ETV Bharat / sports

4 ರಾಷ್ಟ್ರಗಳ ಪಂದ್ಯಾವಳಿ: ಭಾರತ ಜೂನಿಯರ್​ ಪುರುಷರ ಹಾಕಿ ತಂಡ ಪ್ರಕಟ

ಜರ್ಮನಿಯಲ್ಲಿ ನಡೆಯಲಿರುವ 4 ರಾಷ್ಟ್ರಗಳ ಪಂದ್ಯಾವಳಿಗೆ 20 ಆಟಗಾರರ ಜೂನಿಯರ್ ಪುರುಷರ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದೆ.

ಭಾರತ ಜೂನಿಯರ್​ ಪುರುಷರ ಹಾಕಿ ತಂಡ
ಭಾರತ ಜೂನಿಯರ್​ ಪುರುಷರ ಹಾಕಿ ತಂಡ
author img

By

Published : Jul 27, 2023, 8:14 PM IST

ನವದೆಹಲಿ : ಜರ್ಮನಿಯ ಡಸೆಲ್​ ಡಾರ್ಫ್​ನಲ್ಲಿ ಆಗಸ್ಟ್​ 18 ರಿಂದ 22 ರವರೆಗೆ ನಡೆಯಲಿರುವ 4 ರಾಷ್ಟ್ರಗಳ ಟೂರ್ನಮೆಂಟ್​ಗಾಗಿ 20 ಆಟಗಾರ ಭಾರತ ಜೂನಿಯರ್​ ಪುರುಷರ ಹಾಕಿ ತಂಡವನ್ನು ಹಾಕಿ ಇಂಡಿಯಾ ಇಂದು ಗುರುವಾರ ಪ್ರಕರಟಿಸಿದೆ. ಈ ವರ್ಷದ ಕೊನೆಯ ಡಿಸೆಂಬರ್ 5 ರಿಂದ 16 ವರಗೆ ಮಲೇಷ್ಯಾದ ಕೌಲಾಲಂಪುರ್‌ನಲ್ಲಿ 2023ರ ಎಫ್‌ಐಎಚ್ ಹಾಕಿ ಪುರುಷರ ಜೂನಿಯರ್ ವಿಶ್ವಕಪ್‌ ನಡೆಯಲಿದ್ದು, ಇದರ ​ತಯಾರಿ ಭಾಗವಾಗಿರುವ ಪಂದ್ಯಾವಳಿಯಲ್ಲಿ ಭಾರತವು ಇಂಗ್ಲೆಂಡ್, ಸ್ಪೇನ್ ಮತ್ತು ಆತಿಥೇಯ ಜರ್ಮನಿ ವಿರುದ್ಧ ಸ್ಪರ್ಧಿಸಲಿದೆ.

  • Hockey India has announced the 20-member Indian Junior Men's Hockey Team that will compete in the 4 Nations Tournament in Dusseldorf, Germany, from 18th to 22nd August.

    India will compete against England, Spain, and hosts Germany as part of their preparations for the FIH Hockey… pic.twitter.com/qpwc309SE9

    — Hockey India (@TheHockeyIndia) July 27, 2023 " class="align-text-top noRightClick twitterSection" data=" ">

ತಂಡವನ್ನು ಫಾರ್ವರ್ಡ್‌ಗಳಾದ ಉತ್ತಮ್ ಸಿಂಗ್ ನಾಯಕರಾಗಿ ಮತ್ತು ಬಾಬಿ ಸಿಂಗ್ ಧಾಮಿ ಅವರ ಉಪನಾಯಕರಾಗಿ ಮುನ್ನಡೆಸಲಿದ್ದಾರೆ. ಗೋಲ್‌ಕೀಪಿಂಗ್ ವಿಭಾಗವನ್ನು ಮೋಹಿತ್ ಎಚ್‌ಎಸ್ ಮತ್ತು ರಣವಿಜಯ್ ಸಿಂಗ್ ಯಾದವ್ ವಹಿಸಲಿದ್ದು, ಶಾರದಾ ನಂದ್ ತಿವಾರಿ, ರೋಹಿತ್, ಅಮನದೀಪ್ ಲಾಕ್ರಾ, ಅಮೀರ್ ಅಲಿ, ವಾರಿಬಮ್ ನಿರಾಜ್ ಕುಮಾರ್ ಸಿಂಗ್ ಮತ್ತು ಯೋಗೆಂಬರ್ ರಾವತ್ ಅವರನ್ನು ಡಿಫೆಂಡರ್‌ಗಳಾಗಿ ಆಯ್ಕೆ ಮಾಡಲಾಗಿದೆ.

ಅಲ್ಲದೇ, ಕನ್ನಡಿಗ ಪೂವಣ್ಣ ಸಿಬಿ, ವಿಷ್ಣುಕಾಂತ್ ಸಿಂಗ್, ರಾಜಿಂದರ್ ಸಿಂಗ್, ಅಮನದೀಪ್, ಸುನೀತ್ ಲಾಕ್ರಾ, ಚೇತನ್ ಶರ್ಮಾ ಮತ್ತು ಅಮಿತ್ ಕುಮಾರ್ ಯಾದವ್ ಒಳಗೊಂಡಂತೆ ಮಿಡ್‌ಫೀಲ್ಡ್ ಅನ್ನು ರಚಿಸಿದ್ದಾರೆ. ತಂಡದಲ್ಲಿ ಅನುಭವಿ ಫಾರ್ವರ್ಡ್ ಆಟಗಾರರಾದ ಅರೈಜೀತ್ ಸಿಂಗ್ ಹುಂದಾಲ್, ಅಂಗದ್ ಬೀರ್ ಸಿಂಗ್, ಬಾಬಿ ಸಿಂಗ್ ಧಾಮಿ, ಉತ್ತಮ್ ಸಿಂಗ್ ಮತ್ತು ಸುದೀಪ್ ಚಿರ್ಮಾಕೊ ಇದ್ದಾರೆ.

ನಾವು 2023ರ ಎಫ್​ಐಎಚ್​ ಹಾಕಿ ಪುರುಷರ ಜೂನಿಯರ್ ವಿಶ್ವಕಪ್​ ತಯಾರಿಗಾಗಿ ಕಠಿಣ ತರಬೇತಿ ನಡೆಸುತ್ತಿದ್ದೇವೆ. ನಮ್ಮ ಯೋಜನೆಗಳು ಕಾರ್ಯಸಾಧ್ಯವೇ ಎಂಬುದನ್ನು ನೋಡಲು 4 ರಾಷ್ಟ್ರಗಳ ಪಂದ್ಯಾವಳಿಯು ಪರಿಪೂರ್ಣ ಅವಕಾಶವಾಗಿದೆ ಎಂದು ಕೋಚ್ ಸಿಆರ್ ಕುಮಾರ್ ತಿಳಿಸಿದ್ದಾರೆ. ಈ ಪಂದ್ಯಾವಳಿಯಲ್ಲಿ ಹೆಚ್ಚಿನ ಒತ್ತಡದ ಪಂದ್ಯದ ಸನ್ನಿವೇಶಗಳನ್ನು ಎದುರಿಸುವುದು ಹಾಗೂ ತಂಡದ ಸ್ಥೈರ್ಯವನ್ನು ಸುಧಾರಿಸಲು ತಂಡಕ್ಕೆ ಸಹಾಯ ಮಾಡುತ್ತದೆ. ಅಲ್ಲದೇ ಆಟದ ಸುಧಾರಣೆಯ ಕ್ಷೇತ್ರಗಳನ್ನು ಗುರುತಿಸಲು ನಿರ್ಣಾಯಕ ಸಾಧನವಾಗಿಯೂ ಕಾರ್ಯನಿರ್ವಹಿಸುತ್ತದೆ. ಈ ಪಂದ್ಯಾವಳಿಯು ತಂಡದ ಪ್ರದರ್ಶನಕ್ಕೆ ಮಾನದಂಡವನ್ನು ರೂಪಿಸುತ್ತದೆ ಎಂದು ನಾವು ನಂಬುತ್ತೇವೆ ಎಂದು ಅವರು ಹೇಳಿದ್ದಾರೆ.

ಭಾರತ ಜೂನಿಯರ್​ ಪುರುಷರ ಹಾಕಿ ತಂಡ :

ಗೋಲ್‌ಕೀಪರ್‌ಗಳು : ಮೋಹಿತ್ ಎಚ್‌ಎಸ್, ರಣವಿಜಯ್ ಸಿಂಗ್ ಯಾದವ್.

  • ಡಿಫೆಂಡರ್ಸ್ : ಶಾರದಾ ನಂದ್ ತಿವಾರಿ, ರೋಹಿತ್, ಅಮನದೀಪ್ ಲಾಕ್ರಾ, ಅಮೀರ್ ಅಲಿ, ವಾರಿಬಮ್ ನೀರಜ್ ಕುಮಾರ್ ಸಿಂಗ್, ಯೋಗೇಂಬರ್ ರಾವತ್.
  • ಮಿಡ್‌ ಫೀಲ್ಡರ್‌ಗಳು : ಪೂವಣ್ಣ ಸಿಬಿ, ವಿಷ್ಣುಕಾಂತ್ ಸಿಂಗ್, ರಾಜಿಂದರ್ ಸಿಂಗ್, ಅಮನದೀಪ್, ಸುನಿತ್ ಲಾಕ್ರಾ, ಚೇತನ್ ಶರ್ಮಾ, ಅಮಿತ್ ಕುಮಾರ್ ಯಾದವ್.
  • ಫಾರ್ವರ್ಡ್‌ಗಳು : ಅರ್ಜಿತ್ ಸಿಂಗ್ ಹುಂಡಾಲ್, ಅಂಗದ್ ಬೀರ್ ಸಿಂಗ್, ಬಾಬಿ ಸಿಂಗ್ ಧಾಮಿ (ಉಪನಾಯಕ), ಉತ್ತಮ್ ಸಿಂಗ್ (ನಾಯಕ), ಸುದೀಪ್ ಚಿರ್ಮಾಕೊ

ಇದನ್ನೂ ಓದಿ : ಮೊದಲ ಪಂದ್ಯದಲ್ಲೇ ಸ್ಪೇನ್ ಎದುರು ಭಾರತ ಹಾಕಿ ತಂಡಕ್ಕೆ ಸೋಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.