ಚೆನ್ನೈ: 7ನೇ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತಂಡಕ್ಕೆ ಫೈನಲ್ ಪ್ರವೇಶಿಸಲು ಇನ್ನು ಒಂದು ಹೆಜ್ಜೆ ಬಾಕಿ ಇದೆ. ಇಂದು ಭಾರತ ತಂಡ ಜಪಾನ್ ವಿರುದ್ಧ ಸೆಮಿಫೈನಲ್ ಆಡಲಿದೆ. ಈ ಪಂದ್ಯ ಗೆದ್ದಲ್ಲಿ ಭಾರತ 5ನೇ ಬಾರಿಗೆ ಫೈನಲ್ ಪ್ರವೇಶಿಸಿದಂತಾಗುತ್ತದೆ. 3 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಭಾರತ ನಾಲ್ಕನೇ ಟ್ರೋಫಿಗಾಗಿ ತವಕಿಸುತ್ತಿದೆ.
ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆಮಿಫೈನಲ್ವರೆಗೆ ಭಾರತ ಅದ್ಭುತವಾಗಿ ಆಡಿದೆ. ರೌಂಡ್ ರಾಬಿನ್ ಹಂತದಲ್ಲಿ 4 ಪಂದ್ಯಗಳನ್ನು ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
ಆದರೆ ಇಂದಿನ ಸೆಮಿಫೈನಲ್ನಲ್ಲಿ ಭಾರತಕ್ಕೆ ಕಠಿಣ ಪೈಪೋಟಿ ಎದುರಾಗಲಿದೆ. ರೌಂಡ್ ರಾಬಿನ್ ಹಂತದಲ್ಲಿ ಭಾರತಕ್ಕೆ ಕಠಿಣ ಸವಾಲಾಗಿದ್ದೇ ಜಪಾನ್. ಜಪಾನ್ ವಿರುದ್ಧ 1-1ರಿಂದ ಸಮಬಲ ಸಾಧಿಸಿದ್ದು ಬಿಟ್ಟರೆ ಬೇರೆಲ್ಲ ತಂಡಗಳನ್ನು ಭಾರತ ಸುಲಭವಾಗಿ ಮಣಿಸಿತ್ತು. ಆದ್ದರಿಂದ ಭಾರತ ತಂಡ ಜಪಾನ್ ಅನ್ನು ಹಗುರವಾಗಿ ಪರಿಗಣಿಸುವಂತಿಲ್ಲ.
-
We are in the End Game now.
— Hockey India (@TheHockeyIndia) August 11, 2023 " class="align-text-top noRightClick twitterSection" data="
Come support Team India and watch them live at the Mayor Radhakrishnan Hockey Stadium.
Ticket Link: https://t.co/6tPYDkDY1n#HockeyIndia #IndiaKaGame #HACT2023 pic.twitter.com/1xek37R4Lf
">We are in the End Game now.
— Hockey India (@TheHockeyIndia) August 11, 2023
Come support Team India and watch them live at the Mayor Radhakrishnan Hockey Stadium.
Ticket Link: https://t.co/6tPYDkDY1n#HockeyIndia #IndiaKaGame #HACT2023 pic.twitter.com/1xek37R4LfWe are in the End Game now.
— Hockey India (@TheHockeyIndia) August 11, 2023
Come support Team India and watch them live at the Mayor Radhakrishnan Hockey Stadium.
Ticket Link: https://t.co/6tPYDkDY1n#HockeyIndia #IndiaKaGame #HACT2023 pic.twitter.com/1xek37R4Lf
ಭಾರತ- ಜಪಾನ್ ನಡುವೆ ಇದುವರೆಗೆ 34 ಪಂದ್ಯಗಳು ನಡೆದಿವೆ. ಇವುಗಳಲ್ಲಿ ಭಾರತ 27 ಪಂದ್ಯಗಳನ್ನು ಗೆದ್ದರೆ, ಜಪಾನ್ 3 ಪಂದ್ಯಗಳಲ್ಲಿ ಜಯಿಸಿದೆ. 4 ಪಂದ್ಯಗಳು ಡ್ರಾ ಆಗಿವೆ. ಭಾರತ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಜಪಾನ್ 19ರಲ್ಲಿದೆ. 2021ರ ಸೆಮಿಫೈನಲ್ನಲ್ಲಿ ಭಾರತ, ಜಪಾನ್ ಮುಖಾಮುಖಿಯಾಗಿತ್ತು. ಅಂದು ಜಪಾನ್ 5-3 ರಿಂದ ಭಾರತವನ್ನು ಮಣಿಸಿತ್ತು. ಇದೀಗ ಭಾರತ ಸೇಡನ್ನು ತೀರಿಸಿಕೊಳ್ಳುವ ಉತ್ಸಾಹದಲ್ಲಿದೆ.
ಉತ್ತಮ ಫಾರ್ಮ್ನಲ್ಲಿ ಭಾರತ ತಂಡ: ರೌಂಡ್ ರಾಬಿನ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಎದುರಿಸಿತ್ತು. ಇದರಲ್ಲಿ ಭಾರತ 4-0ಯಿಂದ ಪಂದ್ಯ ಗೆದ್ದುಕೊಂಡಿದೆ. ಚೆನ್ನೈನ ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತಂಡದ ನಾಯಕ ಹರ್ಮನ್ಪ್ರೀತ್ ಸಿಂಗ್ ಎರಡು ಗೋಲು (15, 23 ನೇ ನಿಮಿಷ), ಜುಗರಾಜ್ ಸಿಂಗ್ (36ನೇ ನಿಮಿಷ) ಮತ್ತು ಆಕಾಶದೀಪ್ ಸಿಂಗ್ (55ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರು. ಪೆನಾಲ್ಟಿ ಕಾರ್ನರ್‌ಗಳಿಂದ ಮೂರು ಗೋಲುಗಳು ಬಂದರೆ, ಆಕಾಶದೀಪ್ ಫೀಲ್ಡ್ ನೇರ ಗೋಲು ಪಡೆದಿದ್ದರು.
-
Coming up 👉
— Hockey India (@TheHockeyIndia) August 11, 2023 " class="align-text-top noRightClick twitterSection" data="
The #MenInBlue are ready to face Japan again to book their spot in the Final and two more scintillating matches for you.
Who will reign supreme?
🏟️ Mayor Radhakrishnan Hockey Stadium
⏰ 11th August 2023, 3:30 PM IST onwards.
📺 Catch all the action LIVE on Star… pic.twitter.com/ZT6NVCNKDv
">Coming up 👉
— Hockey India (@TheHockeyIndia) August 11, 2023
The #MenInBlue are ready to face Japan again to book their spot in the Final and two more scintillating matches for you.
Who will reign supreme?
🏟️ Mayor Radhakrishnan Hockey Stadium
⏰ 11th August 2023, 3:30 PM IST onwards.
📺 Catch all the action LIVE on Star… pic.twitter.com/ZT6NVCNKDvComing up 👉
— Hockey India (@TheHockeyIndia) August 11, 2023
The #MenInBlue are ready to face Japan again to book their spot in the Final and two more scintillating matches for you.
Who will reign supreme?
🏟️ Mayor Radhakrishnan Hockey Stadium
⏰ 11th August 2023, 3:30 PM IST onwards.
📺 Catch all the action LIVE on Star… pic.twitter.com/ZT6NVCNKDv
ಉಳಿದ ನಾಲ್ಕರಲ್ಲಿ ಚೀನಾ (7-2 ಗೋಲು), ಮಲೇಷ್ಯಾ (5-0) ಮತ್ತು ದಕ್ಷಿಣ ಕೊರಿಯಾ ತಂಡದೆದುರು (3-2)ರಿಂದ ಭಾರತ ಜಯಭೇರಿ ಸಾಧಿಸಿತ್ತು. ಜಪಾನ್ (1-1) ಎದುರು ಮಾತ್ರ ಡ್ರಾ ಮೂಲಕ ಪಂದ್ಯ ಅಂತ್ಯವಾಗಿತ್ತು.
ಈ ವರ್ಷದ ಏಷ್ಯಾಡ್ನಲ್ಲಿ ಭಾರತ ಇದುವರೆಗೆ 20 ಗೋಲುಗಳನ್ನು ಗಳಿಸಿದೆ, ಐದು ಗೋಲುಗಳನ್ನು ಬಿಟ್ಟುಕೊಟ್ಟಿದೆ. ಜಪಾನ್ 8 ಗೋಲುಗಳನ್ನು ಮಾಡಿದ್ದು, 10ನ್ನು ಬಿಟ್ಟುಕೊಟ್ಟಿದೆ.
ಇಂದಿನ ಉಳಿದ ಪಂದ್ಯಗಳು: ಇಂದು 3:30ಕ್ಕೆ ಪಾಕಿಸ್ತಾನ ಮತ್ತು ಚೀನಾ 5 ಮತ್ತು 6ನೇ ಸ್ಥಾನಕ್ಕಾಗಿ ಆಡಲಿವೆ. ಸಂಜೆ 6 ಗಂಟೆಗೆ ಮಲೇಷ್ಯಾ ಮತ್ತು ಕೊರಿಯಾ ಸೆಮಿಫೈನಲ್ನ ಮೊದಲನೇ ಪಂದ್ಯವನ್ನು ಆಡಲಿದ್ದಾರೆ.
ಎಲ್ಲಿ ಪಂದ್ಯ?: ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣ, ಚೆನ್ನೈ
ಪಂದ್ಯದ ಸಮಯ: ರಾತ್ರಿ 8:30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಫ್ಯಾನ್ ಕೋಡ್
ಇದನ್ನೂ ಓದಿ: ಏಷ್ಯಾ ಚಾಂಪಿಯನ್ ಟ್ರೋಫಿ: ಪಾಕ್ ವಿರುದ್ಧ 4-0 ಗೋಲುಗಳ ಗೆಲುವು, ನಾಳೆ ಸೆಮೀಸ್ನಲ್ಲಿ ಜಪಾನ್ ವಿರುದ್ಧ ಸೆಣಸು