ಬರ್ಮಿಂಗ್ಹ್ಯಾಮ್: ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೇನ್ಗೆ ಚೀನಾದ ಲು ಗುವಾಂಗ್ ಜು ವಾಕ್ ವಾಕ್‌ಓವರ್ ನೀಡಿದ್ದು, ಸೆಮಿಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ನಾಳೆಯ ಪಂದ್ಯದಲ್ಲಿ ಮಲೇಷ್ಯಾದ ಲೀ ಜಿಲ್ ಜಿಯಾ ಮತ್ತು ಜಪಾನ್‌ನ ಸೂಪರ್‌ಸ್ಟಾರ್ ಕೆಂಟೊ ಮೊಮೊಟಾ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.
-
World Championships bronze medallist Lakshya Sen advances to the men's singles semifinals of the All England Championships, after his opponent Lu Guang Zu of China gave a walkover
— ANI (@ANI) March 18, 2022 " class="align-text-top noRightClick twitterSection" data="
(File photo) pic.twitter.com/wLtXetDsEy
">World Championships bronze medallist Lakshya Sen advances to the men's singles semifinals of the All England Championships, after his opponent Lu Guang Zu of China gave a walkover
— ANI (@ANI) March 18, 2022
(File photo) pic.twitter.com/wLtXetDsEyWorld Championships bronze medallist Lakshya Sen advances to the men's singles semifinals of the All England Championships, after his opponent Lu Guang Zu of China gave a walkover
— ANI (@ANI) March 18, 2022
(File photo) pic.twitter.com/wLtXetDsEy
ನಿನ್ನೆ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಲಕ್ಷ್ಯ ಸೇನ್ 21-16, 21-18ರಲ್ಲಿ ವಿಶ್ವದ 3ನೇ ಶ್ರೇಯಾಂಕದ ಆಟಗಾರನನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಇದರ ಬೆನ್ನಲ್ಲೇ ಇಂದು ಚೀನಾದ ಎದುರಾಳಿ ವಿರುದ್ಧ ಸೆಣಸಾಟ ನಡೆಸಬೇಕಾಗಿತ್ತು. ಆದರೆ, ವಾಕ್ ಓವರ್ ಸಿಕ್ಕಿರುವ ಕಾರಣ ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ. ನಾಳೆ ನಡೆಯುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮಲೇಷ್ಯಾದ ಲಿ ಝಿ ಜಿಯಾ ಅಥವಾ ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ ಸೆಮಿಫೈನಲ್ನಲ್ಲಿ ಸೆಣಸಾಟ ನಡೆಸಲಿದ್ದಾರೆ.
ಇದನ್ನೂ ಓದಿ: ಆಲ್ ಇಂಗ್ಲೆಂಡ್ ಓಪನ್: 3ನೇ ಶ್ರೇಯಾಂಕದ ಸ್ಪರ್ಧಿಯ ಮಣಿಸಿ ಕ್ವಾ.ಫೈನಲ್ ಪ್ರವೇಶಿಸಿದ ಲಕ್ಷ್ಯ ಸೇನ್
ಐದನೇ ಶ್ರೇಯಾಂಕದ ಭಾರತದ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಇಂಡೋನೇಷ್ಯಾದ ಅಗ್ರ ಶ್ರೇಯಾಂಕದ ಮಾರ್ಕಸ್ ಮತ್ತು ಕೆವಿನ್ ವಿರುದ್ಧ ಸೋಲು ಕಾಣುವ ಮೂಲಕ ಕ್ವಾರ್ಟರ್ಫೈನಲ್ ಪ್ರವೇಶ ಪಡೆದುಕೊಳ್ಳಲು ವಿಫಲರಾಗಿದ್ದಾರೆ. ಭಾರತದ ಭರವಸೆಯ ಆಟಗಾರ ಲಕ್ಷ್ಯ ಸೇನ್ ಆಲ್ ಇಂಡಿಯಾ ಇಂಗ್ಲೆಂಡ್ನಲ್ಲಿ ಅಭೂತಪೂರ್ವ ಪ್ರದರ್ಶನ ನೀಡುತ್ತಿದ್ದು, ಪ್ರಶಸ್ತಿಗೆ ಮುತ್ತಿಕ್ಕುವ ಸಾಧ್ಯತೆ ಇದೆ.
-
Everyone wanted to know what will Tressa/Gayatri do if they didn't win against the 2nd seeded 🇰🇷 pair today. Guess we would never know 😎
— BAI Media (@BAI_Media) March 18, 2022 " class="align-text-top noRightClick twitterSection" data="
'Boss Ladies' are through to the semis of super 1000 event for the 1️⃣st time in style 🔥#AllEngland2022#IndiaontheRise#Badminton pic.twitter.com/EiijH4gYbg
">Everyone wanted to know what will Tressa/Gayatri do if they didn't win against the 2nd seeded 🇰🇷 pair today. Guess we would never know 😎
— BAI Media (@BAI_Media) March 18, 2022
'Boss Ladies' are through to the semis of super 1000 event for the 1️⃣st time in style 🔥#AllEngland2022#IndiaontheRise#Badminton pic.twitter.com/EiijH4gYbgEveryone wanted to know what will Tressa/Gayatri do if they didn't win against the 2nd seeded 🇰🇷 pair today. Guess we would never know 😎
— BAI Media (@BAI_Media) March 18, 2022
'Boss Ladies' are through to the semis of super 1000 event for the 1️⃣st time in style 🔥#AllEngland2022#IndiaontheRise#Badminton pic.twitter.com/EiijH4gYbg
ಮಹಿಳಾ ಡಬಲ್ಸ್ನಲ್ಲಿ ತ್ರಿಶಾ-ಗಾಯತ್ರಿ ಕಮಾಲ್: ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನಲ್ಲಿ ಮಹಿಳಾ ಡಬಲ್ಸ್ನಲ್ಲಿ ಭಾರತದ ಅನುಭವಿ ಆಟಗಾರರಾದ ತ್ರಿಶಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಸೆಮಿಫೈನಲ್‌ಗೆ ಲಗ್ಗೆ ಹಾಕಿದ್ದಾರೆ. 46ನೇ ಶ್ರೇಯಾಂಕಿತ ಜೋಡಿ ತ್ರಿಶಾ ಮತ್ತು ಗಾಯತ್ರಿ ಮೊದಲ ಗೇಮ್‌ನಲ್ಲಿ 14-21, 22-20, 21-15 ರಿಂದ 14-21, 22-20, 21-15 ರಿಂದ ದಕ್ಷಿಣ ಕೊರಿಯಾದ ಎರಡನೇ ಶ್ರೇಯಾಂಕದ ದಕ್ಷಿಣ ಕೊರಿಯಾದ ಲೀ ಸೊಹೀ ಮತ್ತು ಶಿನ್ ಸೆಯುಂಗ್‌ಚಾನ್ ಜೋಡಿ ವಿರುದ್ಧ ಗೆಲುವು ಸಾಧಿಸಿದ್ದಾರೆ.