ETV Bharat / sports

ಮೆಸ್ಸಿಗೆ 2022 ಫಿಫಾ ಅತ್ಯುತ್ತಮ ಪುರುಷರ ಆಟಗಾರ ಪ್ರಶಸ್ತಿ - ETV Bharath Kannada news

ಮೆಸ್ಸಿಗೆ ಏಳನೇ ಬಾರಿಗೆ ಫಿಫಾ ವಿಶ್ವ ಆಟಗಾರ ಪ್ರಶಸ್ತಿ - ಸ್ಪೇನ್‌ನ ಪುಟೆಲ್ಲಾಸ್ ಅತ್ಯುತ್ತಮ ಮಹಿಳಾ ಆಟಗಾರ್ತಿ - ವಿಶ್ವಕಪ್​ ವಿಜೇತ ದೇಶ ಅರ್ಜೆಂಟೀನಾದ ಅಭಿಮಾನಿಗಳಿಗೆ ಫಿಫಾ ಅಭಿಮಾನಿ ಪ್ರಶಸ್ತಿ

Etv Bharat
Etv Bharat
author img

By

Published : Feb 28, 2023, 7:59 AM IST

ಪ್ಯಾರಿಸ್‌ (ಫ್ರಾನ್ಸ್​): ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಫ್ರಾನ್ಸ್​ ವಿರುದ್ಧ​ ಗೆಲುವು ಸಾಧಸಿದ ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ 2022 ರ ಅತ್ಯುತ್ತಮ ಫಿಫಾ ಪುರುಷರ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಸ್ಪೇನ್‌ನ ಅಲೆಕ್ಸಿಯಾ ಪುಟೆಲ್ಲಾಸ್ 2022 ರ ಅತ್ಯುತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದಾರೆ. ಅರಬ್​ ರಾಷ್ಟ್ರವಾದ ಕತಾರ್​ನಲ್ಲಿ ನಡೆದ ಕಾಲ್ಚೆಂಡಿನ ವಿಶ್ವಕಪ್​ನಲ್ಲಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಫ್ರಾನ್ಸ್​ನ್ನು ಮಣಿಸಿತ್ತು.

2022 ರ ಅತ್ಯುತ್ತಮ ಫಿಫಾ ಪುರುಷರ ಆಟಗಾರ ಪ್ರಶಸ್ತಿ ಪ್ಯಾರಿಸ್ ಸೇಂಟ್ ಜರ್ಮೈನ್ (ಪಿಎಸ್‌ಜಿ) ತಂಡದ ಸಹ ಆಟಗಾರ ಕೈಲಿಯನ್ ಎಂಬಪ್ಪೆ ಮತ್ತು ರಿಯಲ್ ಮ್ಯಾಡ್ರಿಡ್ ನಾಯಕ ಕರೀಮ್ ಬೆಂಜೆಮಾ ನಾಮನಿರ್ದೇಶನಗೊಂಡಿದ್ದರು.

ಮೆಸ್ಸಿಗೆ ಏಳನೇ ಬಾರಿಗೆ ಫಿಫಾ ವಿಶ್ವ ಆಟಗಾರ ಪ್ರಶಸ್ತಿ: 2007ರಲ್ಲಿ ಗಾಲಾದಲ್ಲಿ ನಡೆದ ಫಿಫಾ ವಿಶ್ವಕಪ್​ನಲ್ಲಿ ಮೊದಲ ಬಾರಿಗೆ ಮೆಸ್ಸಿ ಕಾಣಿಸಿಕೊಂಡರು. ಮಾಜಿ ಬಾರ್ಸಿಲೋನಾ ನಾಯಕ 2007ರಲ್ಲಿ ಫಿಫಾ ವರ್ಲ್ಡ್ ಪ್ಲೇಯರ್ ಆಫ್ ದಿ ಇಯರ್ ಸ್ಟ್ಯಾಂಡಿಂಗ್​ನ ಎರಡನೇ ಸ್ಥಾನ ಗಳಿಸಿದ್ದರು. 15 ವರ್ಷಗಳ ನಂತರ, ಪ್ಯಾರಿಸ್‌ನಲ್ಲಿ ಮಂಗಳವಾರ ಏಳನೇ ಬಾರಿಗೆ ಮೆಸ್ಸಿಯನ್ನು ವರ್ಷದ ಫಿಫಾ ಆಟಗಾರ ಎಂದು ಕರೆಸಿಕೊಂಡರು. ಕಾಲ್ಚೆಂಡು ಸ್ಪರ್ಧೆಯ ಜಾದುಗಾರ ಎಂದೇ ಕರೆಯ ಬಹುದಾದ ಮೆಸ್ಸಿ ಈಗ 2009, 2010, 2011, 2012, 2015, 2019 ಮತ್ತು 2023 ರಲ್ಲಿ ವರ್ಷದ ಫಿಫಾ ವಿಶ್ವ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಸ್ಪೇನ್‌ನ ಪುಟೆಲ್ಲಾಸ್ ಅತ್ಯುತ್ತಮ ಮಹಿಳಾ ಆಟಗಾರ್ತಿ: ಮೆಸ್ಸಿ ಅವರನ್ನು ಫೀಫಾ ಅತ್ಯುತ್ತಮ ಪುರುಷರ ಆಟಗಾರ ಎಂದು ಹೆಸರಿಸಿದರೆ, ಸ್ಪೇನ್‌ನ ಅಲೆಕ್ಸಿಯಾ ಪುಟೆಲ್ಲಾಸ್ ಸತತ ಎರಡನೇ ವರ್ಷ ಅತ್ಯುತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಗೆದ್ದರು. ಅರ್ಜೆಂಟೀನಾದ ವಿಶ್ವಕಪ್ ವಿಜೇತ ಮ್ಯಾನೇಜರ್ ಲಿಯೋನೆಲ್ ಸ್ಕಾಲೋನಿ ಅವರು ವರ್ಷದ ಫಿಫಾ ಪುರುಷರ ಕೋಚ್ ಆಗಿ ಆಯ್ಕೆಯಾದರು.

  • What a night 🤩

    — FIFA World Cup (@FIFAWorldCup) February 27, 2023 " class="align-text-top noRightClick twitterSection" data=" ">

ವಿಶ್ವಕಪ್​ ವಿಜೇತ ದೇಶ ಅರ್ಜೆಂಟೀನಾದ ಅಭಿಮಾನಿಗಳಿಗೆ "ಫಿಫಾ ಅಭಿಮಾನಿ ಪ್ರಶಸ್ತಿ 2022" ಗೌರವ ನೀಡಲಾಯಿತು. ಸ್ಕಾಲೋನಿ ರಿಯಲ್ ಮ್ಯಾಡ್ರಿಡ್‌ನ ಕಾರ್ಲೊ ಅನ್ಸೆಲೊಟ್ಟಿ ಮತ್ತು ಮ್ಯಾಂಚೆಸ್ಟರ್ ಸಿಟಿಯ ಮುಖ್ಯ ಕೋಚ್ ಪೆಪ್ ಗಾರ್ಡಿಯೊಲಾ ಅವರನ್ನು ವರ್ಷದ ಕೋಚ್ ಪ್ರಶಸ್ತಿ ಗೆದ್ದರು. ಅರ್ಜೆಂಟೀನಾದ ವಿಶ್ವಕಪ್ ವಿಜೇತ ಎಮಿಲಿಯಾನೊ ಮಾರ್ಟಿನೆಜ್ ಫಿಫಾದ ಅತ್ಯುತ್ತಮ ಪುರುಷರ ಗೋಲ್‌ಕೀಪರ್ ಎಂದು ಆಯ್ಕೆಯಾದರು. ಪೋಲಿಷ್ ವಿಕಲಚೇತನ ಮಾರ್ಸಿನ್ ಒಲೆಕ್ಸಿ ಅವರು ಫಿಫಾ ಪ್ರಶಸ್ತಿಗಳಲ್ಲಿ ವರ್ಷದ ಅತ್ಯುತ್ತಮ ಗೋಲುಗಾಗಿ ಪುಸ್ಕಾಸ್ ಪ್ರಶಸ್ತಿಯನ್ನು ಗೆದ್ದರು.

ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ:
ಲಿಯೋನೆಲ್ ಮೆಸ್ಸಿ (ಅರ್ಜೆಂಟೀನಾ) - 2022 ರ ಅತ್ಯುತ್ತಮ ಫಿಫಾ ಪುರುಷರ ಆಟಗಾರ
ಅಲೆಕ್ಸಿಯಾ ಪುಟೆಲ್ಲಾಸ್ (ಬಾರ್ಸಿಲೋನಾ/ಸ್ಪೇನ್) - ಅತ್ಯುತ್ತಮ ಫಿಫಾ ಮಹಿಳಾ ಆಟಗಾರ್ತಿ 2022
ಅರ್ಜೆಂಟೀನಾ - ಫಿಫಾ ಅಭಿಮಾನಿ ಪ್ರಶಸ್ತಿ 2022
ಲುಕಾ ಲೊಚೋಶ್ವಿಲಿ - ಫಿಫಾ ಫೇರ್ ಪ್ಲೇ ಪ್ರಶಸ್ತಿ
ಲಿಯೋನೆಲ್ ಸ್ಕಾಲೋನಿ - ಫಿಫಾ ಪುರುಷರ ಕೋಚ್ 2022
ಸರೀನಾ ವೈಗ್‌ಮನ್ - ಫಿಫಾ ಮಹಿಳಾ ಕೋಚ್ 2022
ಮಾರ್ಸಿನ್ ಒಲೆಕ್ಸಿ - ಫಿಫಾ ಪುಸ್ಕಾಸ್ ಪ್ರಶಸ್ತಿ (ಅತ್ಯುತ್ತಮ ಗೋಲು)
ಎಮಿಲಿಯಾನೊ ಮಾರ್ಟಿನೆಜ್ - ಫಿಫಾ ಪುರುಷರ ಗೋಲ್‌ಕೀಪರ್ ಪ್ರಶಸ್ತಿ 2022
ಮೇರಿ ಇಯರ್ಪ್ಸ್ - ಫಿಫಾ ಮಹಿಳಾ ಗೋಲ್‌ಕೀಪರ್ 2022

ಇದನ್ನೂ ಓದಿ: ಅತೀ ಹೆಚ್ಚು ಟ್ರೋಫಿ ಗೆದ್ದ ಆಸೀಸ್​ ನಾಯಕಿ ಮೆಗ್​.. ಈ ಟಿ20 ವಿಶ್ವಕಪ್​ನಲ್ಲಿ ಹೆಚ್ಚು ರನ್​ ಮತ್ತು ವಿಕೆಟ್​ ಗಳಿಸಿದವರಿವರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.