ದೋಹ, ಕತಾರ್: ಕತಾರ್‌ನ ಲುಸೇಲ್ ಸ್ಟೇಡಿಯಂ ಐತಿಹಾಸಿಕ ಫುಟ್‌ಬಾಲ್ ಪಂದ್ಯಕ್ಕೆ ಸಾಕ್ಷಿಯಾಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿದ ಅರ್ಜೆಂಟೀನಾ ವಿಶ್ವಕಪ್ ಗೆದ್ದಿದೆ. ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಲಿಯೋನೆಲ್ ಮೆಸ್ಸಿ ತಮ್ಮ ಅಭಿಮಾನಿಗಳ ನಂಬಿಕೆ ಉಳಿಸಿಕೊಂಡರು.
ಫಿಫಾ ವಿಶ್ವಕಪ್‌ನ ಐದು ಆವೃತ್ತಿಗಳಲ್ಲಿ ಆಡಿರುವ ಲಿಯೋನೆಲ್ ಮೆಸ್ಸಿ ತಂಡ ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದೆ. 1978 ಮತ್ತು 1986ರ ನಂತರ ಮೂರನೇ ಬಾರಿ ಪ್ರಶಸ್ತಿ ಅರ್ಜೆಂಟೀನಾ ತಂಡ ವಿಶ್ವಕಪ್ ಗೆದ್ದುಕೊಂಡು ಸಂಭ್ರಮಿಸಿತು. ಐದು ಆವೃತ್ತಿಗಳಲ್ಲಿ ಆಡಿದ ಕೇವಲ ಆರು ಜನ ಆಟಗಾರರಲ್ಲಿ ಒಬ್ಬರಾದ ಮೆಸ್ಸಿ ನಿನ್ನೆ ತಮ್ಮ 26ನೇ ಪಂದ್ಯವನ್ನು ಆಡಿದ್ದರು. ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಮಯು ಆಟವಾಡಿದ ದಾಖಲೆಯನ್ನು ಮೆಸ್ಸಿ ಬರೆದಿದ್ದಾರೆ.
ಮೆಸ್ಸಿ ಅಂತಿಮವಾಗಿ ತಮ್ಮ ಬಾಲ್ಯದ ಕನಸನ್ನು ನನಸಾಗಿಸಿಕೊಂಡರು. 36 ವರ್ಷಗಳ ಹಿಂದೆ ಅರ್ಜೆಂಟೀನಾ ಪರ ಡಿಯಾಗೋ ಮರಡೋನಾ ಮಾಡಿದ್ದ ಸಾಧನೆಯನ್ನು ಮೆಸ್ಸಿ ಮರಳಿ ಸಾಧಿಸಿದರು. ಮೆಸ್ಸಿಯ ಜಾಗತಿಕ ಟ್ರೋಫಿಯ ಬರವು ಕೊನೆಗೂ ಈಡೇರಿದೆ. ಪ್ರಶಸ್ತಿ ಪಡೆದ ಬಳಿಕ ಲಿಯೋನೆಲ್ ಮೆಸ್ಸಿ ತನ್ನ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಸಂಭ್ರಮಿಸಿದರು. ಅಲ್ಲದೆ, ತಂಡದ ಇತರ ಆಟಗಾರರು, ತರಬೇತುದಾರರು, ಸಿಬ್ಬಂದಿ ಹಾಗೂ ಸಾವಿರಾರು ಅಭಿಮಾನಿಗಳ ಸಂಭ್ರಮದಲ್ಲಿ ಮಿಂದೆದ್ದರು.
ಈ ಪಂದ್ಯದ ಬಳಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಇದರಲ್ಲಿ ಉತ್ತಮ ಯುವ ಆಟಗಾರ ಪ್ರಶಸ್ತಿಯನ್ನು ಎಂಜೊ ಫೆರ್ನಾಂಡಿಸ್ (ಅರ್ಜೆಂಟೀನಾ) ಪಡೆದುಕೊಂಡರು. ಗೋಲ್ಡನ್ ಗ್ಲೋವ್ಸ್ ಪ್ರಶಸ್ತಿ ಅತ್ಯುತ್ತಮ ಗೋಲ್‌ಕೀಪರ್ ಹೊರಹೊಮ್ಮಿದ ಅರ್ಜೆಂಟೀನಾ ಇ. ಮಾರ್ಟಿನೆಜ್ ಪಡೆದುಕೊಂಡರು. ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಈ ವಿಶ್ವಕಪ್‌ನಲ್ಲಿ ಅತೀ ಹೆಚ್ಚು ಗೋಲುಗಳನ್ನು ಗಳಿಸಿರುವ ಫ್ರಾನ್ಸ್ ತಂಡದ ಯುವ ಆಟಗಾರ ಎಂಬಪ್ಪೆ ಪಡೆದುಕೊಂಡ್ರೆ, ಟೂರ್ನಿಯುದ್ದುಕ್ಕೂ ಅತ್ಯುತ್ತಮ ಪ್ರದರ್ಶನ ತೋರಿದ ಮೆಸ್ಸಿಗೆ ಗೋಲ್ಡನ್ ಫುಟ್ಬಾಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಓದಿ: ರೆಕಾರ್ಡ್ಗಳ ರಾಜ.. ವಿಶ್ವಕಪ್‌ನ ಫೈನಲ್ನಲ್ಲೂ ಮೆಸ್ಸಿ ದಾಖಲೆಗಳ ಸುರಿಮಳೆ