ETV Bharat / sports

ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್: ಹೋರಾಟ ಅಂತ್ಯಗೊಳಿಸಿದ ಭಾರತದ ಮಹಿಳಾ ತಂಡ - T World Cships

ಮಣಿಕಾ ಬಾತ್ರಾ, ಶ್ರೀಜಾ ಅಕುಲಾ ಮತ್ತು ದಿಯಾ ಚಿತಾಲೆ ಮೂವರು ತಮ್ಮ ಟೇಬಲ್ ಟೆನಿಸ್ ಸಿಂಗಲ್ಸ್​ನಲ್ಲಿ ಸೋತಿದ್ದಾರೆ. ಈ ಮೂಲಕ ಭಾರತದ ಮಹಿಳಾ ತಂಡ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್​ನಿಂದ ಹೊರಬಂದಿದೆ.

ಭಾರತದ ಮಹಿಳಾ ತಂಡ
ಭಾರತದ ಮಹಿಳಾ ತಂಡ
author img

By

Published : Oct 5, 2022, 7:27 PM IST

ಚೆಂಗ್ಡು: ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್​ನಿಂದ ಭಾರತದ ಮಹಿಳಾ ತಂಡ ಬುಧವಾರ ಹೊರಬಂದಿದೆ. ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ವಿರುದ್ಧ 0-3 ಸೆಟ್​ಗಳ ಅಂತರದಿಂದ ಭಾರತ ತಂಡ ಸೋಲನ್ನು ಅನುಭವಿಸಿದೆ. ಮಣಿಕಾ ಬಾತ್ರಾ, ಶ್ರೀಜಾ ಅಕುಲಾ ಮತ್ತು ದಿಯಾ ಚಿತಾಲೆ ಅವರು ಸಿಂಗಲ್ಸ್​​ನಲ್ಲಿ 16ನೇ ಸುತ್ತಿನಲ್ಲಿ ಸೋತಿದ್ದಾರೆ.

ಪಂದ್ಯದುದ್ದಕ್ಕೂ ಮನಿಕಾ ಅವರ ಆಟ ಕಳಪೆಯಿಂದ ಕೂಡಿದ್ದು, ಅವರು ವಿಶ್ವದ 22 ನೇ ಶ್ರೇಯಾಂಕಿತ ಚೆನ್ ಸ್ಜು-ಯು ವಿರುದ್ಧ ಸೋಲನ್ನು ಅನುಭವಿಸಬೇಕಾಯಿತು. ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ಮಿಶ್ರ ಡಬಲ್ಸ್ ಚಿನ್ನದ ಪದಕ ವಿಜೇತೆ ಶ್ರೀಜಾ ಅವರು, ವಿಶ್ವದ 35 ನೇ ಶ್ರೇಯಾಂಕಿತ ಚಿಂಗ್ ಐ-ಚಿಂಗ್ ಅವರ ವಿರುದ್ಧ ಸೋಲು ಅನುಭವಿಸಿದರು.

ಇದನ್ನೂ ಓದಿ: ಟಿ 20 ವಿಶ್ವಕಪ್​ಗೆ ಬುಮ್ರಾ ಬದಲಿಗೆ ಶಮಿ : ರಾಹುಲ್​ ದ್ರಾವಿಡ್​

ಚಿತಾಲೆ ಕಠಿಣ ಹೋರಾಟ ನಡೆಸಿ ಟೈನಲ್ಲಿ ಭಾರತಕ್ಕೆ ಮೊದಲ ಗೆಲುವು ತಂದುಕೊಟ್ಟರೂ, ಲಿಯು ಹ್ಸಿಂಗ್-ಯಿನ್ ವಿರುದ್ಧ ಸೋತರು. ಭಾರತ ತಂಡ ಜರ್ಮನಿಗೆ ಹೋಗುವಾಗ ಜೆಕ್ ಗಣರಾಜ್ಯ ಮತ್ತು ಈಜಿಪ್ಟ್ ಸೋಲಿಸಿತ್ತು. ಗುರುವಾರ ನಡೆಯಲಿರುವ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಪುರುಷರ ತಂಡ ಚೀನಾವನ್ನು ಎದುರಿಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.