ETV Bharat / sports

ಐಎಸ್​ಎಸ್​ಎಫ್​ ಅಧ್ಯಕ್ಷರ ಕಪ್​ ಗೆದ್ದ ರುದ್ರಂಕ್ಷ್ ಪಾಟೀಲ್: ಪ್ಯಾರಿಸ್​ ಒಲಿಂಪಿಕ್ಸ್​ಗೆ ನೇರ ಅರ್ಹತೆ - ISSF Presidents Cup

ಭಾರತದ ಟಾಪ್​ ಶೂಟರ್​ಗಳಲ್ಲಿ ಒಬ್ಬರಾದ ರುದ್ರಂಕ್ಷ್ ಪಾಟೀಲ್ ಅವರು ಈಜಿಪ್ಟ್‌ನ ಕೈರೋದಲ್ಲಿ ನಡೆದ ಇಂಟರ್​ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್​ಎಸ್​ಎಫ್​) ಅಧ್ಯಕ್ಷರ ಕಪ್​ಗೆ ಗುರಿ ಇಟ್ಟು ಚಿನ್ನ ಗೆದ್ದರು.

indian-shooter-rudrankksh-patil
ಐಎಸ್​ಎಸ್​ಎಫ್​ ಅಧ್ಯಕ್ಷರ ಕಪ್​ ಗೆದ್ದ ರುದ್ರಂಕ್ಷ್ ಪಾಟೀಲ್​
author img

By

Published : Dec 4, 2022, 9:03 AM IST

ಕೈರೋ(ಈಜಿಪ್ಟ್): ಭಾರತದ ಶೂಟರ್ ರುದ್ರಂಕ್ಷ್ ಪಾಟೀಲ್ ಅವರು ಈಜಿಪ್ಟ್‌ನ ಕೈರೋದಲ್ಲಿ ನಡೆದ ಇಂಟರ್​ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್​ಎಸ್​ಎಫ್​) ಅಧ್ಯಕ್ಷರ ಕಪ್ ಗೆಲ್ಲುವ ಮೂಲಕ ಭರ್ಜರಿಯಾಗಿ 2022 ರ ಋತು ಮುಗಿಸಿದರು. 10 ಮೀಟರ್ ರೈಫಲ್ ಪ್ಲೇ ಆಫ್‌ ಸ್ಪರ್ಧೆಯಲ್ಲಿ ಇಟಲಿಯ ಡ್ಯಾನಿಲೊ ಸೊಲ್ಲಜ್ಜೊರನ್ನು 16- 8 ಅಂಕಗಳಿಂದ ಪರಾಭವಗೊಳಿಸಿದರು.

18 ವರ್ಷದ ರುದ್ರಂಕ್ಷ್ ಪಾಟೀಲ್ ಈ ಸಾಧನೆಯ ಮೂಲಕ 2024 ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆದರು. ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ, ತೇಜಸ್ವಿನಿ ಸಾವಂತ್, ಮಾನವಜಿತ್ ಸಿಂಗ್ ಸಂದು, ಓಂ ಪ್ರಕಾಶ್ ಮಿಥೆರ್ವಾಲ್ ಮತ್ತು ಅಂಕುರ್ ಮಿತ್ತಲ್ ನಂತರ ಈ ಸ್ಪರ್ಧೆಯಲ್ಲಿ ನೇರ ಅರ್ಹತೆ ಪಡೆದ ಭಾರತದ ಆರನೇ ಶೂಟರ್​ ಆಗಿದ್ದಾರೆ.

  • Rudranksh finishes 2022 with a bang 🔥

    TOPScheme Athlete @RudrankkshP wins the ISSF President's Cup after thumping Sollazo 16-8 in the 10m Rifle 🥇 play-off 😍

    Congratulations champ, all of 🇮🇳 is proud of you 🙌 pic.twitter.com/iROu1xSGn2

    — SAI Media (@Media_SAI) December 2, 2022 " class="align-text-top noRightClick twitterSection" data=" ">

ಐಎಸ್​ಎಸ್​ಎಫ್​ ಸದಸ್ಯ ಒಕ್ಕೂಟದ 43 ರಾಷ್ಟ್ರಗಳಲ್ಲಿ 42 ರಾಷ್ಟ್ರಗಳ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಈ ಸಾಲಿನ ವಿಶ್ವ ಶ್ರೇಯಾಂಕದ ಟಾಪ್​ 12 ಆಟಗಾರರೂ ಸ್ಪರ್ಧೆಯಲ್ಲಿದ್ದರು.

ಇದನ್ನೂ ಓದಿ: ಮೆಸ್ಸಿ ದಾಖಲೆ! ಆಸ್ಟ್ರೇಲಿಯಾ ಮಣಿಸಿ ಕ್ವಾರ್ಟರ್​ಫೈನಲ್​ ತಲುಪಿದ ಅರ್ಜೆಂಟೀನಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.