ETV Bharat / sports

ಉಸೇನ್ ಬೋಲ್ಟ್ ಖಾತೆಗೆ ಕನ್ನ: 100 ಕೋಟಿ ಕಳೆದುಕೊಂಡ ಜಮೈಕಾದ ಒಲಿಂಪಿಕ್ ದಂತಕಥೆ - ETV Bharath Kannada news

ವೇಗದ ದೊರೆ ಎಂದೇ ಕರೆಯಲಾಗುವ ಒಲಂಪಿಕ್​ ಚಿನ್ನ ವಿಜೇತ ಉಸೇನ್ ಬೋಲ್ಟ್​ ಅವರ ಖಾತೆಯಿಂದ 100 ಕೋಟಿ ರೂ ವಂಚನೆ ಆಗಿರುವುದು ಬೆಳಕಿಗೆ ಬಂದಿದೆ.

Usain Bolt
ಉಸೇನ್ ಬೋಲ್ಟ್
author img

By

Published : Jan 20, 2023, 10:04 PM IST

ನವದೆಹಲಿ: ವಿಶ್ವದ ಅತ್ಯಂತ ವೇಗದ ಓಟಗಾರ ಮತ್ತು ಅಥ್ಲೆಟಿಕ್ಸ್ ದಿಗ್ಗಜ ಉಸೇನ್ ಬೋಲ್ಟ್ ಅವರ ಹೂಡಿಕೆ ಖಾತೆಯಿಂದ ರಾತ್ರೋರಾತ್ರಿ ಕೋಟ್ಯಂತರ ರೂಪಾಯಿ ಮಾಯವಾಗಿದೆ. ಜಮೈಕಾದ ಒಲಿಂಪಿಕ್ ದಂತಕಥೆ ಉಸೇನ್ ಬೋಲ್ಟ್ ಅವರು ಕಿಂಗ್‌ಸ್ಟನ್ ಮೂಲದ ಹೂಡಿಕೆ ಸಂಸ್ಥೆ ಸ್ಟಾಕ್ಸ್ ಅಂಡ್ ಸೆಕ್ಯುರಿಟೀಸ್ ಲಿಮಿಟೆಡ್​ನಲ್ಲಿ ತಮ್ಮ ಖಾತೆಯಲ್ಲಿದ್ದ ಲಕ್ಷಾಂತರ ಡಾಲರ್‌ಗಳನ್ನು ಕಳೆದುಕೊಂಡಿದ್ದಾರೆ.

ಜಮೈಕಾದ ಹಣಕಾಸು ತನಿಖಾ ಇಲಾಖೆ ಮತ್ತು ಹಣಕಾಸು ಸೇವಾ ಆಯೋಗವು ಜಂಟಿಯಾಗಿ ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಉಸೇನ್ ಬೋಲ್ಟ್‌ ಅವರಿಂದ ಹಣ ನಾಪತ್ತೆಯಾಗಿರುವ ಖಾತೆಯು ಸ್ಟಾಕ್ಸ್ ಅಂಡ್ ಸೆಕ್ಯುರಿಟೀಸ್ ಲಿಮಿಟೆಡ್ (SSL) ನಲ್ಲಿದೆ. ಈ ಸಂಬಂಧ SSL ಪೊಲೀಸರನ್ನೂ ಸಂಪರ್ಕಿಸಿದೆ. ಬೋಲ್ಟ್ 2012ರಲ್ಲಿ ಜಮೈಕಾದ ಬ್ರೋಕರೇಜ್ ಸಂಸ್ಥೆ ಸ್ಟಾಕ್ಸ್ ಮತ್ತು ಸೆಕ್ಯುರಿಟೀಸ್ ಲಿಮಿಟೆಡ್‌ನಲ್ಲಿ ಖಾತೆಯನ್ನು ತೆರೆದಿದ್ದರು.

ಬೋಲ್ಟ್ ಅವರ ವಕೀಲ ಗಾರ್ಡನ್ ಅವರು, 'ಉಸೇನ್ ಬೋಲ್ಟ್ ಅವರ ಖಾತೆಯಲ್ಲಿದ್ದ $ 12.7 ಮಿಲಿಯನ್ (ಸುಮಾರು 98 ಕೋಟಿ ರೂ.) ವಂಚನೆ ನಡೆದಿದೆ. ಇದು ಅವರ ಇದುವರೆಗಿನ ಗಳಿಕೆಯ ಹಣ ಮತ್ತು ಅವರ ಸಂಪೂರ್ಣ ಜೀವನ ಉಳಿತಾಯ ಹಾಗೂ ಪಿಂಚಣಿ ಹಣವಿತ್ತು ಜನವರಿ 11 ರಂದು ಉಸೇನ್ ಬೋಲ್ಟ್ ವಂಚನೆಯ ಬಗ್ಗೆ ತಿಳಿದಿದೆ' ಎಂದಿದ್ದಾರೆ.

  • Deafening Silence

    — Usain St. Leo Bolt (@usainbolt) January 19, 2023 " class="align-text-top noRightClick twitterSection" data=" ">

ಸ್ಟಾಕ್ಸ್ ಅಂಡ್ ಸೆಕ್ಯುರಿಟೀಸ್ ಲಿಮಿಟೆಡ್ ಹಣಕಾಸು ಸಂಸ್ಥೆ ಜನವರಿ 12 ರಂದು ತಮ್ಮ ಮಾಜಿ ಉದ್ಯೋಗಿ ಕಂಪನಿಯಲ್ಲಿ ವಂಚನೆ ಮಾಡಿದ್ದಾರೆ. ಕಂಪನಿ ಈ ಬಗ್ಗೆ ಕಾನೂನಿನ ಸಹಾಯವನ್ನು ತೆಗೆದುಕೊಳ್ಳುತ್ತಿದೆ. ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಈ ವಂಚನೆಯಲ್ಲಿ ಉಸೇನ್ ಬೋಲ್ಟ್ ಹೊರತಾಗಿ ಇತರರ ಖಾತೆಗಳೂ ಸೇರಿವೆ ಎಂದು ತಿಳಿಸಿದೆ.

ಉಸೇನ್ ಬೋಲ್ಟ್ ಈ ವಂಚನೆಯ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದು, ಅಗತ್ಯ ಕಾನೂನಾತ್ಮ ಸಲಹೆಗಳನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ವಂಚನೆಯ ನಂತರ ಬೋಲ್ಟ್ ಖಾತೆಯಲ್ಲಿ ಕೇವಲ 12 ಸಾವಿರ ಡಾಲರ್ (ಸುಮಾರು 10 ಲಕ್ಷ) ಬಾಕಿ ಇದೆಯಂತೆ. ಜಮೈಕಾದ ಹಣಕಾಸು ಸಚಿವ ನಿಗೆಲ್ ಕ್ಲಾರ್ಕ್ ಮಂಗಳವಾರ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇದು ಹಣಕಾಸು ವ್ಯವಹಾರದಲ್ಲಿ ಆತಂಕಕಾರಿ ಬೆಳವಣಿಗೆ ಆಗಿದೆ. ಎಲ್ಲ ಅಪರಾಧಿಗಳನ್ನು ನ್ಯಾಯಾಲಯದ ಮುಂದೆ ತರಲಾಗುವುದು ಎಂದಿದ್ದಾರೆ.

ಮೂರು ಬಾರಿ ಚಿನ್ನಗೆದ್ದಿರುವ ಬೋಲ್ಟ್​: ಬೋಲ್ಟ್ 3 ಒಲಿಂಪಿಕ್ಸ್‌ಗಳಲ್ಲಿ 8 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಎರಡು, 2012ರ ಲಂಡನ್ ಒಲಿಂಪಿಕ್ಸ್ ಮತ್ತು 2016ರ ರಿಯೊ ಒಲಿಂಪಿಕ್ಸ್‌ನಲ್ಲಿ 3-3 ಚಿನ್ನ ಗೆದ್ದಿದ್ದಾರೆ. 2017 ರಲ್ಲಿ ಲಂಡನ್ ವಿಶ್ವ ಚಾಂಪಿಯನ್‌ಶಿಪ್‌ನ ನಂತರ ಬೋಲ್ಟ್ ಸ್ಪ್ರಿಂಟಿಂಗ್‌ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, 2018 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಉಸೇನ್ ಬೋಲ್ಟ್ 45 ನೇ ಸ್ಥಾನದಲ್ಲಿದ್ದರು. ಅವರ ಸಂಭಾವನೆ ಸುಮಾರು 1 ಮಿಲಿಯನ್ ಡಾಲರ್ ಅಂದರೆ 8 ಕೋಟಿ ರೂಪಾಯಿ. ಅದೇ ಸಮಯದಲ್ಲಿ, ಜಾಹೀರಾತುಗಳಿಂದ ಅವರ ಗಳಿಕೆ 240 ಕೋಟಿ ರೂ. ಗಳಿಸಿದ್ದರು. ಬೋಲ್ಟ್ 100 ಮೀಟರ್ ಓಟವನ್ನು 9.58 ಸೆಕೆಂಡುಗಳಲ್ಲಿ ಮತ್ತು 200 ಮೀಟರ್ ಓಟವನ್ನು 19.19 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ್ದು ಇದುವರೆಗಿನ ವಿಶ್ವ ದಾಖಲೆಯಾಗಿದೆ.

ಇದನ್ನೂ ಓದಿ: WFI ಅಧ್ಯಕ್ಷರ ವಿರುದ್ಧ ಭಾರತೀಯ ಒಲಂಪಿಕ್​ ಅಸೋಸಿಯೇಷನ್​ ಅಧ್ಯಕ್ಷೆ ಪಿಟಿ ಉಷಾಗೆ ಪತ್ರ ಬರೆದ ಕುಸ್ತಿಪಟುಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.