ಹ್ಯಾಂಗ್‌ಝೌ (ಚೀನಾ) : ಚೀನಾದ ಹ್ಯಾಂಗ್‌ಝೌನಲ್ಲಿ ಇಂದು (ಬುಧವಾರ) ನಡೆದ ಏಷ್ಯನ್ ಗೇಮ್ಸ್‌ನ 50 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಮೂವರು ಮಹಿಳೆಯರ ತಂಡವು ಬೆಳ್ಳಿ ಪದಕ ಗೆದ್ದುಕೊಂಡಿದೆ. ಸಿಫ್ಟ್ ಕೌರ್ ಸಮ್ರಾ, ಆಶಿ ಚೌಕ್ಸೆ ಮತ್ತು ಮಾನಿನಿ ಕೌಶಿಕ್ ಬೆಳ್ಳಿಗೆ ಕೊರಳೊಡ್ಡಿದ ಸ್ಪರ್ಧಿಗಳು.
-
🥈🇮🇳 Team India Shines Bright 🇮🇳🥈
— SAI Media (@Media_SAI) September 27, 2023 " class="align-text-top noRightClick twitterSection" data="
Incredible marksmanship on display! 🎯👏
Congratulations to our phenomenal trio, @SiftSamra, Manini Kaushik, and Ashi Chouksey, on their stellar performance in the 50m Rifle 3 Positions Women's Team event! 🥈👩🎯
Very well done, girls!!… pic.twitter.com/wTC9e3XwVz
">🥈🇮🇳 Team India Shines Bright 🇮🇳🥈
— SAI Media (@Media_SAI) September 27, 2023
Incredible marksmanship on display! 🎯👏
Congratulations to our phenomenal trio, @SiftSamra, Manini Kaushik, and Ashi Chouksey, on their stellar performance in the 50m Rifle 3 Positions Women's Team event! 🥈👩🎯
Very well done, girls!!… pic.twitter.com/wTC9e3XwVz🥈🇮🇳 Team India Shines Bright 🇮🇳🥈
— SAI Media (@Media_SAI) September 27, 2023
Incredible marksmanship on display! 🎯👏
Congratulations to our phenomenal trio, @SiftSamra, Manini Kaushik, and Ashi Chouksey, on their stellar performance in the 50m Rifle 3 Positions Women's Team event! 🥈👩🎯
Very well done, girls!!… pic.twitter.com/wTC9e3XwVz
ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಆಟಗಾರರು ಅದ್ಭುತ ಪ್ರದರ್ಶನ ಮುಂದುವರಿಸಿದ್ದಾರೆ. ಕ್ರೀಡಾಕೂಟದ ಮೂರನೇ ದಿನ 1 ಚಿನ್ನ ಸೇರಿದಂತೆ 3 ಪದಕಗಳನ್ನು ಗೆದ್ದುಕೊಂಡಿತ್ತು. ಕಳೆದ 3 ದಿನಗಳಲ್ಲಿ ಒಟ್ಟು 14 ಪದಕಗಳು ದೊರೆತಿವೆ. ಇದೀಗ ನಾಲ್ಕನೇ ದಿನವಾದ ಇಂದು ಕೂಡ ಪದಕದ ಬೇಟೆ ಮುಂದುವರೆದಿದ್ದು, ಭಾರತದ ಖಾತೆಗೆ ಮತ್ತೊಂದು 2 ಪದಕಗಳು ಸೇರ್ಪಡೆಯಾಗಿವೆ. 50 ಮೀಟರ್ ರೈಫಲ್ 3P ಟೀಮ್ ಈವೆಂಟ್‌ನಲ್ಲಿ ಸಮ್ರಾ, ಆಶಿ ಚೌಕ್ಸೆ ಮತ್ತು ಮಾನಿನಿ ಕೌಶಿಕ್ ಅವರು ಬೆಳ್ಳಿ ಗೆದ್ದಿದ್ದಾರೆ. ಇದು ಭಾರತಕ್ಕೆ 16ನೇ ಪದಕವಾಗಿದೆ. ಮೂವರು ಕ್ರೀಡಾಪಟುಗಳು ಒಟ್ಟು 1,764 ಅಂಕಗಳನ್ನು ಗಳಿಸುವ ಮೂಲಕ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಆತಿಥೇಯ ಚೀನಾ 1,773 ಅಂಕ ಗಳಿಸುವ ಮೂಲಕ ಚಿನ್ನ ಗೆದ್ದರೆ, ದಕ್ಷಿಣ ಕೊರಿಯಾ 1,756 ಸ್ಕೋರ್‌ನೊಂದಿಗೆ ಕಂಚಿನ ಪದಕ ಪಡೆದುಕೊಂಡಿತು.
ಹಾಗೆಯೇ, ಇಂದು ಮಹಿಳೆಯರ 25 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಭಾರತ ತಂಡದ ಸದಸ್ಯರಾದ ಮನು ಭಾಕರ್, ಇಶಾ ಸಿಂಗ್ ಮತ್ತು ರಿದಮ್ ಸಾಂಗ್ವಾನ್ ಅವರು ಚಿನ್ನದ ಪದಕ ಗೆದ್ದರು. ಮನು, ಈಶಾ ಮತ್ತು ರಿದಮ್ ಒಟ್ಟು 1,759 ಅಂಕಗಳನ್ನು ಗಳಿಸಿದರು. ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಈವರೆಗೆ ನಾಲ್ಕು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಚೀನಾದ ಆಟಗಾರರು 1,756 ಅಂಕಗಳೊಂದಿಗೆ ಬೆಳ್ಳಿ ಪದಕ ಪಡೆದರು. ದಕ್ಷಿಣ ಕೊರಿಯಾದ ಶೂಟರ್‌ಗಳು ಒಟ್ಟು 1,742 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಇದನ್ನೂ ಓದಿ : ಏಷ್ಯನ್ ಗೇಮ್ಸ್ : 25 ಮೀಟರ್ ರೈಫಲ್ನಲ್ಲಿ ಭಾರತದ ವನಿತೆಯರಿಗೆ ಚಿನ್ನ!
ಇನ್ನು ಮೂರನೇ ದಿನವಾದ ಮಂಗಳವಾರ (ನಿನ್ನೆ) ಏಷ್ಯನ್ ಗೇಮ್ಸ್ 2023 ರ ಕುದುರೆ ಸವಾರಿ ಸ್ಪರ್ಧೆಯಲ್ಲಿ ಭಾರತ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು. ಕುದುರೆ ಸವಾರಿ ತಂಡವು ಏಷ್ಯನ್ ಕ್ರೀಡಾಕೂಟದಲ್ಲಿ ಡ್ರೆಸ್ಸೇಜ್ ಸ್ಪರ್ಧೆಯಲ್ಲಿ ಅಗ್ರಸ್ಥಾನ ಪಡೆದು ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಮೂರನೇ ಚಿನ್ನದ ಪದಕವನ್ನು ಗೆದ್ದುಕೊಂಡಿತು. ದಿವ್ಯಕೀರ್ತಿ ಸಿಂಗ್, ಹೃದಯ ವಿಪುಲ್ ಛೇಡ್ ಮತ್ತು ಅನುಷ್ ಅಗರ್ವಾಲ್ ಒಟ್ಟು ಶೇಕಡಾ 209.205 ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇತರೆ ಚಿನ್ನದ ಪದಕಗಳ ಮಾಹಿತಿ : 10 ಮೀಟರ್ ಏರ್ ಶೂಟಿಂಗ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಸಿಕ್ಕಿತು. ಈ ಚಿನ್ನದ ಪದಕವನ್ನು ದಿವ್ಯಾಂಶ್ ಪನ್ವಾರ್, ರುದ್ರಾಕ್ಷಿ ಪಾಟೀಲ್ ಮತ್ತು ಐಶ್ವರ್ಯಾ ತೋಮರ್ ಅವರು ಗೆದ್ದರು. ಅಲ್ಲದೇ, ಚೀನಾದ 1893.3 ರ ದಾಖಲೆಯನ್ನು ಮುರಿಯುವ ಮೂಲಕ ಭಾರತವು ಹೊಸ ವಿಶ್ವ ದಾಖಲೆಯನ್ನು ಸಹ ನಿರ್ಮಿಸಿದೆ. ಸೋಮವಾರ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಶ್ರೀಲಂಕಾವನ್ನು 19 ರನ್‌ಗಳಿಂದ ಸೋಲಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದುಕೊಂಡಿದೆ.
ಇದನ್ನೂ ಓದಿ : ಏಷ್ಯನ್ ಗೇಮ್ಸ್: 25 ಮೀಟರ್ ರೈಫಲ್ನಲ್ಲಿ ಭಾರತದ ವನಿತೆಯರಿಗೆ ಚಿನ್ನ!