ETV Bharat / sports

ಮೊಣಕಾಲೂರಿ ಪ್ರೇಮ ನಿವೇದಿಸಿಕೊಳ್ಳುವಾಗ ಸ್ನಾಯು ಸೆಳೆತಕ್ಕೀಡಾದ ಸೈಕ್ಲಿಸ್ಟ್​: ವಿಡಿಯೋ ನೋಡಿ

author img

By

Published : Aug 23, 2022, 1:39 PM IST

ಸೈಕ್ಲಿಂಗ್​​ ಸ್ಪರ್ಧಿಯೊಬ್ಬ ಪ್ರೇಯಸಿ ಮುಂದೆ ಮೊಣಕಾಲೂರಿ ಪ್ರೇಮ ನಿವೇದನೆ ಮಾಡಿಕೊಳ್ಳುವಾಗ ಸ್ನಾಯು ಸೆಳೆತಕ್ಕೀಡಾಗಿ ನೋವು ಅನುಭವಿಸಿದ್ದಾನೆ. ಖುಷಿ ವಿಷಯ ಅಂದ್ರೆ ಆತನ ಪ್ರೀತಿಯನ್ನು ಪ್ರೇಯಸಿ ಒಪ್ಪಿದ್ದಾಳೆ.

Etv Bharatleg-cramp-proposing-his-girlfriend
ಲವ್​ ಪ್ರಪೋಸ್​ ವೇಳೆ ​ಸ್ನಾಯು ಸೆಳೆತ

ಸೈಕ್ಲಿಂಗ್​ ಮುಗಿಸಿಕೊಂಡು ಬಂದ ಸ್ಪರ್ಧಿಯೊಬ್ಬ ತನ್ನ ಗೆಳತಿಗೆ ಮಂಡಿಯೂರಿ ಪ್ರೇಮ ನಿವೇದನೆ ಮಾಡುತ್ತಿರುವಾಗ ಸ್ನಾಯು ಸೆಳೆತಕ್ಕೀಡಾಗಿದ್ದಾನೆ. ನೋವು ಉಲ್ಬಣಿಸಿದರೂ ಬಿಡದ ಆತ ಬೇರೆಯವರ ಸಹಾಯ ಪಡೆದು ತನ್ನಾಕೆಯ ಮುಂದೆ ಪ್ರೀತಿ ನಿವೇದಿಸಿಕೊಂಡಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ.

ಈ "ನೋವಿನ ಪ್ರೀತಿಯ" ವಿಡಿಯೋವನ್ನು ಐರನ್‌ಮ್ಯಾನ್ ಯುರೋಪ್ ಎಂಬ ಇನ್‌ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದ್ದು, ತಪ್ಪಾದ ಸಮಯದಲ್ಲಿ ನೋವುಂಟಾದಾಗ ಎಂದು ಶೀರ್ಷಿಕೆ ನೀಡಲಾಗಿದೆ. ಇದಕ್ಕೆ ನೆಟಿಜನ್​ಗಳಿಂದ ತರಹೇವಾರಿ ಕಮೆಂಟ್​ಗಳು ಬಂದಿವೆ.

ಕ್ರಿಸ್ಟಿಯನ್ ಮೊರಿಯಾಟಿಯೆಲ್ ಎಂಬ ಸ್ಪರ್ಧಿ ಎಸ್ಟೋನಿಯಾದಲ್ಲಿ ನಡೆದ ಟ್ರಯಥ್ಲಾನ್‌ನಲ್ಲಿ ಭಾಗವಹಿಸಿದ್ದ. 6 ನೇ ಸ್ಪರ್ಧಿಯಾಗಿ ಗುರಿ ತಲುಪಿದ ಬಳಿಕ ಆತ ನೇರವಾಗಿ ವೀಕ್ಷಕರ ಗ್ಯಾಲರಿಗೆ ಹೋಗಿ ಅಲ್ಲಿದ್ದ ತನ್ನ ಗೆಳತಿಯ ಮುಂದೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ.

ಕಾಲು ನೆಲದ ಮೇಲೆ ಊರಿ ಪ್ರೀತಿ ಬಯಸಿದಾಗ ದಿಢೀರ್​ ಆಗಿ ಕಾಲಿನ ಸ್ನಾಯು ಸೆಳೆದಿದೆ. ನೋವಿನಿಂದ ಆತ ಕುಸಿದಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದವರು ನೆರವಿಗೆ ಬಂದಿದ್ದಾರೆ. ಅವರ ಸಹಾಯದಿಂದ ಸ್ಪರ್ಧಿ ಕಷ್ಟಪಟ್ಟು ಪ್ರೇಯಸಿಗೆ ತನ್ನ ಪ್ರೀತಿ ಬಗ್ಗೆ ತಿಳಿಸಿದ್ದಾನೆ. ಇದಕ್ಕೆ ಆಕೆ ಸಮ್ಮತಿಸಿಯೂ ನೀಡಿದ್ದಾಳೆ. ಮನದರಸಿಯ ಒಪ್ಪಿಗೆಯೂ ಆತನಲ್ಲುಂಟಾದ ನೋವನ್ನೂ ಮರೆಸಿರಬಹುದು.

ಇದನ್ನೂ ಓದಿ: ಬರಿಗೈಯಲ್ಲಿ ರಕ್ಷಿಸಲು ಬಂದವನಿಗೆ ಕಚ್ಚಿದ ನಾಗರಹಾವು: ಸ್ನೇಕ್ ಲೋಕೇಶ್ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.