ನವದೆಹಲಿ : ಮೂರನೇ ದಿನದ ಪಂದ್ಯದಲ್ಲಿ ಮಹಿಳೆಯರ ಸ್ಕೀಟ್ ಶೂಟಿಂಗ್ನಲ್ಲಿ ಕಂಚಿನ ಪದಕ ಗೆಲ್ಲುವ ಭಾರತದ ಶೂಟರ್ ಗಣೀಮತ್ ಸೆಖಾನ್ ಹಿರಿಯರ ವಿಭಾಗದಲ್ಲಿ ಭಾರತದಿಂದ ಮೊದಲ ಬಾರಿಗೆ ಐಎಸ್ಎಸ್ಎಫ್ ವಿಶ್ವಕಪ್ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ವಿಶ್ವ ಶೂಟರ್ ಪಟ್ಟಿಯಲ್ಲಿ 82 ನೇ ಸ್ಥಾನದಲ್ಲಿರುವ 20 ವರ್ಷದ ಸೆಖಾನ್, ಶಾಟ್‌ಗನ್ ರೇಂಜ್ನಲ್ಲಿ ಕಂಚಿನ ಪದಕ ಗೆಲ್ಲಲು ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್ನಲ್ಲಿ 40 ಗುಂಡುಗಳನ್ನು ಹಾರಿಸಿದರು.
ಆರು ಮಹಿಳೆಯರ ಫೈನಲ್‌ನ ಲಿಸ್ಟ್ಗಳ ಪೈಕಿ ಭಾರತದ ಕಾರ್ತಿಕಿ ಸಿಂಗ್ ಶಕ್ತಾವತ್ 32 ಗುಂಡುಗಳನ್ನು ಹೊಡೆದು ಆಕರ್ಷಕ ಆರಂಭದ ನಂತರ ನಾಲ್ಕನೇ ಸ್ಥಾನದಲ್ಲಿ ಉಳಿದರು.
ಓದಿ : ಪುರುಷ ಮತ್ತು ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ
ಎರಡನೇ ಸ್ಥಾನವನ್ನು ದೀರ್ಘಕಾಲ ಆಕ್ರಮಿಸಿಕೊಂಡಿದ್ದ ಸೆಖಾನ್ ಸತತವಾಗಿ ಮೂರು ಗುಂಡುಗಳನ್ನು ತಪ್ಪಿಸಿಕೊಂಡರು. ಗ್ರೇಟ್ ಬ್ರಿಟನ್‌ನ ಅಂಬರ್ ಹಿಲ್ ಮತ್ತು ಕಜಾಕಿಸ್ತಾನದ ಜೊಯಾ ಕ್ರಾವ್ಚೆಂಕೊ ಅವರಿಗೆ ಫೈನಲ್ ಪಂದ್ಯ ಬಿಟ್ಟುಕೊಟ್ಟರು. ರೋಚಕ ಫೈನಲ್‌ನಲ್ಲಿ ಚಿನ್ನದ ಪದಕಕ್ಕಾಗಿ ಇಬ್ಬರ ನಡುವೆ ಪೈಪೋಟಿ ನಡೆಯುತ್ತಿದೆ.
2018 ರಲ್ಲಿ, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಜೂನಿಯರ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದ ಸೆಖಾನ್, ಐಎಸ್ಎಸ್ಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಸ್ಕೀಟ್ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.