ಹಾಂಗ್‌ಝೌ (ಚೀನಾ): ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಸ್ಪರ್ಧಿಗಳು ಉತ್ತಮ ಆರಂಭ ಪಡೆದಿದ್ದಾರೆ. ಇಂದು ಶೂಟಿಂಗ್, ರೋವಿಂಗ್ ವಿಭಾಗಗಳಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದುಕೊಂಡರು. ಇಂದು ಮೊದಲು ಬೆಳ್ಳಿ ಗೆದ್ದ ಮಹಿಳಾ ಶೂಟರ್‌ಗಳ ತಂಡದ ಆಟಗಾರ್ತಿ ರಮಿತಾ ಜಿಂದಾಲ್ ವೈಯಕ್ತಿಕವಾಗಿ ಮತ್ತೊಂದು ಪದಕಕ್ಕೆ ಕೊರಳೊಡ್ಡಿದರು. ಜೂನಿಯರ್ ವಿಶ್ವ ಚಾಂಪಿಯನ್ ಆಗಿರುವ ರಮಿತಾ ವೈಯಕ್ತಿಕ 8 ಶೂಟರ್‌ಗಳಿದ್ದ ಅಂತಿಮ ಪ್ರಶಸ್ತಿ ಸುತ್ತಿನಲ್ಲಿ 230.1 ಅಂಕಗಳೊಂದಿಗೆ ಈ ಸಾಧನೆ ಮಾಡಿದರು.
-
Congratulations to Shooter Ramita on winning the #BronzeMedal in the 10M Air Rifle Event. Her second medal of the day after the Silver in the team event.
— Team India (@WeAreTeamIndia) September 24, 2023 " class="align-text-top noRightClick twitterSection" data="
Let us #Cheer4india #WeAreTeamIndia | #IndiaAtAG22 pic.twitter.com/xZn34hdalb
">Congratulations to Shooter Ramita on winning the #BronzeMedal in the 10M Air Rifle Event. Her second medal of the day after the Silver in the team event.
— Team India (@WeAreTeamIndia) September 24, 2023
Let us #Cheer4india #WeAreTeamIndia | #IndiaAtAG22 pic.twitter.com/xZn34hdalbCongratulations to Shooter Ramita on winning the #BronzeMedal in the 10M Air Rifle Event. Her second medal of the day after the Silver in the team event.
— Team India (@WeAreTeamIndia) September 24, 2023
Let us #Cheer4india #WeAreTeamIndia | #IndiaAtAG22 pic.twitter.com/xZn34hdalb
19 ವರ್ಷದ ರಮಿಕಾ ಈ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದರು. ಆದರೆ ಅಂತಿಮವಾಗಿ ಕಂಚಿಗೆ ತೃಪ್ತಿಪಟ್ಟುಕೊಂಡರು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ ಮತ್ತೋರ್ವ ಭಾರತೀಯ ಆಟಗಾರ್ತಿ ಮೆಹುಲ್ 208.43 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದು ಪದಕ ವಂಚಿತರಾದರು.
ಇದಕ್ಕೂ ಮುನ್ನ ರಮಿತಾ, ಮೆಹುಲ್ ಘೋಷ್ ಮತ್ತು ಆಶಿ ಚೌಕ್ಸೆಯ ಮೂವರಿದ್ದ ಮಹಿಳೆಯರ ತಂಡವು 10 ಮೀಟರ್ ಏರ್ ರೈಫಲ್ ಟೀಂ ಈವೆಂಟ್‌ನಲ್ಲಿ ಒಟ್ಟು 1,886 ಅಂಕಗಳೊಂದಿಗೆ ಬೆಳ್ಳಿ ಪಡೆದರು. ಚೀನಾ 1896.6 ಅಂಕಗಳೊಂದಿಗೆ ಚಿನ್ನ ಗೆದ್ದರೆ, ಮಂಗೋಲಿಯಾ ಕಂಚು ಗೆದ್ದುಕೊಂಡಿತು.
-
Many congratulations to our Shooters Ramita, @GhoshMehuli and Ashi Chouksey on winning the #SilverMedal in the 10m Air Rifle Women’s Team Event.
— Team India (@WeAreTeamIndia) September 24, 2023 " class="align-text-top noRightClick twitterSection" data="
Let’s #Cheer4india 🇮🇳 #WeAreTeamIndia | #IndiaAtAG22 pic.twitter.com/iRrJaRFOld
">Many congratulations to our Shooters Ramita, @GhoshMehuli and Ashi Chouksey on winning the #SilverMedal in the 10m Air Rifle Women’s Team Event.
— Team India (@WeAreTeamIndia) September 24, 2023
Let’s #Cheer4india 🇮🇳 #WeAreTeamIndia | #IndiaAtAG22 pic.twitter.com/iRrJaRFOldMany congratulations to our Shooters Ramita, @GhoshMehuli and Ashi Chouksey on winning the #SilverMedal in the 10m Air Rifle Women’s Team Event.
— Team India (@WeAreTeamIndia) September 24, 2023
Let’s #Cheer4india 🇮🇳 #WeAreTeamIndia | #IndiaAtAG22 pic.twitter.com/iRrJaRFOld
ಇದನ್ನೂ ಓದಿ: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಶುರು: 2 ಬೆಳ್ಳಿ, 1 ಕಂಚು, ಫೈನಲ್‌ಗೇರಿದ ಮಹಿಳಾ ಕ್ರಿಕೆಟ್ ತಂಡ