ETV Bharat / sports

2021 ವರ್ಷದ ಕ್ರೀಡಾಪಟು ಪ್ರಶಸ್ತಿ ಪಡೆದ ಭಾರತ ಹಾಕಿ ತಂಡದ ಗೋಲ್​ ಕೀಪರ್​ ಶ್ರೀಜೇಶ್​ - ದಿ ವರ್ಲ್ಡ್​ ಗೇಮ್ಸ್​ ಅಥ್ಲೀಟ್​ ಆಫ್​ ದ ಇಯರ್ 2021

ಭಾರತೀಯ ಗೋಲ್​ ಕೀಪರ್ ಈ ಪ್ರಶಸ್ತಿ ಪಡೆದ 2ನೇ ಭಾರತೀಯ ಕ್ರೀಡಾಪಟು ಎಂಬ ಶ್ರೇಯಕ್ಕೂ ಪಾತ್ರರಾದರು. ಇದಕ್ಕೂ ಮೊದಲು 2019ರಲ್ಲಿ ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್​ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದರು.

India's PR Sreejesh bags The World Games Athlete of the Year 2021 title
ವರ್ಷದ ಕ್ರೀಡಾಪಟು ಪ್ರಶಸ್ತಿ ಪಡೆದ ಹಾಕಿ ಗೋಲ್​ಕೀಪರ್​ ಶ್ರೀಜೇಶ್
author img

By

Published : Jan 31, 2022, 9:43 PM IST

ಲೌಸೇನ್​(ಸ್ವಿಟ್ಜರ್ಲೆಂಡ್): 2021ರ ಟೋಕಿಯೋ ಒಲಿಂಪಿಕ್ಸ್​ನಲ್ಲಿ 40 ವರ್ಷಗಳ ಬಳಿಕ ಪದಕ ಗೆಲ್ಲಲು ಪ್ರಮುಖ ಪಾತ್ರವಹಿಸಿದ ಹಾಕಿ ತಂಡದ ಗೋಲ್​ ಕೀಪರ್ ಪಿಆರ್​ ಶ್ರೀಜೇಶ್​ 'ದಿ ವರ್ಲ್ಡ್​ ಗೇಮ್ಸ್​ ಅಥ್ಲೀಟ್​ ಆಫ್​ ದ ಇಯರ್ 2021ರ​' ಪ್ರಶಸ್ತಿಗೆ ಭಾಜನರಾಗಿದ್ದಾರೆ.

TheWorldGames.org ನಡೆಸಿದ ವಿಶ್ವದಾದ್ಯಂತ ಅಭಿಮಾನಿಗಳು ಮತದಾನ ಮಾಡುವ ಈ ಸ್ಪರ್ಧೆಯಲ್ಲಿ 24 ಪ್ರಬಲ ಕ್ರೀಡಾಪಟುಗಳು ಸ್ಪರ್ಧಿಸಿದ್ದರು. ಇದರಲ್ಲಿ ಭಾರತದ ಹಾಕಿ ಗೋಲ್​ ಕೀಪರ್​ ಶ್ರೀಜೇಶ್​ 1,27, 647 ಮತಗಳನ್ನು ಪಡೆದು ಅಗ್ರಸ್ಥಾನ ಪಡೆದು ವರ್ಷದ ಕ್ರೀಡಾಪಟು ಪ್ರಶಸ್ತಿ ಪಡೆದರು. ವಿಶೇಷವೆಂದರೆ ಶ್ರೀಜೇಶ್​ ದ್ವಿತೀಯ ಸ್ಥಾನ ಪಡೆದ ಸ್ಪೇನ್​​ನ ರಾಕ್ ಕ್ಲೈಂಬರ್​ ಆಲ್ಬರ್ಟೊ ಗಿನ್ಸ್ ಲೋಪೆಜ್ ಗಿಂತ ದುಬ್ಬಟ್ಟು ಮತ ಪಡೆದು ವಿಜಯ ಸಾಧಿಸಿದರು. ಲೊಪೆಜ್​ 67,428 ಮತ ಪಡೆದಿದ್ದರು.

ಭಾರತೀಯ ಗೋಲ್​ ಕೀಪರ್ ಈ ಪ್ರಶಸ್ತಿ ಪಡೆದ 2ನೇ ಭಾರತೀಯ ಕ್ರೀಡಾಪಟು ಎಂಬ ಶ್ರೇಯಕ್ಕೂ ಪಾತ್ರರಾದರು. ಇದಕ್ಕೂ ಮೊದಲು 2019ರಲ್ಲಿ ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್​ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದರು.

  • A proud moment for all Indians, as PR Sreejesh has brought home The World Games Athlete of the Year 2021 award! 🙌🇮🇳

    Well deserved, champ. 👏🔥

    Share your thoughts regarding his win 👇 pic.twitter.com/sdxtfQuUWw

    — Hockey India (@TheHockeyIndia) January 31, 2022 " class="align-text-top noRightClick twitterSection" data=" ">

ಈ ಪ್ರಶಸ್ತಿ ಪಡೆದಿರುವುದು ಗೆದ್ದಿರುವುದಕ್ಕೆ ನನಗೆ ತುಂಬಾ ಗೌರವವೆನ್ನಿಸುತ್ತಿದೆ. ಈ ಪ್ರಶಸ್ತಿಗೆ ನನ್ನನ್ನು ನಾಮ ನಿರ್ಧೇಶನ ಮಾಡಿದ್ದಕ್ಕೆ ಮೊದಲುಅಂತಾರಾಷ್ಟ್ರೀಯ ಹಾಕಿ ಫೆಡರೇಶನ್​ಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಎರಡನೆಯದಾಗಿ ನನಗೆ ಮತ ನೀಡಿದ ವಿಶ್ವದ ಭಾರತೀಯ ಹಾಕಿ ಅಭಿಮಾನಿಗಳಿಗೆ ಧನ್ಯವಾಗಳನ್ನು ತಿಳಿಸುತ್ತೇನೆ ಎಂದು ಶ್ರೀಜೇಶ್ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

  • 🚨 BIG NEWS 🚨

    Our goalkeeper, "𝗧𝗵𝗲 𝗪𝗮𝗹𝗹", PR Sreejesh, has won the World Games Athlete of the Year 2021. 👏👏

    Many Congratulations! pic.twitter.com/2fMze5lkU1

    — Odisha Sports (@sports_odisha) January 31, 2022 " class="align-text-top noRightClick twitterSection" data=" ">

"ನಾಮನಿರ್ದೇಶನಗೊಳ್ಳುವ ಮೂಲಕ ನಾನು ನನ್ನ ಪಾತ್ರವನ್ನು ಮಾಡಿದ್ದೆ, ಆದರೆ ಉಳಿದದ್ದನ್ನು ಅಭಿಮಾನಿಗಳು ಮತ್ತು ಹಾಕಿ ಪ್ರೇಮಿಗಳು ಮಾಡಿದ್ದಾರೆ. ಆದ್ದರಿಂದ, ಈ ಪ್ರಶಸ್ತಿ ಅವರಿಗೆ ಸಲ್ಲುತ್ತದೆ, ಮತ್ತು ಅವರು ನನಗಿಂತ ಹೆಚ್ಚು ಈ ಪ್ರಶಸ್ತಿಗೆ ಅರ್ಹರು ಎಂದು ನಾನು ಭಾವಿಸುತ್ತೇನೆ. ಅಲ್ಲದೆ ಇದು ಭಾರತೀಯ ಹಾಕಿಗೆ ಬಹುದೊಡ್ಡ ಕ್ಷಣವಾಗಿದೆ ಏಕೆಂದರೆ ಹಾಕಿ ಸಮುದಾಯದ ಪ್ರತಿಯೊಬ್ಬರೂ, ಪ್ರಪಂಚದಾದ್ಯಂತದ ಎಲ್ಲಾ ಹಾಕಿ ಫೆಡರೇಶನ್‌ಗಳು ನನಗೆ ಮತ ಹಾಕಿವೆ, ಆದ್ದರಿಂದ ಹಾಕಿ ಕುಟುಂಬದಿಂದ ಇಷ್ಟು ಬೆಂಬಲವನ್ನು ನೋಡುವುದಕ್ಕೆ ತುಂಬಾ ಸಂತೋಷವಾಗಿದೆ" ಎಂದು 244 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಅನುಭವಿ ಶ್ರೀಜೇಶ್ ಹೇಳಿದ್ದಾರೆ ಎಂದು ಎಫ್‌ಐಎಚ್ ಉಲ್ಲೇಖಿಸಿದೆ.

ಇದನ್ನೂ ಓದಿ:ATP Ranking: ಜೊಕೊವಿಕ್​ಗೆ ಅಗಸ್ಥಾನ, 5 ರಲ್ಲಿ ನಡಾಲ್ ; 21 ವರ್ಷಗಳಲ್ಲೇ ಭಾರಿ ಕುಸಿತ ಕಂಡ ಫೆಡೆರರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.