ETV Bharat / sports

ಒಲಿಂಪಿಕ್​ ಅರ್ಹತಾ ಟೂರ್ನಿಗೆ ಮೇರಿಕೋಮ್ ಪ್ರವೇಶ​ - Mary Kom beats Nikhat Zareen

60 ಕೆಜಿ ವಿಭಾಗದಲ್ಲಿ ಮಾಜಿ ವಿಶ್ವಚಾಂಪಿಯನ್​ ಸರಿತಾ ದೇವಿ, ಸಿಮ್ರಾನ್​ಜಿತ್​ ಕೌರ್​ ವಿರುದ್ಧ 14-3 ರಲ್ಲಿ ಮಣಿಸಿದರೆ, 57 ಕೆಜಿ ವಿಭಾಗದಲ್ಲಿ 2 ಬಾರಿ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಗೆದ್ದ ಸೋನಿಯ ಲಾಥರ್​ರನ್ನು ಸಾಕ್ಷಿ ಚೌಧರಿ ಮಣಿಸಿದರು.

Mary Kom beats Nikhat Zareen
Mary Kom beats Nikhat Zareen
author img

By

Published : Dec 28, 2019, 1:50 PM IST

ನವದೆಹಲಿ: ಆರು ಬಾರಿಯ ವಿಶ್ವ ಚಾಂಪಿಯನ್​ ಮೇರಿಕೋಮ್​ ಶನಿವಾರ ಒಲಿಂಪಿಕ್ ಅರ್ಹತಾ ಟೂರ್ನಿಗಾಗಿ ನಡೆದ ಟ್ರಯಲ್ಸ್​ ಫೈನಲ್​ನಲ್ಲಿ ನಿಖಾತ್ ಝರೀನ್ ಅವರನ್ನು 9-1ರ ಅಂತರದಲ್ಲಿ ಮಣಿಸಿ ಚೀನಾದಲ್ಲಿ ನಡೆಯುವ ಒಲಿಂಪಿಕ್​ ಅರ್ಹತಾ ಟೂರ್ನಿಗೆ ಆಯ್ಕೆಯಾದರು.

6 ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರನ್ನು 51 ಕೆಜಿ ವಿಭಾಗದಲ್ಲಿ ನೇರವಾಗಿ ಒಲಿಂಪಿಕ್ ಅರ್ಹತಾ ಟೂರ್ನಿಗೆ ಆಯ್ಕೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ನಿಖಾತ್, ಆಯ್ಕೆ ಟ್ರಯಲ್ಸ್ ಮೂಲಕವೇ ತಂಡಕ್ಕೆ ಆಯ್ಕೆ ಮಾಡಬೇಕೆಂದು ಭಾರತೀಯ ಬಾಕ್ಸಿಂಗ್ ಫೆಡರೇಷನ್ ಹಾಗೂ ಕ್ರೀಡಾ ಸಚಿವಾಲಯದ ಮೊರೆ ಹೋಗಿದ್ದರು. ಮೇರಿ ಕೋಮ್​ ಒಪ್ಪಿಗೆಯ ಮೇರೆಗೆ ಇಂದು ನಡೆದ ಟ್ರಯಲ್ಸ್​ ಪಂದ್ಯದಲ್ಲಿ ಅನುಭವಿ ಮೇರಿಕೋಮ್​ ಯುವ ಬಾಕ್ಸರ್​ ಝರೀನ್​ರನ್ನು 9-1 ಅಂಕಗಳಿಂದ ಸುಲಭವಾಗಿ ಮಣಿಸಿದರು.

60 ಕೆಜಿ ವಿಭಾಗದಲ್ಲಿ ಮಾಜಿ ವಿಶ್ವಚಾಂಪಿಯನ್​ ಸರಿತಾ ದೇವಿ ಸಿಮ್ರಾನ್​ಜಿತ್​ ಕೌರ್​ ವಿರುದ್ಧ 14-3 ರಲ್ಲಿ ಮಣಸಿದರೆ, 57 ಕೆಜಿ ವಿಭಾಗದಲ್ಲಿ 2 ಬಾರಿ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಗೆದ್ದಿದ್ದ ಸೋನಿಯ ಲಾಥರ್​ರನ್ನು ಸಾಕ್ಷಿ ಚೌಧರಿ ಮಣಿಸಿದರು.

75 ಕೆಜಿ ವಿಭಾಗದಲ್ಲಿ ಪೂಜಾರಾಣಿ 14-3 ಲ್ಲಿ ನುಪುರ್​ ರನ್ನು, 69 ಕೆಜಿ ವಿಭಾಗದಲ್ಲಿ ಲೌಲಿನ ಬೋರ್ಗೊಹೈನ್​ 14-3ರಲ್ಲಿ ಲಲಿತಾರನ್ನು ಮಣಿಸಿ ಒಲಿಂಪಿಕ್​​ ಅರ್ಹತಾ ಟೂರ್ನಿಗೆ ಆಯ್ಕೆಯಾದರು.

ಒಲಿಂಪಿಕ್ ಅರ್ಹತಾ ಟೂರ್ನಿ ಮುಂದಿನ ಫೆಬ್ರವರಿಯಲ್ಲಿ ಚೀನಾದಲ್ಲಿ ನಡೆಯಲಿದೆ.

Intro:Body:

Mary Kom vs Nikhat Zareen

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.