ETV Bharat / sports

ಕಾಮನ್​​​ವೆಲ್ತ್​ ಫೆನ್ಸಿಂಗ್​ ಚಾಂಪಿಯನ್​ಶಿಪ್​​: ಚಿನ್ನ ಗೆದ್ದ ಭಾರತದ ಭವಾನಿ ದೇವಿ - ಈಟಿವಿ ಭಾರತ ಕರ್ನಾಟಕ

ಕಾಮನ್​​​ವೆಲ್ತ್​ ಫೆನ್ಸಿಂಗ್​​ ಚಾಂಪಿಯನ್​ಶಿಪ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಭಾರತದ ಫೆನ್ಸರ್​ ಸ್ಪರ್ಧಿ​ ಭವಾನಿ ದೇವಿ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ.

Bhavani Devi
Bhavani Devi
author img

By

Published : Aug 10, 2022, 8:41 PM IST

ಲಂಡನ್​​: ಟೋಕಿಯೋ ಒಲಿಂಪಿಕ್ಸ್​​​​ ಕ್ರೀಡಾಕೂಟದಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ ಇತಿಹಾಸ ಬರೆದಿದ್ದ ಭಾರತದ ಫೆನ್ಸರ್​ ಸ್ಪರ್ಧಿ ಭವಾನಿ ದೇವಿ ಇದೀಗ ಇಂಗ್ಲೆಂಡ್​​ನಲ್ಲಿ ನಡೆಯುತ್ತಿರುವ ಕಾಮನ್​​​ವೆಲ್ತ್​ ಫೆನ್ಸಿಂಗ್​​ ಚಾಂಪಿಯನ್​ಶಿಪ್​​ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ. ವೈಯಕ್ತಿಕ ಸೇಬರ್​ ವಿಭಾಗದ ಫೈನಲ್​​​​ನಲ್ಲಿ ಆಸ್ಟ್ರೇಲಿಯಾದ ಎರಡನೇ ಶ್ರೇಯಾಂಕಿತ ವರೋನಿಕಾ ವೇಸ್​ಲೆವಾ ವಿರುದ್ಧ 15-10ರ ಅಂತರದಿಂದ ಗೆಲುವು ದಾಖಲು ಮಾಡಿದ್ದಾರೆ. ಈ ಮೂಲಕ ಕಳೆದ ಬಾರಿ ಗೆದ್ದಿದ್ದ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಂಡರು.

ವಿಶ್ವದ 42ನೇ ಶ್ರೇಯಾಂಕದಲ್ಲಿರುವ ಫೆನ್ಸರ್​ ಭವಾನಿ, ಕಾಮನ್​​​ವೆಲ್ತ್​ ಫೆನ್ಸಿಂಗ್​​ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದಿರುವ ಕಾರಣ ಇದೀಗ ಮುಂಬರುವ ಒಲಿಂಪಿಕ್ಸ್​​ಗೆ ಅರ್ಹತೆಯನ್ನೂ ಪಡೆದುಕೊಂಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಇಸ್ತಾನ್​ಬುಲ್​​ನಲ್ಲಿ ನಡೆದ ವಿಶ್ವಕಪ್​​ನಲ್ಲಿ 23ನೇ ಸ್ಥಾನ ಗಳಿಸಿದ್ದ ಭವಾನಿ ಕಾಮನ್‌ವೆಲ್ತ್ ಫೆನ್ಸಿಂಗ್ ಚಾಂಪಿಯನ್‌ಶಿಪ್​ನಲ್ಲಿ ಚಿನ್ನ ಗೆದ್ದಿದ್ದಾರೆ. ಪಂದ್ಯ ಗೆದ್ದ ಬಳಿಕ ಮಾತನಾಡಿರುವ ಭವಾನಿ, "ಪಂದ್ಯ ಕಠಿಣ ಪಂದ್ಯವಾಗಿತ್ತು, ಗೆಲುವು ಸಾಧಿಸಿ ಭಾರತಕ್ಕೆ ಮತ್ತೊಮ್ಮೆ ಚಿನ್ನದ ಪದಕ ದಕ್ಕಿಸಿಕೊಡುವಲ್ಲಿ ಯಶಸ್ವಿಯಾಗಿರುವುದಕ್ಕೆ ಖುಷಿಯಾಗಿದೆ" ಎಂದರು. ಮುಂಬರುವ ದಿನಗಳಲ್ಲಿ ಮತ್ತಷ್ಟು ಪದಕ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Tokyo Olympics: ಕತ್ತಿವರಸೆ ಮೊದಲ ಪಂದ್ಯದಲ್ಲಿ ಗೆದ್ದಿದ್ದ ಭವಾನಿ ದೇವಿಗೆ ಸೋಲು

ಭಾರತದಿಂದ ಫೆನ್ಸಿಂಗ್‌ ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್​ಗೆ ಪದಾರ್ಪಣೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೂ ಭವಾನಿ ದೇವಿ ಪಾತ್ರರಾಗಿದ್ದರು. ವಿಶ್ವ ಶ್ರೇಯಾಂಕದ ಆಧಾರದ ಮೇಲೆ ಭವಾನಿ ಅವರಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ಟಿಕೆಟ್ ಸಿಕ್ಕಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.