ನವ ದೆಹಲಿ: ಕೊಲಂಬೋದಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ ಬಾಕ್ಸರ್ ಊರ್ವಶಿ ಸಿಂಗ್ ಥಾಯ್ಲೆಂಡ್ನ ಚಾಂಪಿಯನ್ ಥಾಂಚನೋಕ್ ಫನಾನ್ರಿಗೆ ಪಂಚ್ ನೀಡಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಅಲ್ಲದೇ ಏಷ್ಯಾ ಬೆಳ್ಳಿ ಪದಕಕ್ಕೂ ಕೊರಳೊಡ್ಡಿದರು.
ಥಾಯ್ಲೆಂಡ್ನ ಥಾಂಚನೋಕ್ ಫನಾನ್ ಅವರು ಊರ್ವಶಿಗೆ ಸವಾಲಾದರೂ, ಭಾರತೀಯ ಆಟಗಾರ್ತಿಯ ಕೌಶಲ್ಯ, ವೇಗ, ಶಕ್ತಿಯ ಮುಂದೆ ಶರಣಾಗಬೇಕಾಯಿತು. 10 ಸುತ್ತುಗಳಲ್ಲಿ ನಡೆದ ಪಂದ್ಯದಲ್ಲಿ ಊರ್ವಶಿ ಸಿಂಗ್ 10-3 ಅಂಕಗಳಿಂದ ಥಾಯ್ಲೆಂಡ್ ಆಟಗಾರ್ತಿಯ ವಿರುದ್ಧ ಗೆದ್ದರು.
ಮೊದಲ ಮೂರು ಸುತ್ತುಗಳಲ್ಲಿ ಮುನ್ನಡೆ ಸಾಧಿಸಿದ್ದ ಥಾಯ್ಲೆಂಡ್ ಆಟಗಾರ್ತಿಯ ತಂತ್ರಗಳನ್ನು ಅರಿತ ಊರ್ವಶಿ ಸಿಂಗ್ ಬಳಿಕ ಸಿಡಿದೆದ್ದು, ಮುಂದಿನ ಎಲ್ಲ ಸುತ್ತುಗಳಲ್ಲಿ ಹಿಡಿತ ಸಾಧಿಸಿದರು. ವೇಗ ಮತ್ತು ಉತ್ತಮ ಕೌಶಲ್ಯಗಳನ್ನು ಪ್ರದರ್ಶಿಸುತ್ತಾ, ಅಂತಿಮವಾಗಿ ಪ್ರಶಸ್ತಿಗೆ ಕೊರಳೊಡ್ಡಿದರು.
ಇದನ್ನೂ ಓದಿ: 'ಸಂಜು ಸ್ಯಾಮ್ಸನ್ ನಿಮ್ ಜೊತೆ ನಾವಿದ್ದೀವಿ..' ಕತಾರ್ ಫಿಫಾ ವಿಶ್ವಕಪ್ನಲ್ಲಿ ಅಭಿಮಾನಿಗಳ ಬೆಂಬಲ