ETV Bharat / sports

ಮುಂದಿನ ಒಲಿಂಪಿಕ್ಸ್‌ನಲ್ಲಿ ಟಿ20 ಕ್ರಿಕೆಟ್‌! 128 ವರ್ಷಗಳ ನಂತರ ಅವಕಾಶ: ಐಒಸಿ ಒಪ್ಪಿಗೆ ನೀಡಿದ 5 ಕ್ರೀಡೆಗಳು ಯಾವುವು ಗೊತ್ತೇ? - ಐಒಸಿಯಿಂದ ಐದು ಕ್ರೀಡೆಗಳಿಗೆ ಒಪ್ಪಿಗೆ

ಮುಂಬೈನಲ್ಲಿ ನಡೆದ ಅಂತರರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿಯ ಅಧಿವೇಶನದಲ್ಲಿ ಕ್ರಿಕೆಟ್ ಅ​ನ್ನು 2028ರ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಸೇರಿಸಲು ಒಪ್ಪಿಗೆ ನೀಡಲಾಗಿದೆ.

IOC votes
IOC votes
author img

By ETV Bharat Karnataka Team

Published : Oct 16, 2023, 3:40 PM IST

ಮುಂಬೈ (ಮಹಾರಾಷ್ಟ್ರ): 128 ವರ್ಷಗಳ ನಂತರ ಪ್ರತಿಷ್ಟಿತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್​ ಆಡಿಸಲಾಗುತ್ತಿದೆ. ಇಂದು ಮುಂಬೈನಲ್ಲಿ ನಡೆದ ಅಂತರರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿಯ (ಐಒಸಿ) 141ನೇ ಅಧಿವೇಶನದಲ್ಲಿ ಅಮೆರಿಕದ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಐದು ಹೆಚ್ಚುವರಿ ಕ್ರೀಡೆಗಳಾದ ಕ್ರಿಕೆಟ್, ಸ್ಕ್ವಾಷ್, ಬೇಸ್‌ಬಾಲ್, ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್ ಮತ್ತು ಲ್ಯಾಕ್ರೋಸ್ ಅನ್ನು ಸೇರಿಸಲು ಸರ್ವಾನುಮತದ ಒಪ್ಪಿಗೆ ನೀಡಲಾಯಿತು.

  • Baseball/softball, cricket (T20), flag football, lacrosse (sixes) and squash have been officially included as additional sports on the programme for the Olympic Games @LA28.

    The decision has been taken by the 141st Session of the International Olympic Committee.#IOCMumbai2023pic.twitter.com/mlaLjpgaaK

    — IOC MEDIA (@iocmedia) October 16, 2023 " class="align-text-top noRightClick twitterSection" data=" ">

1932ರ ನಂತರ ಲಾಸ್ ಏಂಜಲೀಸ್ 2028ರಲ್ಲಿ ಆಯೋಜನೆಗೊಂಡಿರುವ ಒಲಿಂಪಿಕ್ಸ್​ನಲ್ಲಿ ಟಿ20 ಮಾದರಿಯ ಕ್ರಿಕೆಟ್ ಆಡಿಸಲಾಗುತ್ತಿದೆ. ಒಲಿಂಪಿಕ್ ಗೇಮ್ಸ್ ಲಾಸ್ ಏಂಜಲೀಸ್ 2028ರ ಸಂಘಟನಾ ಸಮಿತಿಯಿಂದ ಈ ಆಟಗಳನ್ನು ಕೂಟದಲ್ಲಿ ಸೇರಿಸುವ ಪ್ರಸ್ತಾಪವನ್ನು ಮುಂಬೈನಲ್ಲಿ ನಡೆಯುತ್ತಿರುವ ಐಒಸಿ ಅಧಿವೇಶನದಲ್ಲಿ ಮಂಡಿಸಿದ್ದು, ಇಬ್ಬರು ಐಒಸಿ ಸದಸ್ಯರು ಪ್ರಸ್ತಾವನೆಯನ್ನು ವಿರೋಧಿಸಿದರು. ಒಬ್ಬರು ಮತದಾನದಿಂದ ದೂರವಿದ್ದರು. ಉಳಿದಂತೆ ಎಲ್ಲರೂ ಒಪ್ಪಿಗೆ ನೀಡಿದರು.

1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್​ ಅನ್ನು ಒಲಿಂಪಿಕ್ಸ್​​ನಲ್ಲಿ ಪರಿಚಯಿಸಲಾಗಿತ್ತು. ಇದರಲ್ಲಿ ಗ್ರೇಟ್ ಬ್ರಿಟನ್ ತಂಡವು ಫೈನಲ್‌ನಲ್ಲಿ ಫ್ರಾನ್ಸ್ ಮಣಿಸಿತ್ತು. ನಂತರ ಕ್ರಿಕೆಟ್ ಅ​ನ್ನು ಒಲಿಂಪಿಕ್ಸ್​ ಗೇಮ್ಸ್​ನಿಂದ ಕೈಬಿಡಲಾಯಿತು. ಇತ್ತೀಚೆಗೆ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಕ್ರಿಕೆಟ್ ಆಡಿಸಲಾಗುತ್ತಿದೆ.

ಟಿ20 ಕ್ರಿಕೆಟ್​ಗೆ ಜಗತ್ತಿನಾದ್ಯಂತ ಹೆಚ್ಚಿನ ಮನ್ನಣೆ ದೊರೆಯುತ್ತಿದೆ. ಎಲ್ಲಾ ದೇಶಗಳೂ ಟಿ20 ಲೀಗ್​ ಕ್ರಿಕೆಟ್​ ಆಡಿಸುತ್ತಿದ್ದಾರೆ. ಅಮೆರಿಕದಲ್ಲೂ ಈ ವರ್ಷದಿಂದ ಮೇಜರ್​ ಕ್ರಿಕೆಟ್​ ಲೀಗ್​ ಆರಂಭವಾಗಿದ್ದು, ಅಲ್ಲಿಯೂ ಕ್ರಿಕೆಟ್​ ಒಲವು ಮೂಡಿದೆ. ಒಲಿಂಪಿಕ್ಸ್​​ನಲ್ಲಿ ಕ್ರಿಕೆಟ್​ ಸೇರ್ಪಡೆಗೊಳ್ಳುವುದರಿಂದ ಜನಪ್ರಿಯತೆಯೂ ಹೆಚ್ಚಾಗಲಿದೆ.

ಐಒಸಿ ಮೀಡಿಯಾ ತನ್ನ ಎಕ್ಸ್​​ ಆ್ಯಪ್​ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದೆ. "ಒಲಿಂಪಿಕ್ ಗೇಮ್ಸ್ ಲಾಸ್ ಏಂಜಲೀಸ್ 2028ರ ಸಂಘಟನಾ ಸಮಿತಿಯ ಪ್ರಸ್ತಾವನೆಯನ್ನು @LA28 (ಲಾಸ್ ಏಂಜಲೀಸ್28) ಕಾರ್ಯಕ್ರಮದಲ್ಲಿ ಐದು ಹೊಸ ಕ್ರೀಡೆಗಳನ್ನು ಸೇರಿಸಲು ಐಒಸಿ ಅಧಿವೇಶನ ಅಂಗೀಕರಿಸಿದೆ. LA28ನಲ್ಲಿ ಅಸೆಬಾಲ್/ಸಾಫ್ಟ್‌ಬಾಲ್, ಕ್ರಿಕೆಟ್ (ಟಿ20), ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್ (ಸಿಕ್ಸರ್‌ಗಳು) ಮತ್ತು ಸ್ಕ್ವಾಷ್‌ ಇರಲಿದೆ" ಎಂದು ಬರೆದುಕೊಂಡಿದೆ.

ಕ್ರಿಕೆಟ್​ ಸೇರ್ಪಡೆ ಸ್ವಾಗತಿಸಿದ ನೀತಾ ಅಂಬಾನಿ: ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷೆ ಮತ್ತು ಐಒಸಿ ಮಂಡಳಿಯ ಸದಸ್ಯೆ ನೀತಾ ಅಂಬಾನಿ ಒಲಿಂಪಿಕ್ಸ್​​ಗೆ ಕ್ರಿಕೆಟ್​ ಸೇರ್ಪಡೆಯನ್ನು ಸ್ವಾಗತಿಸಿದ್ದಾರೆ. "ಐಒಸಿ ಸದಸ್ಯ, ಹೆಮ್ಮೆಯ ಭಾರತೀಯ ಮತ್ತು ಕಟ್ಟಾ ಕ್ರಿಕೆಟ್ ಅಭಿಮಾನಿಯಾಗಿ, ಐಒಸಿ ಸದಸ್ಯರು ಲಾಸ್ ಏಂಜಲೀಸ್ ಒಲಿಂಪಿಕ್ಸ್ 2028ಕ್ಕೆ ಕ್ರಿಕೆಟ್ ಅನ್ನು ಒಲಿಂಪಿಕ್ ಕ್ರೀಡೆಯನ್ನಾಗಿ ಸೇರಿಸಲು ಮತ ಚಲಾಯಿಸಿದ್ದಕ್ಕಾಗಿ ಸಂತೋಷವಾಗಿದೆ. ಕ್ರಿಕೆಟ್ ಜಾಗತಿಕವಾಗಿ ಅತ್ಯಂತ ಪ್ರೀತಿಪಾತ್ರ ಕ್ರೀಡೆಗಳಲ್ಲಿ ಒಂದು. ಎರಡನೇ ಅತಿ ಹೆಚ್ಚು ಪ್ರೇಕ್ಷಕರನ್ನು ಹೊಂದಿದ ಕ್ರೀಡೆಯಾಗಿದೆ. 1.4 ಶತಕೋಟಿ ಭಾರತೀಯರಿಗೆ, ಕ್ರಿಕೆಟ್ ಕೇವಲ ಕ್ರೀಡೆಯಲ್ಲ, ಅದು ಧರ್ಮವಾಗಿದೆ. ಹಾಗಾಗಿ ಮುಂಬೈನಲ್ಲಿ ನಡೆಯುತ್ತಿರುವ 141ನೇ ಐಒಸಿ ಅಧಿವೇಶನದಲ್ಲಿ ಈ ಐತಿಹಾಸಿಕ ನಿರ್ಣಯವನ್ನು ಅಂಗೀಕರಿಸಿದ್ದಕ್ಕಾಗಿ ನನಗೆ ಸಂತೋಷವಾಗಿದೆ" ಎಂದಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾ - ಶ್ರೀಲಂಕಾ ಮುಖಾಮುಖಿ: ಗೆಲುವಿನ ಖಾತೆ ತೆರೆಯುವ ಉತ್ಸಾಹದಲ್ಲಿ ಉಭಯ ತಂಡಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.