ಟೆರಾಸ್ಸಾ (ಸ್ಪೇನ್) : ಇಲ್ಲಿ ನಡೆಯುತ್ತಿರುವ 100ನೇ ವಾರ್ಷಿಕೋತ್ಸವದ ಸ್ಪ್ಯಾನಿಷ್ ಹಾಕಿ ಫೆಡರೇಷನ್ ಅಂತಾರಾಷ್ಟ್ರೀಯ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಸ್ಪೇನ್ ವಿರುದ್ಧ 1-2 ಅಂತರದಿಂದ ಭಾರತ ಪುರುಷರ ಹಾಕಿ ತಂಡ ಸೋಲು ಕಂಡಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ತಂಡವು ಹೋರಾಟದ ಪ್ರದರ್ಶನ ನೀಡಿದ್ದರೂ ಸಹಾ ಆತಿಥೇಯ ಸ್ಪೇನ್ ತಂಡವನ್ನು ಬಗ್ಗು ಬಡಿಯಲು ಸಾಧ್ಯವಾಗಲಿಲ್ಲ.
-
India put up a strong fight but eventually lost to the home team Spain in their opening match of the 100th Anniversary Spanish Hockey Federation-International Tournament.
— Hockey India (@TheHockeyIndia) July 25, 2023 " class="align-text-top noRightClick twitterSection" data="
We will comeback stronger in the next game 💪
🇮🇳 IND 1-2 ESP 🇪🇸 #HockeyIndia #IndiaKaGame pic.twitter.com/v0qnVWniPI
">India put up a strong fight but eventually lost to the home team Spain in their opening match of the 100th Anniversary Spanish Hockey Federation-International Tournament.
— Hockey India (@TheHockeyIndia) July 25, 2023
We will comeback stronger in the next game 💪
🇮🇳 IND 1-2 ESP 🇪🇸 #HockeyIndia #IndiaKaGame pic.twitter.com/v0qnVWniPIIndia put up a strong fight but eventually lost to the home team Spain in their opening match of the 100th Anniversary Spanish Hockey Federation-International Tournament.
— Hockey India (@TheHockeyIndia) July 25, 2023
We will comeback stronger in the next game 💪
🇮🇳 IND 1-2 ESP 🇪🇸 #HockeyIndia #IndiaKaGame pic.twitter.com/v0qnVWniPI
ಪೌ ಕುನಿಲ್ 11ನೇ ನಿಮಿಷದಲ್ಲಿ ಮತ್ತು ಜೋಕ್ವಿನ್ ಮೆನಿನಿ 33ನೇ ನಿಮಿಷದಲ್ಲಿ ಗೋಲು ಹೊಡೆದು ಸ್ಪೇನ್ ಶುಭರಾಂಭ ಮಾಡಲು ಕಾರಣರಾದರು. ಮೊದಲ ಕ್ವಾರ್ಟರ್‌ನಲ್ಲಿ ಭಾರತ ಪ್ರಬಲ ಒತ್ತಡದೊಂದಿಗೆ ಆಕ್ರಮಣಕಾರಿಯಾಗಿ ಪಂದ್ಯ ಪ್ರಾರಂಭಿಸಿತು. ಆದರೆ, ಮುನ್ನಡೆ ಸಾಧಿಸಲು ವಿಫಲವಾಯಿತು. ಮೊದಲ ಕ್ವಾರ್ಟರ್‌ನಲ್ಲಿ ಬಿಗಿ ಹಿಡಿತ ಸಾಧಿಸಿದ ಸ್ಪೇನ್ ತಾಳ್ಮೆ ಆಟವಾಡಿ ಪೌ ಕುನಿಲ್ 11ನೇ ನಿಮಿಷದಲ್ಲಿ ಹೊಡೆದ ಗೋಲಿನಿಂದ ಮುನ್ನಡೆ ಸಾಧಿಸಿತು.
ಬಳಿಕ ಎರಡನೇ ಕ್ವಾರ್ಟರ್‌ನಲ್ಲಿಯೂ ಭಾರತ ಪಂದ್ಯವನ್ನು ಸಮಬಲ ಮಾಡಿಕೊಳ್ಳುವ ಹುಡುಕಾಟದಲ್ಲಿ ಪ್ರತಿದಾಳಿಗಳನ್ನು ಪ್ರಾರಂಭಿಸಲು ಪ್ರಯತ್ನಿಸಿತು. ಆದರೆ, ಎರಡನೇ ಕ್ವಾರ್ಟರ್ ಗೋಲು ರಹಿತವಾಗಿ ಕೊನೆಗೊಂಡಿತ್ತು. ಈ ಮೂಲಕ ಅರ್ಧ ಸಮಯದಲ್ಲಿ ಸ್ಪೇನ್ 1-0 ಮುನ್ನಡೆ ಸಾಧಿಸಿತು. ಮೂರನೇ ಕ್ವಾರ್ಟರ್‌ನಲ್ಲಿ ಭಾರತದ ಗೋಲು ಹೊಡೆಯುವ ಪ್ರಯತ್ನವನ್ನು ಆರಂಭವಾಯಿತು. ಆದರೂ ರಕ್ಷಣಾ ಕ್ಷೇತ್ರದಲ್ಲಿ ಆತಿಥೇಯರು ಭಾರತವನ್ನು ತಡೆಯುವಲ್ಲಿ ಯಶಸ್ವಿಯಾದರು. ಈ ವೇಳೆ, ಜೋಕ್ವಿನ್ ಮೆನಿನಿ 33ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಸ್ಪೇನ್ 2-0 ಮುನ್ನಡೆ ಕಾಯ್ದುಕೊಂಡಿತ್ತು.
ಮತ್ತೊಂದೆಡೆ ಎರಡು ಗೋಲುಗಳಿಂದ ಹಿನ್ನಡೆಯಲ್ಲಿದ್ದ ಭಾರತವು ಸ್ಪೇನ್ ಮೇಲೆ ನಿರಂತರ ಒತ್ತಡ ಹೇರಲು ತನ್ನ ಗೇರ್ ಬದಲಾಯಿಸಿ ಪೆನಾಲ್ಟಿ ಕಾರ್ನರ್ ಅನ್ನು ಸಹ ಗೆದ್ದಿತು. ಆದರೆ ಪೆನಾಲ್ಟಿ ಲಾಭ ಪಡೆಯುವಲ್ಲಿ ಎಡವಿತು. ಹರ್ಮನ್‌ಪ್ರೀತ್ ಸಿಂಗ್ ಹೊಡೆದ ಗೋಲನ್ನು ಸ್ಪೇನ್ ಗೋಲ್‌ಕೀಪರ್ ಗೋಲು ತಡೆಯುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಸ್ಪೇನ್ ಎರಡು ಗೋಲುಗಳ ಮುನ್ನಡೆಯೊಂದಿಗೆ ಪಂದ್ಯದ ಅಂತಿಮ 15 ನಿಮಿಷಗಳನ್ನು ಪ್ರವೇಶಿಸಿತು. ಪಂದ್ಯಕ್ಕೆ ಮರಳುವ ಪ್ರಯತ್ನದಲ್ಲಿ ಭಾರತ ನಾಲ್ಕನೇ ಕ್ವಾರ್ಟರ್‌ನಲ್ಲಿ ಬಲಿಷ್ಠವಾಗಿ ಹೊರಬಂದಿತು. ಕೆಲವು ಉತ್ತಮ ಸ್ಕೋರಿಂಗ್ ಅವಕಾಶಗಳು ಇದ್ದರೂ ಮೊದಲ ಗೋಲು ಹುಡುಕಲು ಹೆಣಗಾಡಿತು. ಭಾರತ ಬ್ಯಾಕ್ ಟು ಬ್ಯಾಕ್ ಪೆನಾಲ್ಟಿ ಕಾರ್ನರ್‌ಗಳನ್ನು ಗೆದ್ದರೂ, ಅವುಗಳಲ್ಲಿ ಯಾವುದನ್ನೂ ಗೋಲನ್ನಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ.
ಆದರೂ ಧೃತಿಗೆಡದ ಭಾರತವು ಆತಿಥೇಯ ತಂಡದ ರಕ್ಷಣೆಯ ಮೇಲೆ ಒತ್ತಡವನ್ನು ಮುಂದುವರೆಸಿತು. ಈ ವೇಳೆ ನಾಯಕ ಹರ್ಮನ್‌ಪ್ರೀತ್ ಸಿಂಗ್ 59ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅನ್ನು ಪರಿವರ್ತಿಸಿ ಭಾರತದ ಪರ ಮೊದಲ ಗೋಲು ದಾಖಲಿಸಿದರು. ಆದರೆ ರಕ್ಷಣಾತ್ಮಕ ಆಟವಾಡಿದ ಸ್ಪೇನ್ ಭಾರತವನ್ನು ಮತ್ತೊಂದು ಗೋಲು ಗಳಿಸದಂತೆ ತಡೆಯಿತು. ಇದರಿಂದಾಗಿ ಪಂದ್ಯವು ಆತಿಥೇಯರ ಪರವಾಗಿ 2-1 ರಲ್ಲಿ ಕೊನೆಗೊಂಡಿತು. ಭಾರತ ತನ್ನ ಎರಡನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಸೆಣಸಾಡಲಿದೆ.
ಇದನ್ನೂ ಓದಿ : ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ