ETV Bharat / sports

ಭಾರತ vs ಆಸ್ಟ್ರೇಲಿಯಾ ಹಾಕಿ ಟೆಸ್ಟ್ ಸರಣಿ: ಹರ್ಮನ್‌ಪ್ರೀತ್ ಸಿಂಗ್ ಬಳಗಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ - ಮೂರನೇ ಪಂದ್ಯದಲ್ಲಿ ಭಾರತಕ್ಕೆ ಗೆಲುವು

ಐದು ಟೆಸ್ಟ್‌ಗಳ ಸರಣಿಯ ನಾಲ್ಕನೇ ಪಂದ್ಯ ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ಭಾರತ ಸರಣಿಯನ್ನು ಜೀವಂತವಾಗಿಟ್ಟುಕೊಳ್ಳಲು ಈ ಪಂದ್ಯದಲ್ಲಿ ಗೆಲುವು ದಾಖಲಿಸುವುದು ಅನಿವಾರ್ಯವಾಗಿದೆ.

Harmanpreet Singh  India vs Australia  india vs australia hockey test series  ಮಾಡು ಇಲ್ಲವೇ ಮಡಿ ಪಂದ್ಯ  ಭಾರತ vs ಆಸ್ಟ್ರೇಲಿಯಾ ಹಾಕಿ ಟೆಸ್ಟ್ ಸರಣಿ  ಐದು ಟೆಸ್ಟ್‌ಗಳ ಸರಣಿಯ ನಾಲ್ಕನೇ ಪಂದ್ಯ  ಪಂದ್ಯದಲ್ಲಿ ಗೆಲುವು ದಾಖಲಿಸುವುದು ಅನಿವಾರ್ಯ  ಮೂರನೇ ಪಂದ್ಯದಲ್ಲಿ ಭಾರತಕ್ಕೆ ಗೆಲುವು  ಭಾರತಕ್ಕೆ ಎರಡು ಪಂದ್ಯಗಳಲ್ಲಿ ಸೋಲು
ಭಾರತ vs ಆಸ್ಟ್ರೇಲಿಯಾ ಹಾಕಿ ಟೆಸ್ಟ್ ಸರಣಿ
author img

By

Published : Dec 3, 2022, 10:39 AM IST

ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್​ ಪಂದ್ಯ ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. ಐದು ಟೆಸ್ಟ್‌ಗಳ ಸರಣಿಯಲ್ಲಿ ಭಾರತ 1-2 ಹಿನ್ನಡೆಯಲ್ಲಿದೆ. ಸರಣಿ ಸಮಬಲಗೊಳಿಸಲು ಭಾರತಕ್ಕೆ ಇಂದಿನ ಪಂದ್ಯ ಗೆಲ್ಲಲೇಬೇಕಾಗಿದೆ. ಈ ಪಂದ್ಯದಲ್ಲಿ ಭಾರತ ಸೋತರೆ ಸರಣಿ ಕೈ ತಪ್ಪಲಿದೆ. ನಾಯಕ ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದಲ್ಲಿ ತಂಡವು ಪಂದ್ಯವನ್ನು ಗೆಲ್ಲಲು ಸಂಪೂರ್ಣ ಬಲವನ್ನು ಪ್ರಯೋಗಿಸಬೇಕಾಗಿದೆ. ಇದರಿಂದಾಗಿ ಈ ಸರಣಿ ಕೂತುಹಲ ಮೂಡಿಸಿದೆ.

ಮೂರನೇ ಪಂದ್ಯದಲ್ಲಿ ಭಾರತಕ್ಕೆ ಗೆಲುವು: ನವೆಂಬರ್ 30 ರಂದು ನಡೆದ ಮೂರನೇ ಪಂದ್ಯದಲ್ಲಿ ಭಾರತ 4-3 ರಿಂದ ಆಸ್ಟ್ರೇಲಿಯಾವನ್ನು ಸೋಲಿಸಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಮೊದಲ ಗೋಲು (12ನೇ ನಿಮಿಷ) ಬಾರಿಸಿದರು. ಅಭಿಷೇಕ್ ಎರಡನೇ (47ನೇ ನಿಮಿಷ) ಗೋಲು ಬಾರಿಸಿದ್ರೆ, ಶಂಶೇರ್ ಸಿಂಗ್ ತೃತೀಯ (57ನೇ ನಿಮಿಷ) ಮತ್ತು ಆಕಾಶದೀಪ್ (60ನೇ ನಿಮಿಷ) ನಾಲ್ಕನೇ ಗೋಲು ಗಳಿಸಿದರು. ಇನ್ನು ಆಸ್ಟ್ರೇಲಿಯಾ ಪರ ಜಾಕ್ ವೆಲ್ಚ್ (25ನೇ ನಿಮಿಷ), ಅರಾನ್ ಜಲೆವ್ಸ್ಕಿ (32ನೇ ನಿಮಿಷ) ಮತ್ತು ನಾಥನ್ ಇಫ್ರಾಮ್ಸ್ (59ನೇ ನಿಮಿಷ) ಗೋಲು ಗಳಿಸಿದರು.

ಭಾರತ vs ಆಸ್ಟ್ರೇಲಿಯಾ ಹಾಕಿ ಟೆಸ್ಟ್ ಸರಣಿ
ಭಾರತ vs ಆಸ್ಟ್ರೇಲಿಯಾ ಹಾಕಿ ಟೆಸ್ಟ್ ಸರಣಿ

ಭಾರತಕ್ಕೆ ಎರಡು ಪಂದ್ಯಗಳಲ್ಲಿ ಸೋಲು: ನವೆಂಬರ್ 26 ರಂದು ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 5-4 ರಲ್ಲಿ ಭಾರತವನ್ನು ಸೋಲಿಸಿತು. ಆ ಪಂದ್ಯದಲ್ಲಿ ಆಕಾಶದೀಪ್ ಮೂರು ಗೋಲು ಗಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಹರ್ಮನ್‌ಪ್ರೀತ್ ಸಿಂಗ್ ಒಂದು ಗೋಲು ಗಳಿಸಿದರು. ನವೆಂಬರ್ 27 ರಂದು ನಡೆದ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 7-4 ರಲ್ಲಿ ಅಂತರದಲ್ಲಿ ಭಾರತವನ್ನು ಮಣಿಸಿತು.

ಪಂದ್ಯದ ವೇಳಾಪಟ್ಟಿ:

  • ಡಿಸೆಂಬರ್ 3, ಶನಿವಾರ ಬೆಳಗ್ಗೆ 11:00 ಗಂಟೆಗೆ
  • ಡಿಸೆಂಬರ್ 4, ಭಾನುವಾರ ಬೆಳಗ್ಗೆ 11:00 ಗಂಟೆಗೆ

ಭಾರತ ತಂಡ:

ಗೋಲ್‌ಕೀಪರ್‌ಗಳು: ಪಿಆರ್ ಶ್ರೀಜೇಶ್, ಕೃಷ್ಣ ಬಿ ಪಾಠಕ್

ಡಿಫೆಂಡರ್‌ಗಳು: ಜರ್ಮನ್‌ಪ್ರೀತ್ ಸಿಂಗ್, ಸುರೇಂದರ್ ಕುಮಾರ್, ಹರ್ಮನ್‌ಪ್ರೀತ್ ಸಿಂಗ್ (ನಾಯಕ), ಅಮಿತ್ ರೋಹಿದಾಸ್ (ಉಪನಾಯಕ), ಜುಗರಾಜ್ ಸಿಂಗ್, ಮನ್‌ದೀಪ್ ಮೋರ್, ನೀಲಂ ಸಂಜೀಪ್ ಖೇಸ್, ವರುಣ್ ಕುಮಾರ್ ಮಿಡ್‌ಫೀಲ್ಡರ್‌ಗಳು: ಸುಮಿತ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ಶಂಶೇರ್ ಸಿಂಗ್, ನೀಲಕಾಂತ್ ಶರ್ಮಾ, ರಾಜಕುಮಾರ್ ಪಾಲ್, ಮೊಹಮ್ಮದ್ ರಹೀಲ್ ಮೌಸಿನ್, ಆಕಾಶದೀಪ್ ಸಿಂಗ್, ಗುರ್ಜಂತ್ ಸಿಂಗ್ ಫಾರ್ವರ್ಡ್: ಮನ್ದೀಪ್ ಸಿಂಗ್, ಅಭಿಷೇಕ್, ದಿಲ್ಪ್ರೀತ್ ಸಿಂಗ್, ಸುಖ್ಜಿತ್ ಸಿಂಗ್

ಭಾರತ vs ಆಸ್ಟ್ರೇಲಿಯಾ ಹಾಕಿ ಟೆಸ್ಟ್ ಸರಣಿಯನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ಫಸ್ಟ್ ಮತ್ತು ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 1 ಟಿವಿ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ. ಇದಲ್ಲದೆ, ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.