ಕಾಲಿ (ಕೊಲಂಬಿಯಾ): ವಿಶ್ವ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮಿಶ್ರ 4x400 ರಿಲೇ ಫೈನಲ್‌ನಲ್ಲಿ ಭಾರತ ತಂಡ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದೆ. ಭಾರತ್ ಶ್ರೀಧರ್, ಪ್ರಿಯಾ ಮೋಹನ್, ಕಪಿಲ್ ಮತ್ತು ರೂಪಲ್ ಚೌಧರಿ ಅವರಿದ್ದ ತಂಡ 3 ನಿಮಿಷ 17.67 ಸೆಕೆಂಡ್ಗಳಲ್ಲಿ ಗುರಿ ತಲುಪಿ ಈ ಸಾಧನೆ ಮಾಡಿದರು. ಅಮೆರಿಕದ ಕ್ರೀಡಾಪಟುಗಳು ಚಿನ್ನದ ಪದಕ ಗೆದ್ದರು. ಈ ಹಿಂದೆ 3 ನಿಮಿಷ 19.62 ಸೆಕೆಂಡ್ಗಳಲ್ಲಿ ನಿರ್ಮಿಸಿದ್ದ ತನ್ನದೇ ದಾಖಲೆಯನ್ನು ಭಾರತ ಇದೀಗ ಮೆಟ್ಟಿ ನಿಂತಿದೆ. ವಿಶ್ವ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ರಿಲೇ ಸ್ಪರ್ಧೆಯಲ್ಲಿ ಭಾರತಕ್ಕಿದು ಸತತ ಎರಡನೇ ಪದಕವಾಗಿದೆ. 2021ರಲ್ಲಿ ನೈರೋಬಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಕಂಚು ಗೆದ್ದಿದ್ದರು.
-
India wins SILVER 🥈at the World #U20Athletics Championships 2022 in the Mixed 4*400m Relay with a timing of 3:17.76.
— Dept of Sports MYAS (@IndiaSports) August 3, 2022 " class="align-text-top noRightClick twitterSection" data="
Congratulations to #Sridhar, #Priya, #Kapil & #Rupal!! pic.twitter.com/60A0DKXgtI
">India wins SILVER 🥈at the World #U20Athletics Championships 2022 in the Mixed 4*400m Relay with a timing of 3:17.76.
— Dept of Sports MYAS (@IndiaSports) August 3, 2022
Congratulations to #Sridhar, #Priya, #Kapil & #Rupal!! pic.twitter.com/60A0DKXgtIIndia wins SILVER 🥈at the World #U20Athletics Championships 2022 in the Mixed 4*400m Relay with a timing of 3:17.76.
— Dept of Sports MYAS (@IndiaSports) August 3, 2022
Congratulations to #Sridhar, #Priya, #Kapil & #Rupal!! pic.twitter.com/60A0DKXgtI
ಇದನ್ನೂ ಓದಿ: ಕಾಮನ್ವೆಲ್ತ್ ಗೇಮ್ಸ್: ಕಂಚು ಗೆದ್ದ ಭಾರತದ ವೇಟ್ ಲಿಫ್ಟರ್ ಲವ್‌ಪ್ರೀತ್ ಸಿಂಗ್