ನ್ಯೂಯಾರ್ಕ್: ಪ್ರತಿಷ್ಟಿತ ಯುಎಸ್ ಓಪನ್ ಟೆನ್ನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ್ತಿ ಪೊಲೆಂಡ್‌ನ ಇಗಾ ಸ್ವಯಾಟೆಕ್ ಗೆದ್ದುಕೊಂಡಿದ್ದಾರೆ. ನ್ಯೂಯಾರ್ಕ್‌ನ ಆರ್ಥರ್ ಆ್ಯಶ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅವರು ತಮ್ಮ ಪ್ರತಿಸ್ಪರ್ಧಿ ಟ್ಯುನಿಷಿಯಾದ ಒನ್ಸ್ ಜಬೇರ್ ಅವರನ್ನು 6-2, 7-6(7/5) ನೇರ ಸೆಟ್‌ಗಳಿಂದ ನಿರಾಯಾಸವಾಗಿ ಮಣಿಸಿದರು. ಇದು ಇಗಾ ಸ್ವಯಾಟೆಕ್ ಅವರಿಗೆ ಚೊಚ್ಚಲ ಯುಎಸ್ ಕಿರೀಟ ಹಾಗೂ 3ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ.
ಪಂದ್ಯದ ಮೊದಲ ಸೆಟ್‌ನಲ್ಲಿ ಎದುರಾಳಿ ಆಟಗಾರ್ತಿಯ ವಿರುದ್ಧ ಸಂಪೂರ್ಣ ಹಿಡಿತ ಸಾಧಿಸಿದ ಪೊಲಿಶ್ ಆಟಗಾರ್ತಿ 6-2ರ ಅಂತರದಲ್ಲಿ ಗೆಲುವು ಸಾಧಿಸಿದರು. ಈ ಸೆಟ್ ಗೆದ್ದುಗೊಂಡು ಮತ್ತಷ್ಟು ಉತ್ಸಾಹದಿಂದ ಆಟವಾಡಿದ ಇಗಾ ಸ್ವಯಾಟೆಕ್ ಅವರಿಗೆ ಎರಡನೇ ಸೆಟ್‌ನಲ್ಲಿ ಟ್ಯುನಿಷಿಯಾ ಆಟಗಾರ್ತಿ ಕೊಂಚ ಪೈಪೋಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಅಗ್ರ ಶ್ರೇಯಾಂಕಿತೆಯನ್ನು ಟೈ ಬ್ರೇಕರ್‌ವರೆಗೆ ತೆಗೆದುಕೊಂಡು ಹೋದರು. ಆದರೆ ಈ ಸಂದರ್ಭದಲ್ಲಿಯೂ ಅದ್ಭುತವಾಗಿ ಆಡಿದ ಇಗಾ, ಇಲ್ಲಿಯೂ ವಿಜಯ ತನ್ನದಾಗಿಸಿಕೊಂಡರು. ಈ ಮೂಲಕ ಯುಎಸ್ ಓಪನ್ ಗೆಲ್ಲುವ ಅಪರೂಪದ ಅವಕಾಶವನ್ನು ಆಫ್ರಿಕಾ ಆಟಗಾರ್ತಿ ಒನ್ಸ್ ಜಬೇರ್ ಕಳೆದುಕೊಂಡರು.
ಕಳೆದ ಜೂನ್ ತಿಂಗಳಲ್ಲಿ 21 ವರ್ಷದ ಇಗಾ ಸ್ವಯಾಟೆಕ್ ಅವರು ಫ್ರೆಂಚ್ ಸಿಂಗಲ್ಸ್ ಕಿರೀಟ ತನ್ನದಾಗಿಸಿಕೊಂಡಿದ್ದರು. ಇದೀಗ ಯುಎಸ್ ಓಪನ್ ಕೂಡಾ ಗೆದ್ದುಕೊಂಡಿದ್ದು, ಒಂದೇ ಸೀಸನ್‌ನಲ್ಲಿ 2 ಗ್ರ್ಯಾಂಡ್‌ಸ್ಲಾಮ್ ಮುಡಿಗೇರಿಸಿಕೊಂಡ ಜಗತ್ತಿನ ಮೊದಲ ಮಹಿಳಾ ಟೆನಿಸ್ ಆಟಗಾರ್ತಿಯಾಗಿ ಹೊರ ಹೊಮ್ಮಿದ್ದಾರೆ. ಇವರು ಈವರೆಗೆ ಆಡಿರುವ ಹತ್ತು ಫೈನಲ್ ಪಂದ್ಯಗಳಲ್ಲಿ ಒಂದೂ ಸೆಟ್ ಬಿಟ್ಟು ಕೊಟ್ಟಿಲ್ಲ ಎನ್ನುವುದು ಈಕೆಯ ಪ್ರತಿಭೆಗೆ ಸಾಕ್ಷಿ.
-
Queen of Queens.@iga_swiatek is the #USOpen champion! 🏆 pic.twitter.com/SLgI8rOsW1
— US Open Tennis (@usopen) September 10, 2022 " class="align-text-top noRightClick twitterSection" data="
">Queen of Queens.@iga_swiatek is the #USOpen champion! 🏆 pic.twitter.com/SLgI8rOsW1
— US Open Tennis (@usopen) September 10, 2022Queen of Queens.@iga_swiatek is the #USOpen champion! 🏆 pic.twitter.com/SLgI8rOsW1
— US Open Tennis (@usopen) September 10, 2022
"ನಿಜವಾಗಿಯೂ ಟೂರ್ನಿ ನ್ಯೂಯಾರ್ಕ್‌ನಲ್ಲಿ ನಡೆಯುವ ಕಾರಣಕ್ಕೆ ಸಾಕಷ್ಟು ಸವಾಲುಗಳಿಂದ ಕೂಡಿತ್ತು. ಈ ನಗರದಲ್ಲಿ ಸಾಕಷ್ಟು ಜನರನ್ನು ಭೇಟಿಯಾಗಿದ್ದು ಅವರು ಬಹಳ ಸ್ಫೂರ್ತಿದಾಯಕರು. ಇಂದು ಇದೇ ನಗರದಲ್ಲಿ ಪ್ರಶಸ್ತಿ ಗೆದ್ದಿರುವುದಕ್ಕೆ ಹೆಮ್ಮೆ ಇದೆ." ಎಂದು ಇಗಾ ಸ್ವಯಾಟೆಕ್ ಹರ್ಷ ವ್ಯಕ್ತಪಡಿಸಿದರು.
ಪಂದ್ಯದಲ್ಲಿ ರನ್ನರ್ ಅಪ್ ಆಗಿರುವ 28 ವರ್ಷದ ಜಬೇರ್ ಪ್ರತಿಕ್ರಿಯಿಸಿ, "ನಾನು ಪ್ರಶಸ್ತಿ ಗೆಲ್ಲಲು ಸಾಕಷ್ಟು ಹೋರಾಡಿದೆ. ಆದರೆ, ಇಗಾ ಅದಕ್ಕೆ ಕಠಿಣ ಸವಾಲು ಒಡ್ಡಿದರು. ಅವರಿಗೆ ಈ ಪ್ರಶಸ್ತಿ ಸಲ್ಲಬೇಕು. ಇಂದು ನಾನಾಕೆಯನ್ನು ಹೆಚ್ಚು ಇಷ್ಟಪಡಲಾರೆ, ಅದರೂ ಇಟ್ಸ್ ಒಕೆ" ಎಂದು ನಿರಾಶೆ ವ್ಯಕ್ತಪಡಿಸಿದರು.
ಯುಎಸ್ ಓಪನ್ ಪ್ರಶಸ್ತಿಯು 2.6 ಮಿಲಿಯನ್ ಡಾಲರ್ ಬಹುಮಾನ ಮತ್ತು ಆಕರ್ಷಕ ಕಪ್ ಹೊಂದಿದೆ.
ಇದನ್ನೂ ಓದಿ: ಯುಎಸ್ ಓಪನ್ ಟೆನಿಸ್ ಪಂದ್ಯ ವೀಕ್ಷಿಸಿ ಸಂಭ್ರಮಿಸಿದ ಎಂಎಸ್ ಧೋನಿ