ETV Bharat / sports

ಭಾರತ ದೇಶದ ಕೋಟ್ಯಂತರ ಮಹಿಳೆಯರಿಗೆ ಸ್ಪೂರ್ತಿ ಈ 'ಸೂಪರ್​ ವುಮನ್​'

ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಬಾಕ್ಸಿಂಗ್​ ಲೋಕದಲ್ಲಿ ಅದ್ಭುತ ಸಾಧನೆ ಮಾಡಿ, 8 ಬಾರಿ ವಿಶ್ವಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕವನ್ನು ಗೆದ್ದು, ಹಾಗೂ ದೇಶದಲ್ಲೇ ಅತ್ಯಂತ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ವಿಭೂಷಣ ಪಡೆದಿರುವ ಮೊದಲ ಮಹಿಳಾ ಕ್ರೀಡಾಪಟುವಾಗಿರುವ ಮೇರಿಕೋಮ್​ರ ಬಾಕ್ಸಿಂಗ್​ ಪ್ರಯಾಣವನ್ನು ನಾವೆಲ್ಲರೂ ಸ್ಮರಿಸಿಕೊಳ್ಳಲೇಬೇಕಾಗಿದೆ.

Mary Kom
ಮೇರಿಕೋಮ್​
author img

By

Published : Mar 1, 2020, 7:01 AM IST

ಹೆಣ್ಣಾಗಿ ಹುಟ್ಟಿ ತನ್ನ ಕನಸುಗಳನ್ನು ಇಡೇರಿಸಿಕೊಳ್ಳಲು ಮನೆಯಿಂದ ಹೊರಹೋಗುವುದು ಹೇಗೆ ಎನ್ನುತ್ತಿದ್ದ ಕಾಲದಲ್ಲಿ, ತನ್ನ ಪಾಲಿಗೆ ಬಂದ ಹಲವು ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಿದ ದಿಟ್ಟಿಗಿತ್ತಿ ಈಕೆ. ಸಮಸ್ಯೆಗಳ ವಿರುದ್ಧ ಹೋರಾಡಿ, ಪತಿಗೆ ಬೇಷರತ್​ ಬೆಂಬಲ ನೀಡಿದ ಸತಿಯಾಗಿ ಮತ್ತು ಮಕ್ಕಳನ್ನು ಪೋಷಿಸುತ್ತಲೇ ಬಾಕ್ಸಿಂಗ್​ ರಿಂಗ್​ನಲ್ಲಿ ತನ್ನದೇ ಆದ ರೀತಿಯಲ್ಲಿ ಆಳ್ವಿಕೆ ನಡೆಸಿ, ದೇಶದ ಅರ್ಧದಷ್ಟು ಜನರಿಗೆ ಸ್ಫೂರ್ತಿಯಾಗಿದ್ದಾರೆಂದರೆ ಹೆಮ್ಮೆ ಪಡುವಂತಹ ವಿಷಯವೇ ಸರಿ.

Mary Kom
ಮೇರಿಕೋಮ್​

ಹೌದು, ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಬಾಕ್ಸಿಂಗ್​ ಲೋಕದಲ್ಲಿ ಅದ್ಭುತ ಸಾಧನೆ ಮಾಡಿ, 8 ಬಾರಿ ವಿಶ್ವಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕವನ್ನು ಗೆದ್ದು, ಹಾಗೂ ದೇಶದಲ್ಲೇ ಅತ್ಯಂತ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ವಿಭೂಷಣ ಪಡೆದಿರುವ ಮೊದಲ ಮಹಿಳಾ ಕ್ರೀಡಾಪಟುವಾಗಿರುವ ಮೇರಿಕೋಮ್​ರ ಬಾಕ್ಸಿಂಗ್​ ಪ್ರಯಾಣವನ್ನು ನಾವೆಲ್ಲರೂ ಸ್ಮರಿಸಿಕೊಳ್ಳಲೇಬೇಕಾಗಿದೆ.

Mary Kom
ಮೇರಿಕೋಮ್​

ಕುಟುಂಬದ ವಿರೋಧದ ನಡುವೆಯೂ ಯಶಸ್ವಿನ ಶಿಖರವೇರಿದ ಕೋಮ್​

ಮಣಿಪುರ ಚರ್ಚಂದನ್​ ಜಿಲ್ಲೆಯ ಕಾಂಗೆತಲ್​ ಗ್ರಾಮದ ತೊನ್ಬಾ ಕೋಮ್​ ಆಖಾಮ್​ ಕೋಮ್​ ದಂಪತಿ ಮಗಳೇ ಈ ಮೇರಿಕೋಮ್. ಬಾಲ್ಯದಲ್ಲಿ ತಿನ್ನಲು ಅನ್ನವಿಲ್ಲದ ಕಾಲ, ಧರಿಸಲು ಬಟ್ಟೆಗಳಿಲ್ಲದೇ ತಂದೆ ತಾಯಿಯರಿಗೆ ವ್ಯವಸಾಯದಲ್ಲಿ ಸಹಾಯ ಮಾಡುತ್ತ ಬೆಳೆದ ಕಾಡಂಚಿನ ಹಳ್ಳಿಯ ಹುಡುಗಿ. ಪೋಷಕರಿಗೆ ವ್ಯವಸಾಯದಲ್ಲಿ ಸಹಾಯ ಮಾಡುತ್ತಲೇ ಬೆಳೆದ ಮೇರಿಗೆ ತಮ್ಮ ಬಾಲ್ಯದ ಬಾಕ್ಸಿಂಗ್​ ಲೆಜೆಂಡ್​ ಡಿಂಕೋ ಸಿಂಗ್ ಅವ​ರನ್ನು ಸ್ಪೂರ್ತಿಯಾಗಿ ಪಡೆದು ಬಾಕ್ಸಿಂಗ್​ನತ್ತ ಒಲವನ್ನು ತೋರಿರುತ್ತಾರೆ. ಅವರು ಎಂದಿಗೂ ವಿದ್ಯಾಬ್ಯಾಸದಲ್ಲಿ ಮುಂದಿದ್ದವರಲ್ಲ. ಬದಲಾಗಿ ಕ್ರೀಡಾ ಚಟುವಟಿಕೆಗಳಲ್ಲಿ ತುಂಬಾ ಆಳವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಕಾಲಿಗೆ ಶೂ ಇಲ್ಲದೇ ಬಾಕ್ಸಿಂಗ್​ ಇಳಿದಿದ್ದ ಮೇರಿ 37 ವರ್ಷ ಆದಾಗ ದೇಶದಲ್ಲೇ ಟಾಪ್​ ಬಾಕ್ಸರ್​ ಆಗಿದ್ದರೆಂದರೆ ಅದು ಇತಿಹಾಸ. ಬಾಕ್ಸಿಂಗ್​ ಅನ್ನು ಪ್ರೀತಿಸಿ ತಮ್ಮ ಪೋಷಕರಿಂದಲೇ ತಿರಸ್ಕೃತ ಕ್ಕೊಳಗಾಗಿದ್ದು ಒಂದು ಕಡೆಯಾದರೆ, ಮತ್ತೊಂದು ಕಡೆ ಹಣಕಾಸಿನ ಸಮಸ್ಯೆ ಬಹುವಾಗಿ ಕಾಡಿತ್ತು. ಆದರೆ, 15 ವರ್ಷದ ಹುಡುಗಿ ಇಷ್ಟೆಲ್ಲಾ ಕಷ್ಟದ ನಡುವೆಯೂ ಕೈಗೆ ಬಾಕ್ಸಿಂಗ್​ ಗ್ಲೌಸ್​ , ತಲೆಗೆ ಹೆಡ್​ಸ್ಟ್ರಾಂಗ್​ ತೊಟ್ಟು, ತನ್ನ ಬಾಕ್ಸಿಂಗ್​ ಪ್ರಯಾಣವನ್ನು ಪ್ರಾರಂಭಿಸಿದ್ದಳು. ನಂತರ ಕುಟುಂಬವು ಅವರ ಮಹಾತ್ವಾಕಾಂಕ್ಷೆಯನ್ನು ಒಪ್ಪಿಕೊಂಡಿತು. 2001ರಲ್ಲಿ ಅಂತಾರಾಷ್ಟ್ರೀಯ ಬಾಕ್ಸಿಂಗ್ ಪ್ರಯಾಣ ಆರಂಭಿಸಿದ ಅವರು ಏಷ್ಯನ್​ ಚಾಂಪಿಯನ್​ಶಿಪ್​, ಏಷ್ಯನ್​ ಗೇಮ್ಸ್​, ವಿಶ್ವ ಚಾಂಪಿಯನ್​ಶಿಪ್​, ಏಷ್ಯನ್​ ಇಂಡೋರ್​ ಗೇಮ್ಸ್​, ಕಾಮನ್​ವೆಲ್ತ್​ ಗೇಮ್ಸ್​ ಹಾಗೂ ಒಲಿಂಪಿಕ್ಸ್​ನಲ್ಲೂ ಕಂಚು ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ವಿಶ್ವದೆಲ್ಲೆಡೆ ಹಬ್ಬಿಸಿದ್ದಾರೆ.

Mary Kom
ಮೇರಿಕೋಮ್​

ಅದ್ಭುತ ಮಹಿಳೆ ಹಾಗೂ ಅತ್ಯುತ್ತಮ ಅಮ್ಮನಾಗಿ ಮೆರಿಕೋಮ್​

ಒಬ್ಬ ಯಶಸ್ವಿ ಪುರುಷನ ಹಿಂದೆ ಹೇಗೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುತ್ತಾರೋ ಹಾಗೆ ಮೇರಿಕೋಮ್​ ಯಶಸ್ಸಿನ ಹಿಂದೆ ಪುರುಷನಾಗಿ ಅವರ ಗಂಡ ಇದ್ದಾರೆ. ಅವರೇ ಪ್ರಸಿದ್ದ ಫುಟ್ಬಾಲ್​ ಆಟಗಾರ ಒನ್ಲರ್ ಕೋಮ್​​. ಮೇರಿ ಹಾಗೂ ಒನ್ಲರ್​ 2001ರಲ್ಲಿ ಮದುವೆಯಾದರು. ಆದರೆ ಮೇರಿ ಮದುವೆಯಾಗಿದ್ದಕ್ಕೆ ಅವರ ಕೋಚ್​ಗಳು ಬೇಸರ ವ್ಯಕ್ತಪಡಿಸಿದ್ದರು. ಏಕೆಂದರೆ ಅವರು ಮದುವೆಯಾದ ಬಳಿಕ ಬಾಕ್ಸಿಂಗ್​ ತ್ಯಜಿಸಬಹುದೆಂದು ಅವರು ಭಾವಿಸಿದ್ದರು. ಆದರೆ, ಮೇರಿಯ ದೃಢಸಂಕಲ್ಪ ಹಾಗೂ ದೃಢನಿರ್ಧಾರ ಇಡೀ ಜಗತ್ತನ್ನೇ ಬದಲಾಯಿಸಿತು. ಮೇರಿಕೋಮ್​ ತಾಯಿಯಾಗುವ ಮುನ್ನ ಗೆದ್ದಿದ್ದಕ್ಕಿಂತ ಹೆಚ್ಚಿನ ಪದಕವನ್ನು ತಾಯಿಯಾದ ಮೇಲೆಯೇ ಗೆಚ್ಚು ಗೆದ್ದರು ಎಂಬುದು ಇಲ್ಲಿನ ವಿಶೇಷ.

Mary Kom
ಮೇರಿಕೋಮ್​

ಮದುವೆಯಾದ 2 ವರ್ಷದ ನಂತರ ಮೇರಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅವರು​ ಮಕ್ಕಳಿಗೆ ಜನ್ಮ ನೀಡಿದ ನಂತರ ಪತಿ ಒನ್ಲರ್​ ಮನೆ ಜವಾಬ್ದಾರಿ ವಹಿಸಿಕೊಂಡರು.ಇತ್ತ ಮೇರಿಕೋಮ್​ ತಮ್ಮ ಕನಸಿನ ಬಾಕ್ಸಿಂಗ್​ ತರಬೇತಿಗಾಗಿ ರಿಂಗ್​ ಇಳಿದೇ ಬಿಟ್ಟರು. ಅಲ್ಲಿಂದ ನಡೆದಿದ್ದೆಲ್ಲಾ ಇತಿಹಾಸ. ಎರಡು ಮಕ್ಕಳ ತಾಯಿಯೆಂಬ ಭಾವನೆಯನ್ನು ಮರೆತು ಹೋರಾಡಿದ ಮೇರಿ ವಿಶ್ವಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ನಾಲ್ಕನೇ ಚಿನ್ನದ ಪದಕವನ್ನು ಭಾರತಕ್ಕೆ ತಂದುಕೊಟ್ಟಿದ್ದರು. ಆಶ್ಚರ್ಯವೆಂದರೆ ಮೇರಿಕೋಮ್​ ತಾಯಿಯಾದ ಮೇಲೆ ಹೆಚ್ಚು ಪದಕ ಹಾಗೂ ಯಶಸ್ವಿ ಬಾಕ್ಸರ್​ ಎಂದು ಹೆಸರು ಪಡೆದರು. ಅಲ್ಲಿಯವರೆಗೆ ಸೂಪರ್​ ವುಮನ್​ ಆಗಿದ್ದವರು ಮುಂದೆ ಸೂಪರ್ ಮಾಮ್ಸ್​​ ಎನಿಸಿಕೊಂಡರು.

Mary Kom
ಮೇರಿಕೋಮ್​

ಮಹಾನ್​ ಕ್ರೀಡಾಪಟುಗಳ ಸಾಲಿಗೆ ಮೇರಿಕೋಮ್​

37 ವರ್ಷದ ಮೇರಿಕೋಮ್ ದೇಶದ ಎರಡನೇ ಅತ್ಯುತ್ತಮ ಪ್ರಶಸ್ತಿಯಾದ ಪದ್ಮಭೂಷಣವನ್ನು ಪಡೆದ ನಾಲ್ಕನೇ ಕ್ರೀಡಾಪಟು ಹಾಗೂ ಮೊದಲ ಮಹಿಳಾ ಕ್ರೀಡಾಪಟು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರಿಗಿಂತ ಮೊದಲು ಕ್ರೀಡಾ ಲೋಕದ ದಿಗ್ಗಜರಾದ ​, ಚೆಸ್​ ಪರಿಣಿತ ವಿಶ್ವನಾಥನ್ ಆನಂದ್​(2007), ಕ್ರಿಕೆಟ್ ದೇವರು ಸಚಿನ್​ ತೆಂಡೂಲ್ಕರ್(2008), ಮೌಂಟ್​ ಎವರೆಸ್ಟ್​ ಏರಿದ ವಿಶ್ವದ ಮೊದಲ ಪರ್ವತಾರೋಹಿಯಾದ ನ್ಯೂಜಿಲ್ಯಾಂಡ್​ನ ಎಡ್ಮಂಡ್​ ಹಿಲರಿ(2008) ಮಾತ್ರ ಪದ್ಮವಿಭೂಷಣ ಗೌರವಕ್ಕೆ ಪಾತ್ರರಾಗಿದ್ದರು.

Mary Kom
ಮೇರಿಕೋಮ್​

ಬಾಕ್ಸಿಂಗ್​ನಲ್ಲಿ ಮೇರಿಕೋಮ್​ ಸಾಧನೆ

1)ಮೇರಿಕೋಮ್​ 8 ಬಾರಿ ವಿಶ್ವಚಾಂಪಿಯನ್​ ಆದ ಏಕೈಕ ಬಾಕ್ಸರ್​(ಮಹಿಳೆ ಅಥವಾ ಪುರುಷ).

2) 2012ರ ಲಂಡನ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಮೊದಲ ಮಹಿಳಾ ಕ್ರೀಡಾಪಟು​. ಆ ಒಲಿಂಪಿಕ್ಸ್​ನಲ್ಲಿ ಕೋಮ್​ ಕಂಚಿನ ಪದಕ ಗೆದ್ದಿದ್ದರು.

3)ವಿಶ್ವಚಾಂಪಿಯನ್​ಶಿಪ್​ನಲ್ಲಿ 8 ಚಿನ್ನದ ಪದಕ ಗೆದ್ದ ಏಕೈಕ ಬಾಕ್ಸರ್​

4)ಏಷ್ಯನ್​ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಬಾಕ್ಸರ್​(2014)

5)ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಚಿನ್ನ ಗೆದ್ದ ಮೊದಲ ಮಹಿಳಾ ಬಾಕ್ಸರ್​

6) ಏಷ್ಯಾದ ಅಮೆಚೂರ್​​ ಬಾಕ್ಸಿಂಗ್​ ಚಾಂಪಿಯನ್​ಶಿಪ್​ ಗೆದ್ದ ಏಕೈಕ ಮಹಿಳಾ ಬಾಕ್ಸರ್​. ಇವರು 5 ಬಾರಿ ಈ ಸಾಧನೆ ಮಾಡಿದ್ದಾರೆ.

Mary Kom
ಮೇರಿಕೋಮ್​

ಮೇರಿಕೋಮ್​ ಸಾಧನೆಗೆ ಸಂದಿರುವ ಗೌರವಗಳು

  • ರಾಜೀವ್​ ಗಾಂಧಿ ಖೇಲ್​ರತ್ನ (2009)
  • ಅರ್ಜುನ ಪ್ರಶಸ್ತಿ(2003)
  • ಪದ್ಮಶ್ರೀ(2006)
  • ಪದ್ಮ ಭೂಷಣ(2013)
  • ಪದ್ಮವಿಭೂಷಣ(2020)
  • ಅಂತಾರಾಷ್ಟ್ರೀಯ ಬಾಕ್ಸಿಂಗ್​ನಿಂದ 'ಮ್ಯಾಗ್ನಿಫಿಸೆಂಟ್​ ಮೇರಿ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.