ETV Bharat / sports

ವಿಂಬಲ್ಡನ್​ ಪಂದ್ಯದಲ್ಲಿ ಕ್ವಾನ್​ ಸೂನ್​-ವೂ ವಿರುದ್ಧ ಜೊಕೊವಿಕ್​ಗೆ​ ಜಯ - ಜೊಕೊವಿಕ್ 80ನೇ ಗೆಲುವು

ಲಂಡನ್​ನ ಆಲ್​ ಇಂಗ್ಲೆಂಡ್​ ಕ್ಲಬ್​ನಲ್ಲಿ ನಡೆದ ವಿಂಬಲ್ಡನ್​ ಪಂದ್ಯಾವಳಿಯಲ್ಲಿ ನೋವಾಕ್​ ಜೊಕೊವಿಕ್ ಕ್ವಾನ್​ ಸೂನ್​-ವೂ ವಿರುದ್ಧ ಗೆಲ್ಲುವ ಮೂಲಕ್​ ಆಲ್​ ಇಂಗ್ಲೆಂಡ್​ ಕ್ಲಬ್​ನಲ್ಲಿ 80ನೇ ಪಂದ್ಯವನ್ನು ಜಯಿಸಿದ್ದಾರೆ.

wimbledon
ವಿಂಬಲ್ಡನ್​ ಪಂದ್ಯದಲ್ಲಿ ಕ್ವಾನ್​ ಸೂನ್​-ವೂ ವಿರುದ್ದ ಜೊಕೊವಿಕ್​ ಗೆಲುವು
author img

By

Published : Jun 28, 2022, 11:52 AM IST

ಲಂಡನ್​: ಸೋಮವಾರ ನಡೆದ ಆಲ್​ ಇಂಗ್ಲೆಂಡ್​ ಕ್ಲಬ್​ ವಿಂಬಲ್ಡನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ನೊವಾಕ್ ಜೊಕೊವಿಕ್ ಅವರು ಕ್ವಾನ್ ಸೂನ್-ವೂ ವಿರುದ್ಧ ಜಯ ಗಳಿಸಿದ್ದಾರೆ. ಅಲ್ಲದೇ ಆಲ್​ ಇಂಗ್ಲೆಂಡ್​ ಕ್ಲಬ್​ನಲ್ಲಿ ಜೊಕೊವಿಕ್​ ಅವರ 80ನೇ ಗೆಲುವು ಇದಾಗಿದೆ.

ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಸರ್ಬಿಯಾದ ಜೊಕೊವಿಕ್ ಕೊರಿಯಾದ ಸೂನ್-ವೂ ಅವರನ್ನು 6-3, 3-6, 6-3, 6-4 ಸೆಟ್‌ಗಳಿಂದ ಮಣಿಸಿದರು. ಈ ಮೂಲಕ ಇಂಗ್ಲೆಂಡ್​ ಕ್ಲಬ್​ನಲ್ಲಿ ಏಳನೇ ಬಾರಿ ಚಾಂಪಿಯನ್​ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ ನೊವಾಕ್. ಅಲ್ಲದೇ ಎಲ್ಲಾ ನಾಲ್ಕು ಗ್ರ್ಯಾಂಡ್​ ಸ್ಲಾಮ್​ಗಳ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಗೆದ್ದಿರುವ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಜೊಕೊವಿಕ್​ ಪಾತ್ರರಾಗಿದ್ದಾರೆ.

ಕಳೆದ ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ರಾಫೆಲ್ ನಡಾಲ್ ವಿರುದ್ಧ ಸೋತ ನಂತರ ಜೊಕೊವಿಕ್ ಆಡಿದ ಮೊದಲ ಪಂದ್ಯ ಇದಾಗಿದೆ.

ಇದನ್ನೂ ಓದಿ: ಕಿವೀಸ್​​​ ವಿರುದ್ಧ ಟೆಸ್ಟ್ ಸರಣಿ ಕ್ಲೀನ್‌​ ಸ್ವೀಪ್ ಮಾಡಿದ ಇಂಗ್ಲೆಂಡ್: 2ನೇ ವೇಗದ ಅರ್ಧಶತಕ ಸಿಡಿಸಿದ ಬೈರ್‌ಸ್ಟೋ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.