ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಭಾರತದ ಅಗ್ರ ಡಿಸ್ಕಸ್ ಥ್ರೋವರ್ ಕಮಲ್ ಪ್ರೀತ್‌ಕೌರ್ ಅವರು ನಿಷೇಧಿತ ವಸ್ತು ಸ್ಟಾನೊಜೋಲೋಲ್ ಬಳಸಿದ ಕಾರಣಕ್ಕಾಗಿ ಮೂರು ವರ್ಷಗಳ ನಿಷೇಧಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಅಥ್ಲೆಟಿಕ್ಸ್ ಇಂಟೆಗ್ರಿಟಿ ಯೂನಿಟ್ (ಎಐಯು) ಇದನ್ನು ಪ್ರಕಟಿಸಿದೆ. ಕಮಲ್ ಪ್ರೀತ್ ಮೇಲೆ ಹೇರಲಾಗಿರುವ ನಿಷೇಧವು ಮಾರ್ಚ್ 29, 2022 ರಿಂದ ಜಾರಿಗೆ ಬರಲಿದೆ.
ಮಾರ್ಚ್ 7 ರಂದು ಪಟಿಯಾಲಾದಲ್ಲಿ ಕಮಲ್ ಪ್ರೀತ್ ಅವರ ಮಾದರಿಯನ್ನು ಪರೀಕ್ಷೆಗೆ ತೆಗೆದುಕೊಂಡಿತ್ತು. ಎಐಯು(AIU) ಅವರಿಗೆ ಸ್ಟೀರಾಯ್ಡ್ ಬಳಕೆಯ ಪರೀಕ್ಷೆ ಮಾಡಿದ ನಂತರ ಮೇ ತಿಂಗಳಲ್ಲಿ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಗಿತ್ತು. 'ನಿಷೇಧಿತ ವಸ್ತುವಿನ (Stanozolol) ಉಪಸ್ಥಿತಿ/ಬಳಕೆಗಾಗಿ ಮಾಡಿದ ಕಾರಣ 2022 ರ ಮಾರ್ಚ್ 29 ರಿಂದ ಮೂರು ವರ್ಷಗಳ ಕಾಲ ಕಮಲ್ ಪ್ರೀತ್‌ಕೌರ್ ಅವರನ್ನು ಎಐಯು ನಿಷೇಧಿಸಿದೆ'.
ಟೋಕಿಯೋ ಗೇಮ್ಸ್ ಮುನ್ನ ಕಮಲ್‌ಪ್ರೀತ್ ಅವರು 65.06 ಮೀ ದೂರ ಡಿಸ್ಕಸ್ ಥ್ರೋ ಮಾಡಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಟೋಕಿಯೊ ಗೇಮ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಆರನೇ ಸ್ಥಾನ ಪಡೆದಿದ್ದರು.
ಇದನ್ನೂ ಓದಿ : ಹೃತಿಕ್ ಶೋಕೀನ್ ಮೊದಲ ಇಂಪ್ಯಾಕ್ಟ್ ಪ್ಲೇಯರ್.. ಬಿಸಿಸಿಐ ಹೊಸ ನಿಯಮ ಬಳಸಿಕೊಂಡ ಯುವ ಸ್ಪಿನ್ನರ್