯೋ ಒಲಿಂಪಿಕ್ಗೆ ನೇರ ಅರ್ಹತೆ ಪಡೆದಿದ್ದರು. ಇದನ್ನು ಪ್ರಶ್ನಿಸಿದ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ನಿಖತ್, ಟ್ರಯಲ್ ಪಂದ್ಯವಿಲ್ಲದೆ ನೇರವಾಗಿ ಆಯ್ಕೆ ಮಾಡಿದ್ದನ್ನು ಪ್ರಶ್ನಿಸಿ ಕ್ರೀಡಾಸಚಿವರಿಗೆ ಪತ್ರ ಬರೆದಿದ್ದರು.
ಇದೀಗ ಟೋಕಿಯೋ ಒಲಿಂಪಿಕ್ಸ್ನ ಕ್ವಾಲಿಫೈಯರ್ ಟೂರ್ನಿಗೆ ಯಾರು ಸ್ಪರ್ಧಿಸಲಿದ್ದಾರೆ ಎಂಬುವುದನ್ನು ಟ್ರಯಲ್ ಪಂದ್ಯದಿಂದಲೇ ನಿರ್ಣಯಿಸುವುದಾಗಿ ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾದ ಮುಖ್ಯಸ್ಥ ಅಜಯ್ ಸಿಂಗ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ವಿಚಾರವನ್ನು ಶೀಘ್ರದಲ್ಲಿ ಇಬ್ಬರು ಬಾಕ್ಸರ್ಗಳಿಗೂ ತಿಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಶ್ವಚಾಂಪಿಯನ್ಶಿಪ್ಗಳಲ್ಲಿ ಹಲವು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿರುವ ಮೇರಿಕೋಮ್ರನ್ನು ಟೋಕಿಯೋ ಒಲಿಂಪಿಕ್ಸ್ಗೆ ನೇರವಾಗಿ ಆಯ್ಕೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಜೂನಿಯರ್ ವಿಶ್ವಚಾಂಪಿಯನ್ ನಿಖತ್ ಝರೀನ್ ಮೇರಿಕೋಮ್ ಜೊತೆಗೆ ಟ್ರಯಲ್ ಪಂದ್ಯವಾಡಿಸಿಬೇಕು ಎಂದು ಕೇಂದ್ರ ಕ್ರೀಡಾ ಸಚಿವರ ಬಳಿ ಮನವಿ ಮಾಡಿಕೊಂಡಿದ್ದರು.
ಇದೀಗ ಬಿಎಫ್ಐ ಡಿಸೆಂಬರ್ನಲ್ಲಿ ನಡೆಯುವ ಇಂಡಿಯನ್ ಬಾಕ್ಸಿಂಗ್ ಲೀಗ್ನಂತರ ಕೊನೆಯ ವಾರದಲ್ಲಿ ನಿಖತ್ ಹಾಗೂ ಮೇರಿಕೋಮ್ ನಡುವೆ ಟ್ರಯಲ್ ಪಂದ್ಯ ಏರ್ಪಡಿಸಿದೆ. ಇದರಲ್ಲಿ ಗೆದ್ದವರು ಒಲಿಂಪಿಕ್ ಅರ್ಹತಾ ಟೂರ್ನಿಗೆ ಆಯ್ಕೆಯಾಗಲಿದ್ದಾರೆ.