ETV Bharat / sports

ವಿಶ್ವಚಾಂಪಿಯನ್​ ಲೋಹ್ ಕೀನ್ ಮಣಿಸಿ ಇಂಡಿಯಾ ಓಪನ್ ಗೆದ್ದ ಲಕ್ಷ್ಯ ಸೇನ್

​ಬಿಡಬ್ಲ್ಯೂಎಫ್​ನಲ್ಲಿ ಲಕ್ಷ್ಯ ಸೇನ್​ಗೆ ಇದು ಚೊಚ್ಚಲ ಕಿರೀಟವಾಗಿದೆ. ಅವರು ಡಿಸೆಂಬರ್​ನಲ್ಲಿ ನಡೆದಿದ್ದ ವಿಶ್ವಚಾಂಪಿಯನ್​ಶಿಪ್​ ಭಾರತದ ಶ್ರೀಕಾಂತ್​ ವಿರುದ್ಧ ಸೆಮಿಫೈನಲ್​ನಲ್ಲಿ ಸೋಲು ಕಂಡು ಕಂಚಿನ ಪದಕ ಗೆದ್ದಿದ್ದರು. ಇದೀಗ ಸೀನಿಯರ್ ವಿಭಾಗದಲ್ಲಿ ಮೊದಲ ಪ್ರಶಸ್ತಿ ಗೆದ್ದಿದ್ದಾರೆ..

Lakshya Sen beats world champion Loh Kean Yew in final
ವಿಶ್ವಚಾಂಪಿಯನ್​ಗೆ ಸೋಲುಣಿಸಿದ ಲಕ್ಷ್ಯ ಸೇನ್​
author img

By

Published : Jan 16, 2022, 7:52 PM IST

Updated : Jan 16, 2022, 8:49 PM IST

ನವದೆಹಲಿ : ವಿಶ್ವ ಚಾಂಪಿಯನ್​ ಲೋಹ್ ಕೀನ್​ ಯಿವ್‌ರನ್ನು ಮಣಿಸುವ ಮೂಲಕ ತಾವು ಪಾದಾರ್ಪಣೆ ಮಾಡಿದ ಮೊದಲ ಇಂಡಿಯಾ ಓಪನ್ ​ಟೂರ್ನಿಯಲ್ಲೇ​ ಪ್ರಶಸ್ತಿ ಗೆದ್ದ ಭಾರತದ ಮೊದಲ ಶಟ್ಲರ್​ ಎಂಬ ಹೆಗ್ಗಳಿಕೆಗೆ ಲಕ್ಷ್ಯ ಸೇನ್ ಪಾತ್ರರಾಗಿದ್ದಾರೆ.

ಭಾನುವಾರ ನವದೆಹಲಿಯಲ್ಲಿ ನಡೆದ ಇಂಡಿಯಾ ಓಪನ್ ರೋಚಕ​ ಫೈನಲ್​ನಲ್ಲಿ ಲಕ್ಷ್ಯ ಸೇನ್ ಸಿಂಗಾಪುರದ ಕೀನ್​ ಯಿವ್ ವಿರುದ್ಧ 24-22, 21-17ರಲ್ಲಿ ಗೆಲುವು ಸಾಧಿಸಿ ಚಾಂಪಿಯನ್​ ಎನಿಸಿಕೊಂಡರು.

ಕೀನ್​ ಡಿಸೆಂಬರ್​​ನಲ್ಲಿ ಭಾರತದ ನಂಬರ್​ 1 ಶಟ್ಲರ್​ ಶ್ರೀಕಾಂತ್​ರನ್ನು ಫೈನಲ್​ನಲ್ಲಿ ಮಣಿಸಿ ವಿಶ್ವಚಾಂಪಿಯನ್​ಶಿಪ್ ಟೈಟಲ್​ ಗೆದ್ದುಕೊಂಡಿದ್ದರು. ಆದರೆ, ಇಂದು ಭಾರತದ ಯುವ ಶಟ್ಲರ್ 54 ನಿಮಿಷ ನಡೆದ ಪಂದ್ಯದಲ್ಲಿ ನೇರ ಗೇಮ್​ಗಳ ಅಂತರದಲ್ಲಿ ಚಾಂಪಿಯನ್​ಗೆ ಮಣ್ಣುಮುಕ್ಕಿಸಿದರು.

​ಬಿಡಬ್ಲ್ಯೂಎಫ್​ನಲ್ಲಿ ಲಕ್ಷ್ಯ ಸೇನ್​ಗೆ ಇದು ಚೊಚ್ಚಲ ಕಿರೀಟವಾಗಿದೆ. ಅವರು ಡಿಸೆಂಬರ್​ನಲ್ಲಿ ನಡೆದಿದ್ದ ವಿಶ್ವಚಾಂಪಿಯನ್​ಶಿಪ್​ ಭಾರತದ ಶ್ರೀಕಾಂತ್​ ವಿರುದ್ಧ ಸೆಮಿಫೈನಲ್​ನಲ್ಲಿ ಸೋಲು ಕಂಡು ಕಂಚಿನ ಪದಕ ಗೆದ್ದಿದ್ದರು. ಇದೀಗ ಸೀನಿಯರ್ ವಿಭಾಗದಲ್ಲಿ ಮೊದಲ ಪ್ರಶಸ್ತಿ ಗೆದ್ದಿದ್ದಾರೆ.

ಮಹಿಳೆಯರ ಫೈನಲ್​ನಲ್ಲಿ ಥಾಯ್ಲೆಂಡ್​ನ ಬುಸನಾನ್​ ತಮ್ಮದೇ ದೇಶದ ಸುಪನಿಡಾ ಕೆಟತಾಂಗ್ ವಿರುದ್ಧ 22-2-, 19-21, 21-13ರಲ್ಲಿ ಗೆದ್ದು ಚಾಂಪಿಯನ್ ಆದರು.

ಡಬಲ್ಸ್​​ ಕಿರೀಟ ಮುಡಿಗೇರಿಸಿಕೊಂಡ ಸಾತ್ವಿಕ್-ಚಿರಾಗ್ ಜೋಡಿ

ಭಾರತದ ನಂಬರ್ 1 ಜೋಡಿಯಾಗಿರುವ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಭಾನುವಾರ ನಡೆದ ಪುರುಷರ ಡಬಲ್ಸ್‌ ಟೂರ್ನಿಯಲ್ಲಿ ನಂಬರ್​ 1 ಶ್ರೇಯಾಂಕ ಪಡೆದಿದ್ದ ಇಂಡೋನೇಷ್ಯಾದ ಮೊಹಮ್ಮದ್ ಅಶಾನ್​ ಮತ್ತು ಹೆಂಡ್ರಾ ಸೆಟಿಯಾವಾನ್‌ರನ್ನು 21-16, 26-24 ರೋಚಕ ಕದನದಲ್ಲಿ ಮಣಿಸಿ ಚಾಂಪಿಯನ್ ಆದರು. ​

Last Updated : Jan 16, 2022, 8:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.