ನವದೆಹಲಿ : ಭಾರತದ ಮಹಿಳಾ ಟೇಬಲ್ ಟೆನಿಸ್ ಜೋಡಿಯಾದ ಅರ್ಚನಾ ಗಿರೀಶ್ ಕಾಮತ್ ಮತ್ತು ಮನಿಕಾ ಬಾತ್ರಾ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಷನ್ ಮಂಗಳವಾರ ಬಿಡುಗಡೆ ಮಾಡಿರುವ ರ‍್ಯಾಂಕಿಂಗ್ ಪಟ್ಟಿಯಲ್ಲಿ 4ನೇ ಸ್ಥಾನ ಪಡೆಯುವ ಮೂಲಕ, ಈ ಕ್ರೀಡೆಯಲ್ಲಿ ಅಗ್ರ 5ರ ಪಟ್ಟಿ ಪ್ರವೇಶಿಸಿದ ಭಾರತ ಮೊದಲ ಟೇಬಲ್ ಟೆನಿಸ್ ಜೋಡಿ ಎನಿಸಿಕೊಂಡಿದ್ದಾರೆ.
ಈ ಹಿಂದೆ ಪುರುಷ ಅಥವಾ ಮಹಿಳೆಯರ್ ಸಿಂಗಲ್ಸ್ ಅಥವಾ ಡಬಲ್ಸ್ನಲ್ಲಿ ಈ ಸಾಧನೆಗೆ ಯಾವುದೇ ಪ್ಲೇಯರ್ ಪಾತ್ರರಾಗಿರಲಿಲ್ಲ. ಅರ್ಚನಾ ಮತ್ತು ಮನಿಕಾ ವುಮೆನ್ಸ್ ಡಬಲ್ಸ್ನಲ್ಲಿ 2 ಸ್ಥಾನ ಮೇಲೇರಿ 4ನೇ ರ‍್ಯಾಂಕಿಂಗ್ ಪಡೆದುಕೊಂಡಿದ್ದಾರೆ. ಕಳೆದ ವಾರ ದೋಹಾದಲ್ಲಿ ನಡೆದಿದ್ದ WTT ಸ್ಟಾರ್ ಕಂಟೆಂಡರ್ ಚಾಂಪಿಯನ್ಶಿಪ್ನಲ್ಲಿ ಈ ಜೋಡಿ ಸೆಮಿಫೈನಲ್ಸ್ನಲ್ಲಿ ಸೋಲು ಕಂಡಿತ್ತು.
ಆದರೆ, ಅಂತಿಮ ನಾಲ್ಕರ ಘಟಕ್ಕೆ ಪ್ರವೇಶಿಸಿದ್ದರಿಂದ ಕಂಚಿನ ಪದಕ ಪಡೆಯುವಲ್ಲಿ ಸಫಲವಾಗಿತ್ತು. ಅವರ ಈ ಸಾಧನೆ ಅವರ ರ‍್ಯಾಂಕಿಂಗ್ ಏರಿಕೆಗೆ ಕಾರಣವಾಗಿದೆ. ಚೀನಾದ ವಾಂಗ್ ಮನ್ಯು ಮತ್ತು ಸುನ್ ಯಿಂಗ್ಷಾ ವುಮೆನ್ಸ್ ಡಬಲ್ಸ್ನಲ್ಲಿ 4289 ಅಂಕ ಪಡೆದು ಅಗ್ರಸ್ಥಾನದಲ್ಲಿದ್ದಾರೆ. ಭಾರತೀಯ ಜೋಡಿ 1501 ಅಂಕ ಪಡೆದುಕೊಂಡಿದೆ. ಇನ್ನು ಮಹಿಳೆಯರ ಡಬಲ್ಸ್ನ ವೈಯಕ್ತಿಕ ರ‍್ಯಾಂಕಿಂಗ್‌ನಲ್ಲಿ ಅರ್ಚನಾ 10 ಮತ್ತು ಮನಿಕಾ 12ನೇ ಶ್ರೇಯಾಂಕ ಪಡೆದಿದ್ದಾರೆ.
ಇದನ್ನೂ ಓದಿ:ಅಗ್ರಸ್ಥಾನಿ ರಾಯಲ್ಸ್ ಸವಾಲೊಡ್ಡಲು ಆರ್ಸಿಬಿ ರೆಡಿ.. ಮತ್ತೊಂದು ಹೈ ಸ್ಕೋರ್ ಪಂದ್ಯಕ್ಕೆ ವಾಂಖೆಡೆ ಸಿದ್ಧ