ಗೋವಾ : ಲೀಗ್ನಲ್ಲಿ ಸತತ ಸೋಲುಗಳನ್ನು ಕಂಡು ನಂತರ ಪುಟಿದೆದ್ದು ಫೈನಲ್ ಪ್ರವೇಶಿಸಿದ್ದ ಬೆಂಗಳೂರು ಎಫ್‌ಸಿ ಇಂಡಿಯನ್ ಸೂಪರ್ ಲೀಗ್ನ ಪ್ರಶಸ್ತಿ ಸನಿಹದಲ್ಲಿ ಎಡವಿ ಬಿತ್ತು. ಬೆಂಗಳೂರು ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ 4-3 ಗೋಲುಗಳಿಂದ ಮಣಿಸಿದ ಎಟಿಕೆ ಮೋಹನ್ ಬಗಾನ್ ಟೀಂ ಈ ಸಲದ ಪ್ರತಿಷ್ಟಿತ ಐಎಸ್ಎಲ್ ಕಪ್ ಎತ್ತಿ ಹಿಡಿದು ಸಂಭ್ರಮಿಸಿತು.
ಗೋವಾದ ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆದ 2022-23ರ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಎಟಿಕೆ ಮೋಹನ್ ಬಗಾನ್ 4ನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು. ಎರಡನೇ ಬಾರಿಗೆ ಕಪ್ ಗೆಲ್ಲುವ ಆಸೆಯಲ್ಲಿದ್ದ ಸುನಿಲ್ ಛೆಟ್ರಿ ತಂಡಕ್ಕೆ ನಿರಾಸೆಯಾಗಿದೆ. ನಿಗದಿತ ಸಮಯದಲ್ಲಿ 2-2 ಗೋಲುಗಳಿಂದ ಸಮಬಲಗೊಂಡ ನಂತರ ಪೆನಾಲ್ಟಿ ಶೂಟೌಟ್ನಲ್ಲಿ ಮುನ್ನಡೆ ಸಾಧಿಸಿದ ಎಟಿಕೆ ಗೆಲುವಿನ ಕೇೆಕೆ ಹಾಕಿತು.
-
A moment to cherish as the Mariners lift their 1️⃣st #HeroISL 🏆#ATKMBBFC #HeroISLFinal #LetsFootball #ATKMohunBagan | @atkmohunbaganfc pic.twitter.com/9Ab5Yo1U2k
— Indian Super League (@IndSuperLeague) March 19, 2023 " class="align-text-top noRightClick twitterSection" data="
">A moment to cherish as the Mariners lift their 1️⃣st #HeroISL 🏆#ATKMBBFC #HeroISLFinal #LetsFootball #ATKMohunBagan | @atkmohunbaganfc pic.twitter.com/9Ab5Yo1U2k
— Indian Super League (@IndSuperLeague) March 19, 2023A moment to cherish as the Mariners lift their 1️⃣st #HeroISL 🏆#ATKMBBFC #HeroISLFinal #LetsFootball #ATKMohunBagan | @atkmohunbaganfc pic.twitter.com/9Ab5Yo1U2k
— Indian Super League (@IndSuperLeague) March 19, 2023
ಮುಂಬೈ ಸಿಟಿ ಎಫ್‌ಸಿಯನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದ ಬೆಂಗಳೂರು ಎಫ್‌ಸಿ ಮೇಲೆ ಹೆಚ್ಚು ನಿರೀಕ್ಷೆ ಇತ್ತು. ಅದರಂತೆ ಸುನಿಲ್ ಛೆಟ್ರಿ ಪಡೆ ನಿಗದಿತ ಸಮಯದಲ್ಲಿ ಪೈಪೋಟಿಯನ್ನೂ ನೀಡಿತು. ಬೆಂಗಳೂರಿನ ರಾಯ್ ಕೃಷ್ಣ ಅವರ ಕೈಗೆ ಬಾಲ್ ತಗುಲಿದ ಪರಿಣಾಮ 14ನೇ ನಿಮಿಷದಲ್ಲಿ ಎಟಿಕೆ ಪೆನಾಲ್ಟಿ ಕಿಕ್ನ ಅವಕಾಶ ಪಡೆಯಿತು. ಇದನ್ನು ಎಟಿಕೆಯ ಡಿಮಿಟ್ರಿ ಪೆಟ್ರಾಟೋಸ್ ಸದುಪಯೋಗಪಡಿಸಿಕೊಂಡು ಗೋಲ್ ದಾಖಲಿಸಿದರು. ಈ ಮೂಲಕ ಎಟಿಕೆ 1-0 ಯ ಮುನ್ನಡೆ ಪಡೆದುಕೊಂಡಿತು.
45+5ನೇ ನಿಮಿಷದಲ್ಲಿ ಬೆಂಗಳೂರಿಗೆ ಪೆನಾಲ್ಟಿ ಕಿಕ್ ಅವಕಾಶ ಸಿಕ್ಕಿತು. ಇದನ್ನು ಸುನಿಲ್ ಛೆಟ್ರಿ ಉತ್ತಮವಾಗಿ ಬಳಸಿಕೊಂಡರು. ಇದರಿಂದ ಸ್ಕೋರ್ ಸಮಬಲವಾಯಿತು. ಮೊದಲ ಫೆನಾಲ್ಟಿಗೆ ಕಾರಣವಾಗಿದ್ದ ರಾಯ್ ಕೃಷ್ಣ 78ನೇ ನಿಮಿಷದಲ್ಲಿ ಹೆಡರ್ ಮೂಲಕ ಬಿಎಫ್ಸಿಗೆ ಎರಡನೇ ಗೋಲ್ ಕೊಡುಗೆ ನೀಡಿದರು. ಇದರಿಂದ ಬೆಂಗಳೂರು ಕೊನೆಯ 12 ನಿಮಿಷ ಇರುವಂತೆ 2-1 ರಿಂದ ಮುನ್ನಡೆ ಪಡೆದುಕೊಂಡಿತು. ಆದರೆ 85ನೇ ನಿಮಿಷದಲ್ಲಿ ಎಟಿಕೆ ಬಿರುಸಿನ ಆಟಕ್ಕೆ ಮುಂದಾಗಿ ವಿವಾದಾತ್ಮಕ ಪೆನಾಲ್ಟಿ ಅವಕಾಶವನ್ನು ಮಾಡಿಕೊಂಡು ಗೋಲ್ ದಾಖಲಿಸಿ ಸಮಬಲ ಸಾಧಿಸಿತು. ಕೊನೆಯ ಐದು ನಿಮಿಷ ಬಿರುಸಿನ ಆಟ ನಡೆದರೂ ಎರಡೂ ತಂಡದಿಂದ ಮುನ್ನಡೆ ಪಡೆಯಲಾಗಲಿಲ್ಲ.
-
Scenes of Jubilation from the @atkmohunbaganfc camp after winning their maiden #HeroISL 🏆✨ (1/3)#ATKMBBFC #HeroISLFinal #LetsFootball #ATKMohunBagan pic.twitter.com/S0kyyFdclT
— Indian Super League (@IndSuperLeague) March 18, 2023 " class="align-text-top noRightClick twitterSection" data="
">Scenes of Jubilation from the @atkmohunbaganfc camp after winning their maiden #HeroISL 🏆✨ (1/3)#ATKMBBFC #HeroISLFinal #LetsFootball #ATKMohunBagan pic.twitter.com/S0kyyFdclT
— Indian Super League (@IndSuperLeague) March 18, 2023Scenes of Jubilation from the @atkmohunbaganfc camp after winning their maiden #HeroISL 🏆✨ (1/3)#ATKMBBFC #HeroISLFinal #LetsFootball #ATKMohunBagan pic.twitter.com/S0kyyFdclT
— Indian Super League (@IndSuperLeague) March 18, 2023
ನಿಗದಿತ ಸಮಯದಲ್ಲಿ ಸಮಬಲದಲ್ಲಿ ಪಂದ್ಯ ಅಂತ್ಯವಾದ ಕಾರಣ ಪೆನಾಲ್ಟಿ ಶೂಟೌಟ್ನ ಮೊರೆ ಹೋಗಬೇಕಾಯಿತು. 5 ಅವಕಾಶಗಳಲ್ಲಿ ಬೆಂಗಳೂರು ಮೂರಲ್ಲಿ ಮಾತ್ರ ಯಶ ಸಾಧಿಸಿತು. ಬ್ರುನೊ ರೆಮಿರೆಸ್ ಮತ್ತು ಪಾಬ್ಲೊ ಗೋಲ್ ಗಳಿಸುವಲ್ಲಿ ವಿಫಲರಾದರು. ನಾಲ್ಕು ಅವಕಾಶಗಳಲ್ಲಿ ಗೋಲ್ಗಳಿಸಿದ ಎಟಿಕೆ ಮೋಹನ್ ಬಗಾನ್ ನಾಲ್ಕನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿತು. ವಿಜೇತ ಎಟಿಕೆ ಮೋಹನ್ ಬಗಾನ್ 6 ಕೋಟಿ ರೂಪಾಯಿ ಬಹುಮಾನ ಪಡೆದುಕೊಂಡರೆ, ರನ್ನರ್ ಅಪ್ ಬೆಂಗಳೂರು ಎಫ್‌ಸಿ 2.5 ಕೋಟಿ ರೂಪಾಯಿ ಗೆದ್ದುಕೊಂಡಿತು.
ಇದನ್ನೂ ಓದಿ: ಸೋಫಿ ಡಿವೈನ್ ಹೊಡೆತಕ್ಕೆ 94 ಮೀಟರ್ ದೂರ ಹೋಗಿ ಬಿದ್ದ ಚೆಂಡು! ಮಹಿಳಾ ಕ್ರಿಕೆಟ್ನಲ್ಲಿ ಸಂಚಲನ