ಸೋಫಿಯಾ (ಬಲ್ಗೇರಿಯಾ): ವಿಶ್ವ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದ ಭಾರತದ ಗ್ರೀಕೋ ರೋಮನ್ ಕುಸ್ತಿಪಟು ನವೀನ್ ಕುಮಾರ್ ಅವರಿಗೆ ಎರಡನೇ ಬಾರಿ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
"ಬುಧವಾರ ತಂಡದ ಎಲ್ಲಾ ಸದಸ್ಯರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ನಮ್ಮೆಲ್ಲರ ವರದಿ ನೆಗೆಟಿವ್ ಬಂದಿದೆ. ನವೀನ್ಗೆ ಮತ್ತೆ ಸೋಂಕು ತಗುಲಿದೆ. ಅವರು ಈಗ ಇರುವ ಹೋಟೆಲ್ನಲ್ಲಿಯೇ ತಂಗಿದ್ದಾರೆ" ಎಂದು ಹರ್ಗೋಬಿಂದ್ ಹೇಳಿದರು.
ಗ್ರೀಕೋ ರೋಮನ್ ಸ್ಪರ್ಧೆಯು ಶನಿವಾರದಿಂದ ಪ್ರಾರಂಭವಾಗಲಿದ್ದು, ಈಗ 97 ಕೆಜಿ ಸ್ಪರ್ಧೆಯಲ್ಲಿ ಭಾರತವು ಪ್ರತಿನಿಧಿಸುವುದಿಲ್ಲ. ಭಾರತದ ಯಾವುದೇ ಗ್ರೀಕೋ ರೋಮನ್ ಕುಸ್ತಿಪಟುಗಳು ಟೋಕಿಯೊ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿಲ್ಲ.
ಇದನ್ನೂ ಓದಿ : ವಿಶ್ವಟೆಸ್ಟ್ ಚಾಂಪಿಯನ್ಶಿಪ್ಗೆ 22-24 ಸದಸ್ಯರ ತಂಡ ಪ್ರಕಟಿಸಲು ಚಿಂತನೆ