ಹರಿಯಾಣದಲ್ಲಿ ನಡೆದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಕರ್ನಾಟಕ ಪದಕ ಪಟ್ಟಿಯಲ್ಲಿ 3ನೇ ಸ್ಥಾನ ಪಡೆಯಿತು. 22 ಚಿನ್ನ, 17 ಬೆಳ್ಳಿ, 28 ಕಂಚು ಸೇರಿದಂತೆ ಒಟ್ಟು 67 ಪದಕಗಳನ್ನು ರಾಜ್ಯದ ಕ್ರೀಡಾಪಟುಗಳು ಗೆದ್ದು ಬೀಗಿದ್ದಾರೆ.
ಈಜು, ಕುಸ್ತಿ, ಕಬ್ಬಡ್ಡಿ, ಖೋ ಖೋ, ಬ್ಯಾಡ್ಮಿಂಟನ್, ಟ್ರ್ಯಾಕ್ ರನ್ನಿಂಗ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಕರ್ನಾಟಕದ ಆಟಗಾರರು ಪಾರಮ್ಯ ಮೆರೆದಿದ್ದಾರೆ. ಇದಲ್ಲದೇ, ರಾಜ್ಯದ ಖ್ಯಾತ ಕ್ರೀಡೆಯಾದ ಮಲ್ಲಗಂಬದಲ್ಲಿ ತಂಡ ಚಿನ್ನದ ಸಾಧನೆ ಮಾಡಿದೆ.
-
Hosts Haryana emerge on top of the charts in the SBI #KIYG2021 with 52 🥇 medals.#Maharashtra stands at the 2nd place after putting up a tough fight winning 45 🥇medals.#Karnataka takes the 3rd spot with 22 🥇medals
— Khelo India (@kheloindia) June 13, 2022 " class="align-text-top noRightClick twitterSection" data="
Many Congratulations to all👍#KheloIndia #UmeedSeYakeenTak pic.twitter.com/vX1TCCjaNS
">Hosts Haryana emerge on top of the charts in the SBI #KIYG2021 with 52 🥇 medals.#Maharashtra stands at the 2nd place after putting up a tough fight winning 45 🥇medals.#Karnataka takes the 3rd spot with 22 🥇medals
— Khelo India (@kheloindia) June 13, 2022
Many Congratulations to all👍#KheloIndia #UmeedSeYakeenTak pic.twitter.com/vX1TCCjaNSHosts Haryana emerge on top of the charts in the SBI #KIYG2021 with 52 🥇 medals.#Maharashtra stands at the 2nd place after putting up a tough fight winning 45 🥇medals.#Karnataka takes the 3rd spot with 22 🥇medals
— Khelo India (@kheloindia) June 13, 2022
Many Congratulations to all👍#KheloIndia #UmeedSeYakeenTak pic.twitter.com/vX1TCCjaNS
ಕರ್ನಾಟಕ ತಂಡದಲ್ಲಿ 84 ಪುರುಷರು, 110 ಮಹಿಳೆಯರು ಸೇರಿ 194 ಕ್ರೀಡಾಪಟುಗಳು ಭಾಗವಹಿಸಿದ್ದರು. ಕಳೆದ ವರ್ಷ ಅಸ್ಸೋಂನಲ್ಲಿ ನಡೆದ ಕ್ರೀಡಾಕೂಟದಲ್ಲಿ ಕರ್ನಾಟಕ 32 ಚಿನ್ನ ಸೇರಿ ಒಟ್ಟು 80 ಪದಕಗಳೊಂದಿಗೆ 4ನೇ ಸ್ಥಾನ ಪಡೆದಿತ್ತು.
ಹರಿಯಾಣ ಪ್ರಥಮ ಸಾಧನೆ: ಹರಿಯಾಣ ಕ್ರೀಡಾಪಟುಗಳು 137 ಪದಕ ಸಾಧನೆ ಮಾಡಿದ್ದು, ಇದರಲ್ಲಿ 52 ಚಿನ್ನ, 39 ಬೆಳ್ಳಿ, 46 ಕಂಚಿನ ಪದಕಗಳು ಸೇರಿವೆ. ಈ ಮೂಲಕ ಕ್ರೀಡಾಕೂಟದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಮಹಾರಾಷ್ಟ್ರ 125 ಪದಕಗಳ ಸಮೇತ 2ನೇ ಸ್ಥಾನ ಪಡೆದಿದ್ದು, 45+40+40 ಸಾಧನೆ ಮಾಡಿದೆ.
ಇದನ್ನೂ ಓದಿ: 'ವಿಕೆಟ್ ಪಡೆಯುವ ಒಬ್ಬ ಬೌಲರ್ ಇಲ್ಲ': ಭಾರತದ ಕಳಪೆ ಆಟಕ್ಕೆ ಗವಾಸ್ಕರ್ ಕಿಡಿ