ನವದೆಹಲಿ: ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಚೆಸ್ ಪಂದ್ಯಾವಳಿಯಲ್ಲಿ ಗೆಲ್ಲುವ ಮೂಲಕ ಭಾರತೀಯ -ಅಮೆರಿಕನ್ ಅಭಿಮನ್ಯು ಮಿಶ್ರಾ ತನ್ನ 12ನೇ ವಯಸ್ಸಿಗೆ 'ಗ್ರ್ಯಾಂಡ್ ಮಾಸ್ಟರ್' ಎನಿಸಿಕೊಂಡಿದ್ದಾನೆ. 19 ವರ್ಷಗಳ ರೆಕಾರ್ಡ್ ಅನ್ನು ಮುರಿದು ಚೆಸ್ ಇತಿಹಾಸದಲ್ಲಿ ಅಭಿಮನ್ಯು ಹೊಸ ದಾಖಲೆ ಬರೆದಿದ್ದಾನೆ.
ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿರುವ ಅಭಿಮನ್ಯು ಮಿಶ್ರಾ 2500 ಎಲೋ ರೇಟಿಂಗ್ ದಾಟಿದ ಅತ್ಯಂತ ಕಿರಿಯ ವಯಸ್ಸಿನ ಅಂತಾರಾಷ್ಟ್ರೀಯ ಚೆಸ್ ಆಟಗಾರನಾಗಿದ್ದಾನೆ ಎಂದು ಚೆಸ್ ಡಾಟ್ ಕಾಮ್ ವೆಬ್‌ಸೈಟ್ ವರದಿ ಮಾಡಿದೆ. 19 ವರ್ಷಗಳ ಹಿಂದೆ, 2002ರಲ್ಲಿ ಸೆರ್ಗೆ ಕಾರ್ಜಕಿನ್ ಗ್ರ್ಯಾಂಡ್ ಮಾಸ್ಟರ್ ಕಿರೀಟ ಮುಡಿಗೇರಿಸಿಕೊಂಡಿದ್ದರು.

ಇದನ್ನೂ ಓದಿ: 2ನೇ ಏಕದಿನ ಪಂದ್ಯ: ಇಂಗ್ಲೆಂಡ್ ವಿರುದ್ಧ ಸೋತ ಭಾರತ
12 ವರ್ಷ 7 ತಿಂಗಳಿಗೆ ಸೆರ್ಗೆ ಕಾರ್ಜಕಿನ್ ಗ್ರ್ಯಾಂಡ್ ಮಾಸ್ಟರ್ ಆಗಿದ್ದರೆ, 12 ವರ್ಷ 4 ತಿಂಗಳಿಗೆ ಅಭಿಮನ್ಯು ಈ ಸಾಧನೆ ಮಾಡಿದ್ದಾರೆ. ಬುಡಾಪೆಸ್ಟ್‌ನಲ್ಲಿ ಅನೇಕ ತಿಂಗಳಿನಿಂದ ನಡೆಯುತ್ತಿದ್ದ ಚೆಸ್ ಪಂದ್ಯಾವಳಿಯಲ್ಲಿ ಬ್ಯಾಕ್ - ಟು - ಬ್ಯಾಕ್ ಗೆಲುವು ಸಾಧಿಸುತ್ತಾ ಬಂದಿದ್ದ ಅಭಿಮನ್ಯು ಇದೀಗ 'ಛೋಟಾ ಚೆಸ್ ಗ್ರ್ಯಾಂಡ್ ಮಾಸ್ಟರ್' ಆಗಿದ್ದಾನೆ.