ನವದೆಹಲಿ: ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್ನಲ್ಲಿ ಭಾರತದ ಮನು ಭಾಕರ್, ರಾಹಿ ಸರ್ನೋಬತ್ ಮತ್ತು ಚಿಂಕಿ ಯಾದವ್ ಅವರನ್ನೊಳಗೊಂಡ ಮಹಿಳಾ ತಂಡ 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಭಾರತೀಯ ತಂಡ 17-7 ಅಂಕಗಳ ಅಂತರದಿಂದ ಪೋಲೆಂಡ್ ತಂಡವನ್ನು ಮಣಿಸಿ ಈ ಸಾಧನೆ ಮಾಡಿದ್ದಾರೆ. ಇದು ಭಾರತ ತಂಡ ವಿಶ್ವಕಪ್ನಲ್ಲಿ ಗೆದ್ದಂತಹ 10ನೇ ಸ್ವರ್ಣ ಪದಕವಾಗಿದೆ. ವಿಶೇಷವೆಂದರೆ, ನಿನ್ನೆ ನಡೆದಿದ್ದ 25 ಮೀಟರ್ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಎಲ್ಲಾ ಮೂರು ಪದಗಳನ್ನು ಇವರು ತಮ್ಮದಾಗಿಸಿಕೊಂಡಿದ್ದರು. ಚಿಂಕಿ ಯಾದವ್ ಚಿನ್ನ ಗೆದ್ದರೆ, ಸರ್ನ್ಬೋಟ್ ಮತ್ತು ಭಾಕರ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಪದಕ ಸಾಧನೆ ಮಾಡಿದ್ದರು.
-
What a great performance by our Women’s 25m pistol team of @SarnobatRahi, @realmanubhaker and @ChinkiYadav4 to win the 🥇 at the @ISSF_Shooting World Cup after a 17-7 win over Poland.
— SAIMedia (@Media_SAI) March 25, 2021 " class="align-text-top noRightClick twitterSection" data="
Many congratulations!!! #JeetengeOlympics #Shooting #Tokyo2020 pic.twitter.com/aaR6P9RSre
">What a great performance by our Women’s 25m pistol team of @SarnobatRahi, @realmanubhaker and @ChinkiYadav4 to win the 🥇 at the @ISSF_Shooting World Cup after a 17-7 win over Poland.
— SAIMedia (@Media_SAI) March 25, 2021
Many congratulations!!! #JeetengeOlympics #Shooting #Tokyo2020 pic.twitter.com/aaR6P9RSreWhat a great performance by our Women’s 25m pistol team of @SarnobatRahi, @realmanubhaker and @ChinkiYadav4 to win the 🥇 at the @ISSF_Shooting World Cup after a 17-7 win over Poland.
— SAIMedia (@Media_SAI) March 25, 2021
Many congratulations!!! #JeetengeOlympics #Shooting #Tokyo2020 pic.twitter.com/aaR6P9RSre
ಇದಕ್ಕೂ ಮೊದಲು 50 ಮೀಟರ್ ರೈಫಲ್ 3 ಪೊಸಿಷನ್ ತಂಡದ ಇವೆಂಟ್ನಲ್ಲಿ ಭಾರತದ ಅಂಜುಮ್ ಮೌದ್ಗಿಲ್, ಶ್ರೇಯಾ ಸಕ್ಸೆನಾ ಮತ್ತು ಗಾಯತ್ರಿ ನಿತ್ಯಾನಂದಂ ತಂಡ ಪೋಲೆಂಡ್ ವಿರುದ್ಧವೇ 43-47ರಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು.
ವಿಶ್ವಕಪ್ನಲ್ಲಿ ಪ್ರಾಬಲ್ಯ ಸಾಧಿಸಿರುವ ಭಾರತ ತಂಡ 10 ಚಿನ್ನದ ಪದಕಗಳೊಂದಿಗೆ 21 ಪದಕ ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.
ಇದನ್ನೂ ಓದಿ: ವಿಶ್ವಕಪ್ ಶೂಟಿಂಗ್; 25 ಮೀಟರ್ ಪಿಸ್ತೂಲ್ ವಿಭಾಗದ ಮೂರೂ ಪದಕ ಭಾರತದ ಪಾಲು