ETV Bharat / sports

Neeraj Chopra: ಎರಡನೇ ಡೈಮಂಡ್​ ಲೀಗ್​ ಗೆದ್ದ ನೀರಜ್​ ಚೋಪ್ರಾ.. 87.66 ದೂರ ಭರ್ಚಿ ಎಸೆದು ಚಿನ್ನಕ್ಕೆ ಮುತ್ತಿಟ್ಟ ಭಾರತೀಯ

author img

By

Published : Jul 1, 2023, 8:12 AM IST

ಒಲಂಪಿಕ್ಸ್​ ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾ 2ನೇ ಡೈಮಂಡ್​​ ಲೀಗ್ ಗೆಲುವು ಸಾಧಿಸಿದ್ದಾರೆ. ಸ್ವಿಟ್ಕರ್ಲ್ಯಾಂಡ್​​ನಲ್ಲಿ ನಡೆದ ಟೂರ್ನಿಯಲ್ಲಿ ಚಿನ್ನಕ್ಕೆ ಭರ್ಚಿ ಎಸೆದರು.

ಎರಡನೇ ಡೈಮಂಡ್​ ಲೀಗ್​ ಗೆದ್ದ ನೀರಜ್​ ಚೋಪ್ರಾ
ಎರಡನೇ ಡೈಮಂಡ್​ ಲೀಗ್​ ಗೆದ್ದ ನೀರಜ್​ ಚೋಪ್ರಾ

ಲೌಸಾನ್ನೆ (ಸ್ವಿಟ್ಜರ್ಲೆಂಡ್): ಟೋಕಿಯೊ ಒಲಿಂಪಿಕ್ಸ್‌ನ ಚಿನ್ನದ ಹುಡುಗ ನೀರಜ್ ಚೋಪ್ರಾ ಸತತ ಎರಡನೇ 'ಡೈಮಂಡ್ ಲೀಗ್​' ಜಯಿಸಿದ್ದಾರೆ. ಇದೇ ವರ್ಷ ಮೇ ತಿಂಗಳಲ್ಲಿ ದೋಹಾದಲ್ಲಿ ನಡೆದ ಕೂಟದಲ್ಲಿ ಡೈಮಂಡ್ ಲೀಗ್ ಜಯಿಸಿದ ಬಳಿಕ ಗಾಯಗೊಂಡು ಟೂರ್ನಿಗಳನ್ನು ಮಿಸ್​ ಮಾಡಿಕೊಂಡಿದ್ದರು. ಇದಾದ ಬಳಿಕ ಮತ್ತೊಂದು ಡೈಮಂಡ್​ ಲೀಗ್ ಜಯಿಸಿ ಭರ್ಜರಿ ಕಮ್​ಬ್ಯಾಕ್​ ಮಾಡಿದ್ದಾರೆ.

ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಚೋಪ್ರಾ ಕಳೆದ ಜೂನ್ 4 ರಂದು ನೆದರ್‌ಲ್ಯಾಂಡ್ಸ್‌ನ ಹೆಂಗೆಲೋದಲ್ಲಿ ನಡೆದ ಎಫ್‌ಬಿಕೆ ಗೇಮ್ಸ್ ಮತ್ತು ಜೂನ್ 13ರಂದು ಫಿನ್‌ಲ್ಯಾಂಡ್‌ನ ತುರ್ಕುದಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಿಂದ ಅವರು ಹೊರಗುಳಿದಿದ್ದರು.

ಸ್ವಿಟ್ಜರ್‌ಲ್ಯಾಂಡ್‌ನ ಲೌಸಾನ್ನೆಯಲ್ಲಿ ಶುಕ್ರವಾರ ನಡೆದ ಲೀಗ್​ನ ಫೈನಲ್‌ನಲ್ಲಿ 87.66 ಮೀಟರ್‌ ದೂರಕ್ಕೆ ಭರ್ಜಿಯನ್ನು ಎಸೆದ ನೀರಜ್‌ ಡೈಮಂಡ್​ ಲೀಗ್​ ಗೆದ್ದರು. ಮೊದಲ ಪ್ರಯತ್ವವನ್ನೇ ಚೋಪ್ರಾ ಫೌಲ್ ಮಾಡಿದರು. ಜರ್ಮನಿಯ ಜೂಲಿಯನ್ ವೆಬರ್ ಆರಂಭಿಕ ಮುನ್ನಡೆ ಪಡೆದರು. ಎರಡನೇ ಎಸೆತದಲ್ಲಿ ಲಯ ಕಂಡುಕೊಂಡ ನೀರಜ್‌, 83.52 ಮೀಟರ್ ಎಸೆದು ಮೂರನೇ ಸ್ಥಾನ ಪಡೆದರು. ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ತಮ್ಮ ಮೂರನೇ ಪ್ರಯತ್ನದಲ್ಲಿ 85.04 ಮೀಟರ್​ ಪ್ರಯತ್ನದೊಂದಿಗೆ ಎರಡನೇ ಸ್ಥಾನಕ್ಕೆ ಬಂದರು.

ಇದಾದ ಬಳಿಕ ತಮ್ಮ ಐದನೇ ಪ್ರಯತ್ನದಲ್ಲಿ ಭಾರತೀಯ ಆಟಗಾರ ಈಟಿಯನ್ನು 87.66 ಮೀಟರ್‌ ದೂರ ಎಸೆದು ಅಗ್ರಸ್ಥಾನವನ್ನು ಪಡೆದುಕೊಂಡರು. ಜರ್ಮನಿಯ ಜೂಲಿಯನ್ ವೆಬರ್ ಮತ್ತು ಜೆಕ್ ಗಣರಾಜ್ಯದ ಜಕುಬ್ ವಡ್ಲೆಜ್, ತಮ್ಮ ಅಂತಿಮ ಪ್ರಯತ್ನಗಳಲ್ಲಿ ಕ್ರಮವಾಗಿ 87.03 ಮೀ. ಹಾಗೂ 86.13 ಮೀ. ದಾಖಲಿಸಿದರು. ಇದರಿಂದ ಚೋಪ್ರಾ ನಿರಾಯಾಸವಾಗಿ ಗೆಲುವು ಸಾಧಿಸಿದರು.

2ನೇ ಡೈಮಂಡ್​ ಲೀಗ್​: ಮೇ 5 ರಂದು ದೋಹಾದಲ್ಲಿ ನಡೆದ ಫೈನಲ್​ನಲ್ಲಿ 88.67 ಮೀ. ಈಟಿಯನ್ನು ಎಸೆದು ಡೈಮಂಡ್ ಲೀಗ್‌ ಗೆಲ್ಲುವ ಮೂಲಕ ವರ್ಷದ ಮೊದಲ ಪ್ರಶಸ್ತಿ ಬೇಟೆಯನ್ನು ಜಯದ ಮೂಲಕ ಆರಂಭಿಸಿದ್ದರು. ಇದಾದ ಬಳಿಕ ಗಾಯದಿಂದಾಗಿ ಹಲವು ಟೂರ್ನಿಗಳನ್ನು ಕಳೆದುಕೊಂಡಿದ್ದರು. ಈ ಋತುವಿನ ಡೈಮಂಡ್ ಲೀಗ್‌ನಲ್ಲಿ ಚೋಪ್ರಾಗಿದು ಎರಡನೇ ಗೆಲುವಾಗಿದೆ. ಭರ್ಚಿ ಎಸೆತಗಾರ ವೈಯಕ್ತಿಕವಾಗಿ 89.94 ಮೀ. ದೂರ ದಾಖಲೆ ಹೊಂದಿದ್ದಾರೆ.

ನೀರಜ್ ಚೋಪ್ರಾ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ 2ನೇ ಭಾರತೀಯ ಅಥ್ಲೀಟ್ ಎಂಬ ದಾಖಲೆಯನ್ನು ಬರೆದಿದ್ದಾರೆ. 2018ರಲ್ಲಿ ನೀರಜ್ ಕಾಮನ್ ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದರು. ಯುಜೀನ್‌ನಲ್ಲಿ ನಡೆದ ಗೇಮ್ಸ್​​ನಲ್ಲಿ ನೀರಜ್​ ಚೋಪ್ರಾ, ಬೆಳ್ಳಿ ಪದಕ ಗೆದ್ದಿದ್ದರು. ಗಾಯಗೊಂಡಿದ್ದ ಕಾರಣ ಕೊನೆಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅವರು ಪಾಲ್ಗೊಂಡಿರಲಿಲ್ಲ.

ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಸಮಿತಿಯು ಕಳೆದ ಮೇ ತಿಂಗಳ ಅಂತ್ಯದ ವೇಳೆಗೆ ಬಿಡುಗಡೆಗೊಳಿಸಿದ ಪುರುಷರ ಜಾವೆಲಿನ್‌ ಥ್ರೋ ವಿಭಾಗದ ವಿಶ್ವ ಶ್ರೇಯಾಂಕದಲ್ಲಿ ಭಾರತದ ಸ್ಟಾರ್​ ಅಥ್ಲೀಟ್ ನೀರಜ್ ಚೋಪ್ರಾ ಪುರುಷರ ಜಾವೆಲಿನ್ ಎಸೆತದ ಶ್ರೇಯಾಂಕದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. 1455 ಅಂಕ ಪಡೆದು ವಿಶ್ವದ ನಂಬರ್ ಒನ್ ಸ್ಥಾನದಲ್ಲಿದ್ದಾರೆ.

ಲಾಂಗ್ ಜಂಪ್​ನಲ್ಲಿ ಮುರಳಿ ಸಾಧನೆ: ಇನ್ನು, ಡೈಮಂಡ್‌ ಲೀಗ್‌ನಲ್ಲಿ ಭಾಗವಹಿಸಿದ್ದ ಭಾರತೀಯರ ಪೈಕಿ, ಲಾಂಗ್ ಜಂಪರ್ ಮುರಳಿ ಶ್ರೀಶಂಕರ್ 7.88 ಮೀಟರ್‌ ಜಿಗಿತದೊಂದಿಗೆ ಐದನೇ ಸ್ಥಾನ ಪಡೆದರು. ಬಹಾಮಾಸ್‌ನ ಲಕ್ವಾನ್ ನೈರ್ನ್ 8.11 ಮೀ ಜಿಗಿದು ಅಗ್ರಸ್ಥಾನ ಪಡೆದರೆ, ಗ್ರೀಸ್‌ನ ಮಿಲ್ಟಿಯಾಡಿಸ್ ಟೆಂಟೊಗ್ಲೋ 8.07 ಮೀಟರ್‌ ಜಿಗಿದು ಎರಡನೇ ಸ್ಥಾನದಲ್ಲಿದ್ದಾರೆ. ಜಪಾನ್‌ನ ಯೂಕಿ ಹಶಿಯೋಕಾ ಮೂರನೇ (7.98 ಮೀ) ಸ್ಥಾನ ಪಡೆದರು.

ಇದನ್ನೂ ಓದಿ: ಪುರುಷರ ಜಾವಲಿನ್​ ಥ್ರೋ ಶ್ರೇಯಾಂಕದಲ್ಲಿ ನೀರಜ್​ ಚೋಪ್ರಾಗೆ ಅಗ್ರಸ್ಥಾನ.. ಖರ್ಗೆ ಅಭಿನಂದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.