ETV Bharat / sports

ಕ್ವಾರ್ಟರ್​ ಫೈನಲ್ ತಲುಪಿದ ಲಕ್ಷ್ಯಸೇನ್​, ಸಾತ್ವಿಕ್​- ಚಿರಾಗ್​ ಜೋಡಿ: ಮಹಿಳಾ ಡಬಲ್ಸ್​ ಜೋಡಿಗೆ ಸೋಲು - ಮಹಿಳಾ ಡಬಲ್ಸ್​ ಜೋಡಿಗೆ ಸೋಲು

Japan open: ಜಪಾನ್​ ಓಪನ್​ನಲ್ಲಿ ಭಾರತಕ್ಕೆ ಮಿಶ್ರ ಫಲಿತಾಂಶ ಬಂದಿದೆ. ಸಿಂಗಲ್ಸ್​ನಲ್ಲಿ ಲಕ್ಷ್ಯಸೇನ್​, ಪುರುಷರ ಡಬಲ್ಸ್​ನಲ್ಲಿ ಸಾತ್ವಿಕ್‌ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಗೆಲುವು ಸಾಧಿಸಿ ಕ್ವಾರ್ಟರ್​ ಫೈನಲ್​ ತಲುಪಿದರೆ, ಮಹಿಳಾ ಡಬಲ್ಸ್​ನಲ್ಲಿ ಟ್ರೀಸಾ ಜಾಲಿ ಮತ್ತು ಪುಲ್ಲೇಲಾ ಗಾಯತ್ರಿ ಗೋಪಿಚಂದ್‌ ಜೋಡಿ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ.

japan open
japan open
author img

By

Published : Jul 27, 2023, 4:03 PM IST

ಟೋಕಿಯೋ : ವಿಶ್ವ ಚಾಂಪಿಯನ್​ಶಿಪ್​ ಕಂಚಿನ ಪದಕ ವಿಜೇತ ಲಕ್ಷ್ಯಸೇನ್​, ಕೊರಿಯಾ ಓಪನ್​ ವಿಜೇತ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇಲ್ಲಿ ನಡೆಯುತ್ತಿರುವ ಜಪಾನ್​​ ಓಪನ್​ನ 2ನೇ ಸುತ್ತಿನಲ್ಲಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್​ಫೈನಲ್​ ತಲುಪಿದರು. ಇನ್ನೊಂದೆಡೆ ಟ್ರೀಸಾ ಜಾಲಿ ಮತ್ತು ಪುಲ್ಲೇಲಾ ಗಾಯತ್ರಿ ಗೋಪಿಚಂದ್‌ ಜೋಡಿ ಮಹಿಳಾ ಡಬಲ್ಸ್​ನಲ್ಲಿ ಸೋಲನುಭವಿಸಿದರು.

ಬಿಡಬ್ಲ್ಯೂಎಫ್​ ವರ್ಲ್ಡ್ ಟೂರ್ ಸೂಪರ್ 750 ಸ್ಪರ್ಧೆಯಲ್ಲಿ ಗುರುವಾರ ನಡೆದ ಸಿಂಗಲ್ಸ್​ನ 2ನೇ ಸುತ್ತಿನ ಪಂದ್ಯದಲ್ಲಿ ಭಾರತದ ಬ್ಯಾಡ್ಮಿಂಟನ್​ ಸಿಂಗಲ್ಸ್​​ ತಾರೆ ಲಕ್ಷ್ಯಸೇನ್​ ಜಪಾನ್‌ನ ಕಾಂತಾ ತ್ಸುನೇಯಾಮಾ ವಿರುದ್ಧ 50 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 21-14, 21-16 ನೇರ ಸೆಟ್​ಗಳಿಂದ ಸೋಲಿಸಿದರು.

ಯೋಗಿ ನ್ಯಾಷನಲ್ ಜಿಮ್ನಾಷಿಯಂನ ಕೋರ್ಟ್ 1 ರಲ್ಲಿ ನಡೆದ ಪಂದ್ಯದಲ್ಲಿ ಲಕ್ಷ್ಯ ಸೇನ್ ಮೊದಲ ಗೇಮ್‌ನಲ್ಲಿ ಆರಂಭದಲ್ಲೇ 5-1 ರಲ್ಲಿ ಮುನ್ನಡೆ ಪಡೆದರು. ಬಳಿಕ ತುಸು ಎಚ್ಚರಿಕೆಯ ಆಟವಾಡಿದ ಜಪಾನ್​ ಆಟಗಾರ ಅಂತರವನ್ನು 7-5ಕ್ಕೆ ತಗ್ಗಿಸಿಕೊಂಡರು. ಆದರೆ, ಸೇನ್ ಮುಂದಿನ 5 ಅಂಕಗಳನ್ನು ಸತತವಾಗಿ ಗೆದ್ದು 12- 5ಕ್ಕೆ ಅಂತರ ಹೆಚ್ಚಿಸಿಕೊಂಡರು. ಜಿದ್ದಾಜಿದ್ದಿನ ಸೆಣಸಾಟದಲ್ಲಿ ತ್ಸುನೇಯಾಮಾ 16-14ಕ್ಕೆ ಬಂದು ನಿಂತರು. ನಂತರ ಭಾರತದ ಷಟ್ಲರ್ ಸತತ 5 ಅಂಕಗಳನ್ನು ಗೆಲ್ಲುವ ಮೂಲಕ ಗೇಮ್ ವಶಪಡಿಸಿಕೊಂಡರು.

ಎರಡನೇ ಸೆಟ್​​ನಲ್ಲೂ ಉಭಯ ಆಟಗಾರರು ಜಿದ್ದಾಜಿದ್ದಿನ ಹೋರಾಟ ನಡೆಸಿದರು. ಆರಂಭದಲ್ಲಿ ಇಬ್ಬರೂ 6-6 ಸಮಬಲ ಪಡೆದರು. ಈ ವೇಳೆ ಸೇನ್ ಚಾಣಾಕ್ಷತನ ಮೆರೆದು 10-7ರಲ್ಲಿ ಮುನ್ನಡೆದರು. ಸುನೇಯಾಮಾ ಚೇತರಿಸಿಕೊಂಡು 12-11ಕ್ಕೆ ಅಂತರ ತಗ್ಗಿಸಿದರು. ನಂತರ 16-16 ರಲ್ಲಿ ಪಂದ್ಯ ಸಾಗಿತು. ಈ ಹಂತದಲ್ಲಿ ಭಾರತದ ತಾರಾ ಶಟ್ಲರ್​ ಬಲವಾದ ಮತ್ತು ಬುದ್ಧಿವಂತಿಕೆಯಿಂದ ಸತತ 5 ಪಾಯಿಂಟ್​ಗಳನ್ನು ಪಡೆಯುವ ಮೂಲಕ 2ನೇ ಸೆಟ್​ ಅನ್ನು ಗೆದ್ದರು. ಇಬ್ಬರ ಮಧ್ಯೆ 50 ನಿಮಿಷ ಆಟ ನಡೆಯಿತು.

ಕೊರಿಯಾ ವಿನ್ನರ್ಸ್​ಗೆ ಸಮರಿಲ್ಲ: ಇತ್ತ, ಪಕ್ಕದ ಕೋರ್ಟ್​ನಲ್ಲಿ ನಡೆದ ಡಬಲ್ಸ್​ ಪಂದ್ಯದಲ್ಲಿ ಸಾತ್ವಿಕ್ ಮತ್ತು ಚಿರಾಗ್ ಜೋಡಿ ಡೆನ್ಮಾರ್ಕ್​ನ ಜೆಪ್ ಬೇ ಮತ್ತು ಲಾಸ್ಸೆ ಮೊಲ್ಹೆಜ್ ಜೋಡಿಯನ್ನು ಎದುರಿಸಿ 21-17, 21-11 ನೇರ ಗೇಮ್‌ಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್ ತಲುಪಿದರು.

ಮೊದಲ ಗೇಮ್‌ನಲ್ಲಿ 5-2 ಮುನ್ನಡೆ ಸಾಧಿಸಿದ ಭಾರತದ ಜೋಡಿ, ಬಳಿಕ 10-6 ಮುನ್ನಡೆ ಪಡೆದರು. ಡೆನ್ಮಾರ್ಕ್​ ಜೋಡಿ ಹಿಡಿತ ಸಾಧಿಸಿ 12-12 ರಲ್ಲಿ ಸಮಬಲಕ್ಕೆ ಬಂದರು. ಎರಡು ಜೋಡಿಗಳ ನಡುವಿನ ಪಂದ್ಯ 15-14 ರಲ್ಲಿ ಸಾಗಿತು. ಕೊನೆಯಲ್ಲಿ ಉತ್ತಮ ಆಟದ ಮೂಲಕ ಭಾರತದ ಜೋಡಿ 21-17ರಲ್ಲಿ ಗೇಮ್‌ ಗೆದ್ದರು. ಎರಡನೇ ಗೇಮ್​ನಲ್ಲಿ ಡೆನ್ಮಾರ್ಕ್​ ಜೋಡಿ 5-2 ರಿಂದ ಮುನ್ನಡೆ ಸಾಧಿಸಿದರು. ಬಳಿಕ ಸತತ 7 ಅಂಕಗಳನ್ನು ಪಡೆಯುವ ಮೂಲಕ ಭಾರತದ ಜೋಡಿ 9-5 ರಲ್ಲಿ ಮುನ್ನಡೆ ಸಾಧಿಸಿದರು. ನಂತರವೂ ಸತತ ಅಂಕಗಳನ್ನು ಕಲೆಹಾಕಿ ಕೊನೆಗೆ 21-11 ರಲ್ಲಿ 2ನೇ ಗೇಮ್‌ ಅನ್ನು ಜಯಗಳಿಸಿದರು.

ಮಹಿಳಾ ಜೋಡಿಗೆ ಸೋಲು: ಮಹಿಳಾ ಡಬಲ್ಸ್​​ನಲ್ಲಿ ಭಾರತಕ್ಕೆ ನಿರಾಸೆ ಉಂಟಾಯಿತು. ಟ್ರೀಸಾ ಜಾಲಿ ಮತ್ತು ಪುಲ್ಲೇಲಾ ಗಾಯತ್ರಿ ಗೋಪಿಚಂದ್‌ ಜೋಡಿ 21-23, 19-21ರಲ್ಲಿ ವಿಶ್ವದ 7ನೇ ಶ್ರೇಯಾಂಕದ ಜಪಾನ್‌ನ ನಮಿ ಮತ್ಸುಯಾಮಾ ಮತ್ತು ಚಿಹಾರು ಶಿದಾ ಎದುರು 1 ಗಂಟೆಯ ಅಂತರದಲ್ಲಿ ಸೋಲನುಭವಿಸಿದರು.

ಇದನ್ನೂ ಓದಿ: ಮೊದಲ ಪಂದ್ಯದಲ್ಲೇ ಸ್ಪೇನ್ ಎದುರು ಭಾರತ ಹಾಕಿ ತಂಡಕ್ಕೆ ಸೋಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.