ಕೇಪ್ ಟೌನ್: ಸರಣಿ ನಿರ್ಣಯಿಸುವ 3ನೇ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದ್ದು ಭಾರತ ನೀಡಿದ್ದ 212 ರನ್‌ಗಳ ಗುರಿ ಬೆನ್ನಟ್ಟಿರುವ ಆತಿಥೇಯ ತಂಡ 2 ವಿಕೆಟ್ ಕಳೆದುಕೊಂಡಿದ್ದು 101 ರನ್ಗಳಿಸಿ ಸುಸ್ಥಿತಿಯಲ್ಲಿದೆ. ನಾಳೆ 4ನೇ ದಿನವಾಗಿದ್ದು ಟೆಸ್ಟ್ ಸರಣಿ ಗೆಲ್ಲುವುದಕ್ಕೆ ಇನ್ನೂ 111 ರನ್ಗಳಿಸಬೇಕಿದೆ.
3ನೇ ದಿನದಾಟದಲ್ಲಿ ಬ್ಯಾಟಿಂಗ್ ಮಾಡಿದ ಭಾರತ ತಂಡ ರಿಷಭ್ ಪಂತ್ ಅವರ ಶತಕದ ಹೊರತಾಗಿಯೂ 198 ರನ್ಗಳಿಗೆ ಸರ್ವಪತನ ಕಂಡಿದೆ. ಏಕಾಂಗಿ ಹೋರಾಟ ನಡೆಸಿದ ಪಂತ್ 139 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ಗಳ ನೆರವಿನಿಂದ 100 ರನ್ಗಳಿಸಿ ಅಜೇಯರಾಗಿ ಉಳಿದರು.
ಇವರನ್ನು ಹೊರತುಪಡಿಸಿದರೆ ನಾಯಕ ವಿರಾಟ್ ಕೊಹ್ಲಿ 143 ಎಸೆತಗಳಲ್ಲಿ 29 ರನ್ಗಳಿಸಿದ್ದೇ ತಂಡದ 2ನೇ ಗರಿಷ್ಠ ಸ್ಕೋರ್ ಆಯಿತು. ಉಳಿದ ಯಾವೊಬ್ಬ ಬ್ಯಾಟರ್ 10 ರನ್‌ಗಳ ಗಡಿ ದಾಟಲೇ ಇಲ್ಲ.
-
Stumps!
— ICC (@ICC) January 13, 2022 " class="align-text-top noRightClick twitterSection" data="
Bumrah snares Elgar at the very end, setting up an intriguing fourth day.
South Africa need 111 runs to win, India eight wickets 👀
Watch #SAvIND live on https://t.co/CPDKNxpgZ3 (in select regions)#WTC23 | https://t.co/Wbb1FE2mW1 pic.twitter.com/vKcwRxGMk9
">Stumps!
— ICC (@ICC) January 13, 2022
Bumrah snares Elgar at the very end, setting up an intriguing fourth day.
South Africa need 111 runs to win, India eight wickets 👀
Watch #SAvIND live on https://t.co/CPDKNxpgZ3 (in select regions)#WTC23 | https://t.co/Wbb1FE2mW1 pic.twitter.com/vKcwRxGMk9Stumps!
— ICC (@ICC) January 13, 2022
Bumrah snares Elgar at the very end, setting up an intriguing fourth day.
South Africa need 111 runs to win, India eight wickets 👀
Watch #SAvIND live on https://t.co/CPDKNxpgZ3 (in select regions)#WTC23 | https://t.co/Wbb1FE2mW1 pic.twitter.com/vKcwRxGMk9
ಕೆ.ಎಲ್.ರಾಹುಲ್ 10, ಮಯಾಂಕ್ ಅಗರ್ವಾಲ್ 7, ಪೂಜಾರ 9, ರಹಾನೆ 1, ರವಿಚಂದ್ರನ್ ಅಶ್ವಿನ್ 7, ಶಾರ್ದೂಲ್ ಠಾಕೂರ್ 5, ಬುಮ್ರಾ 2, ಉಮೇಶ್ ಯಾದವ್ ಮತ್ತು ಶಮಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ದಕ್ಷಿಣ ಅಫ್ರಿಕಾ ಪರ ಮಾರ್ಕೊ ಜಾನ್ಸನ್ 36ಕ್ಕೆ 4, ಕಗಿಸೋ ರಬಾಡ 53ಕ್ಕೆ3, ಲಂಗಿ ಎಂಗಿಡಿ 21ಕ್ಕೆ 3 ವಿಕೆಟ್ ಪಡೆದು ಭಾರತ ತಂಡವನ್ನು 200ರ ಗಡಿಯೊಳಗೆ ನಿಯಂತ್ರಿಸಿದರು.
ಎಲ್ಗರ್-ಪೀಟರ್ಸನ್ ಜೊತೆಯಾಟ:
212 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ದ.ಆಫ್ರಿಕಾ ತಂಡ 23 ರನ್ಗಳಾಗುವಷ್ಟರಲ್ಲಿ ಐಡೆನ್ ಮಾರ್ಕ್ರಮ್(16) ವಿಕೆಟ್ ಕಳೆದುಕೊಂಡಿತು. ಆದರೆ 2ನೇ ವಿಕೆಟ್ ನಾಯಕ ಡೀನ್ ಎಲ್ಗರ್ ಮತ್ತು ಕೀಗನ್ ಪೀಟರ್ಸನ್ 78 ರನ್‌ಗಳ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
ಎಲ್ಗರ್ 96 ಎಸೆತಗಳಲ್ಲಿ ಬೌಂಡರಿ ಸಹಿತ 30 ರನ್ಗಳಿಸಿದರೆ ಬುಮ್ರಾ ಬೌಲಿಂಗ್ನಲ್ಲಿ ಪಂತ್ಗೆ ಕ್ಯಾಚಿತ್ತು ಔಟಾದರು.
ಅತ್ಯುತ್ತಮವಾಗಿ ಬ್ಯಾಟ್ ಬೀಸಿದ ಕೀಗನ್ ಪೀಟರ್ಸನ್ 61 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 48 ರನ್ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ:IND vs SA Test: ಆಪತ್ತಿನಲ್ಲಿದ್ದ ಭಾರತಕ್ಕೆ ಶತಕ ಸಿಡಿಸಿ ಆಪತ್ಬಾಂಧವನಾದ ರಿಷಬ್ ಪಂತ್