ಬ್ಯಾಂಕಾಕ್: ಇಲ್ಲಿನ ಹೈ-ಎಂಡ್ ಸ್ನೂಕರ್ ಕ್ಲಬ್‌ನಲ್ಲಿ ನಡೆದ 2023ರ ಮಹಿಳಾ ಸ್ನೂಕರ್ ವಿಶ್ವಕಪ್ ಚಾಂಪಿಯನ್ಶಿಪ್ನಲ್ಲಿ ಟೀಂ ಇಂಡಿಯಾ ಎ ತಂಡವು ಇಂಗ್ಲೆಂಡ್ ಎ ತಂಡವನ್ನು 4-3 (26-56, 27-67 (51), 61-41, 52-27, 11-68 (34), 64-55, 39-78) ಅಂತರದಿಂದ ಸೋಲಿಸಿ ಪ್ರಶಸ್ತಿ ಜಯಿಸಿತು.
ಭಾರತದ ಅಮೀ ಕಮಾನಿ ಮತ್ತು ಅನುಪಮಾ ರಾಮಚಂದ್ರನ್ ಅವರಿಂದ ಪ್ರತಿನಿಧಿಸಲ್ಪಟ್ಟ ತಂಡವು ವಿಶ್ವ ಮಹಿಳಾ ಸ್ನೂಕರ್ ಟೂರ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. 12 ಬಾರಿ ವಿಶ್ವ ಚಾಂಪಿಯನ್ ಆಗಿರುವ ರಿಯಾನ್ನೆ ಇವಾನ್ಸ್ ಮತ್ತು ಪ್ರಸ್ತುತ ವಿಶ್ವದ ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ರೆಬೆಕಾ ಕೆನ್ನಾ ಅವರನ್ನು 'ಭಾರತೀಯ'ಯರು ಮಣಿಸಿದರು.
ಫಲ ನೀಡಿದ ಕಠಿಣ ಪರಿಶ್ರಮ: "ಇದು ಮ್ಯಾಜಿಕ್‌ನಂತೆ ಭಾಸವಾಗುತ್ತಿದೆ. ನನ್ನ ಕಠಿಣ ಪರಿಶ್ರಮ ಈಗ ಫಲ ನೀಡಿದೆ. ಇದು ಕೇವಲ ಪ್ರಾರಂಭ. ಭಾರತ ಹೆಮ್ಮೆ ಪಡುವಂತ ಪ್ರದರ್ಶನ ನೀಡಿದ್ದು ಖುಷಿ ತಂದಿದೆ'' ಎಂದು ಅಮೀ ಕಮಾನಿ ತಿಳಿಸಿದರು.
ಮಹಿಳಾ ಸ್ನೂಕರ್ ವಿಶ್ವಕಪ್: "ಮಹಿಳಾ ಸ್ನೂಕರ್ ವಿಶ್ವಕಪ್ ಚಾಂಪಿಯನ್ಶಿಪ್ನಲ್ಲಿ ಗೆಲುವು ಸಾಧಿಸಿರುವುದು ನನಗೆ ಸಂತೋಷವಾಗಿದೆ. ಮೊದಲೆರಡು ದಿನಗಳ ಕಾಲ ಇಲ್ಲಿನ ಟೇಬಲ್‌ಗಳಿಗೆ ಹೊಂದಿಕೊಳ್ಳಲು ತುಂಬಾ ಕಷ್ಟವಾಯಿತು. ಈ ಚಾಂಪಿಯನ್ಶಿಪ್ ನನಗೆ ಸಂಪೂರ್ಣ ಹೊಸ ಅನುಭವ ನೀಡಿದೆ" ಎಂದು ಅನುಪಮಾ ರಾಮಚಂದ್ರನ್ ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅತೀ ಹೆಚ್ಚು ಟ್ರೋಫಿ ಗೆದ್ದ ಆಸೀಸ್ ನಾಯಕಿ ಮೆಗ್.. ಈ ಟಿ20 ವಿಶ್ವಕಪ್ನಲ್ಲಿ ಹೆಚ್ಚು ರನ್ ಮತ್ತು ವಿಕೆಟ್ ಗಳಿಸಿದವರಿವರು