ETV Bharat / sports

ವುಡ್ಸ್​ ಬೇಗ ಚೇತರಿಸಿಕೊಳ್ಳಲೆಂದು ಭಾರತೀಯ ಗಾಲ್ಫರ್​ಗಳಾದ ಜೀವ್, ಲಹಿರಿ ಪ್ರಾರ್ಥನೆ - ಗಾಲ್ಫ್​ ನ್ಯೂಸ್​

ಲಾಸ್ ಏಂಜಲೀಸ್ ಉಪನಗರದ ಕಡಿದಾದ ರಸ್ತೆಮಾರ್ಗದಲ್ಲಿ ಅಪಘಾತಕ್ಕೀಡಾಗಿದ್ದರು. ವುಡ್ಸ್​ ತಮ್ಮ ಮ್ಯಾಂಗಲ್ಡ್​ ಎಸ್​ಯುವಿ ಕಾರನ್ನು ಸ್ವತಃ ತಾವೇ ಚಲಾಯಿಸುತ್ತಿದ್ದರಿಂದ ಅವರ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

author img

By

Published : Feb 24, 2021, 5:21 PM IST

ನವದೆಹಲಿ: ಬುಧವಾರ ಲೆಜೆಂಡರಿ ಗಾಲ್ಫರ್​ ಟೈಗರ್​ ವುಡ್ಸ್​ ಕಾರು ಅಪಘಾತಕ್ಕೊಳಗಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಅವರು ಆದಷ್ಟು ಬೇಗೆ ಚೇತರಿಸಿಕೊಳ್ಳಲೆಂದು ಕ್ರೀಡಾ ಜಗತ್ತಿನ ಜೊತೆಗೆ ಭಾರತೀಯ ಗಾಲ್ಫರ್​ಗಳಾದ ಜೀವ್​ ಮಿಲ್ಖಾ ಸಿಂಗ್ ಮತ್ತು ಅನಿರ್ಬನ್​ ಲಹಿರಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಲಾಸ್ ಏಂಜಲೀಸ್ ಉಪನಗರದ ಕಡಿದಾದ ರಸ್ತೆಮಾರ್ಗದಲ್ಲಿ ಅಪಘಾತಕ್ಕೀಡಾಗಿದ್ದರು. ವುಡ್ಸ್​ ಮ್ಯಾಂಗಲ್ಡ್​ ಎಸ್​ಯುವಿ ಕಾರನ್ನು ಸ್ವತಃ ತಾವೇ ಚಲಾಯಿಸುತ್ತಿದ್ದರಿಂದ ಅವರ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

  • Our thoughts and prayers are with @TigerWoods. We have seen you do impossible things in impossible situations in the past. Make this a routine recovery.

    — Jeev Milkha Singh (@JeevMilkhaSingh) February 24, 2021 " class="align-text-top noRightClick twitterSection" data=" ">

ವುಡ್ಸ್​ ಅಪಘಾತಕ್ಕೀಡಾಗುತ್ತಿದ್ದಂತೆ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​, ಬರಾಕ್ ಒಬಾಮ, ಪ್ರಸಿದ್ಧ ಬಾಕ್ಸರ್​ಮೈಕ್​ ಟೈಸನ್​ ಸೇರಿದಂತೆ ಪ್ರಸಿದ್ಧ ಕ್ರೀಡಾಪಟುಗಳು ಮತ್ತು ಗಣ್ಯರು ಈ ಘಟನೆಗೆ ದಿಗ್ಭ್ರಮೆ ವ್ಯಕ್ತಪಡಿಸಿದ ಶ್ರೇಷ್ಠ ಗಾಲ್ಫರ್​ ಬೇಗ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸಿದ್ದರು.

ಇನ್ನು ಭಾರತದ ಗಾಲ್ಫರ್​ ಆದ ಜೀವ್​ ಮಿಲ್ಖಾ ಸಿಂಗ್ ​" ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಟೈಗರ್ ವುಡ್ಸ್ ಅವರೊಂದಿಗೆ ಇವೆ. ಈ ಹಿಂದೆ ನೀವು ಅಸಾಧ್ಯವಾದ ಸಂದರ್ಭಗಳಲ್ಲಿ ಅಸಾಧ್ಯವಾದ ಸಾಧನೆಯನ್ನು ಮಾಡಿರುವುದನ್ನು ನಾವು ನೋಡಿದ್ದೇವೆ. ನೀವು ಅಷ್ಟು ಬೇಗ ವಾಡಿಕೆಯಂತೆ ಚೇತರಿಸಿಕೊಳ್ಳಿ" ಎಂದು ಜೀವ್ ಮಿಲ್ಖಾ ಟ್ವೀಟ್​ ಮಾಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ದೇಶದ ಅತ್ಯುತ್ತಮ ಗಾಲ್ಫರ್​ ಆಗಿರುವ ಲಹಿರಿ ಅವರು ವುಡ್ಸ್​ ಬೇಗ ಗುಣಮುಖರಾಗಲಿದ್ದಾರೆ ಎಂಬ ಭರವಸೆ ಹೊಂದಿರುವುದಾಗಿ ತಿಳಿಸಿದ್ದಾರೆ.

ನೀವು ಅನುಭವಿಸಿದ ಸವಾಲುಗಳನ್ನು ಊಹಿಸಿಕೊಳ್ಳುವುದಕ್ಕೂ ಕಷ್ಟ. ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತೇನೆ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಇರಲಿವೆ, ಗಾಲ್ಫ್​ ನಿಮಗಾಗಿ ಕಾಯುತ್ತಿದೆ ಎಂದು ಲಹಿರಿ ಟ್ವೀಟ್ ಮಾಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.