ETV Bharat / sports

BWF ranking: ಬಿಡಬ್ಲ್ಯೂಎಫ್ ವಿಶ್ವ ಶ್ರೇಯಾಂಕದಲ್ಲಿ ಉತ್ತಮ ಏರಿಕೆ ಕಂಡ ಎಚ್‌ಎಸ್ ಪ್ರಣಯ್, ಲಕ್ಷ್ಯ ಸೇನ್ - ETV Bharath Kannada news

ಬಿಡಬ್ಲ್ಯೂಎಫ್ ವಿಶ್ವ ಶ್ರೇಯಾಂಕದಲ್ಲಿ ಭಾರತದ ಸ್ಟಾರ್​ ಬ್ಯಾಡ್ಮಿಂಟನ್ ಆಟಗಾರರಾದ ಎಚ್‌ಎಸ್ ಪ್ರಣಯ್ ಮತ್ತು ಲಕ್ಷ್ಯ ಸೇನ್ ಗಮನಾರ್ಹ ಏರಿಕೆ ಕಂಡಿದ್ದಾರೆ.

HS Prannoy  Lakshya Sen
ಎಚ್‌ಎಸ್ ಪ್ರಣಯ್, ಲಕ್ಷ್ಯ ಸೇನ್
author img

By

Published : Aug 1, 2023, 9:13 PM IST

ಭಾರತದ ಬ್ಯಾಡ್ಮಿಂಟನ್ ಆಟಗಾರರಾದ ಎಚ್‌ಎಸ್ ಪ್ರಣಯ್ ಮತ್ತು ಲಕ್ಷ್ಯ ಸೇನ್ ಬಿಡಬ್ಲ್ಯೂಎಫ್ ವಿಶ್ವ ಶ್ರೇಯಾಂಕದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ಪ್ರಣಯ್ ಒಂಬತ್ತನೇ ಸ್ಥಾನಕ್ಕೆ ಏರಿಕೆ ಕಂಡರೆ, ಸೇನ್ ಎರಡು ಸ್ಥಾನಗಳನ್ನು ಸುಧಾರಿಸಿ 11 ನೇ ಸ್ಥಾನವನ್ನು ಪಡೆದರು. ಈ ಏರಿಕೆಗೆ ಜಪಾನ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಅವರ ಸೆಮಿಫೈನಲ್ ಪ್ರದರ್ಶನ ಪ್ರಮುಖ ಕಾರಣವಾಗಿದೆ.

ವಿಶ್ವದ ಮಾಜಿ ನಂಬರ್ ಒನ್ ಆಟಗಾರ ಕಿಡಂಬಿ ಶ್ರೀಕಾಂತ್ ಕೂಡ ತಮ್ಮ ಶ್ರೇಯಾಂಕದಲ್ಲಿ ಸುಧಾರಣೆ ಕಂಡಿದ್ದು, ಒಂದು ಸ್ಥಾನ ಮೇಲೇರಿ 19ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಮತ್ತೊಂದು ಗಮನಾರ್ಹ ಪ್ರಗತಿಯನ್ನು ರಾಷ್ಟ್ರೀಯ ಚಾಂಪಿಯನ್ ಮಿಥುನ್ ಮಂಜುನಾಥ್ ನಾಲ್ಕು ಸ್ಥಾನಗಳನ್ನು ಮೇಲಕ್ಕೇರಿ 50 ನೇ ಸ್ಥಾನವನ್ನು ಪಡೆದರು.

ಮತ್ತೊಂದೆಡೆ, ಡಬಲ್ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಇತ್ತೀಚಿನ ಶ್ರೇಯಾಂಕದಲ್ಲಿ 17 ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಅದೇ ರೀತಿ, ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಪಟ್ಟಿಯಲ್ಲಿ ತಮ್ಮ ಪ್ರಭಾವಿ ವಿಶ್ವ ನಂಬರ್ 2 ಸ್ಥಾನವನ್ನು ಉಳಿಸಿಕೊಂಡರು. ಭಾರತೀಯ ಮಹಿಳಾ ಡಬಲ್ಸ್ ಜೋಡಿಗಳಲ್ಲಿ, ಗಾಯತ್ರಿ ಗೋಪಿಚಂದ್ ಜೊತೆಗೆ ಟ್ರೀಸಾ ಜಾಲಿ ಕೂಡ ಗಮನಾರ್ಹ ಪ್ರಗತಿಯನ್ನು ಕಂಡಿದ್ದು, ವಿಶ್ವ ಶ್ರೇಯಾಂಕದಲ್ಲಿ 17 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಪ್ರಸ್ತುತ ವರ್ಷದಲ್ಲಿ ಭಾರತೀಯ ಬ್ಯಾಡ್ಮಿಂಟನ್ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿರುವುದು ಶ್ರೇಯಾಂಕದಲ್ಲಿ ಉತ್ತಮ ಚೇತರಿಕೆಗೆ ಕಾರಣವಾಗಿದೆ. ಬಿಡಬ್ಲ್ಯೂಎಫ್ ಪ್ರವಾಸದಲ್ಲಿ ಎಚ್‌ಎಸ್ ಪ್ರಣಯ್ ಮತ್ತು ಲಕ್ಷ್ಯ ಸೇನ್ ಹಾಗೇ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಉತ್ತಮ ಪ್ರದರ್ಶನವನ್ನು ನೀಡುತ್ತಾ ಬಂದಿದೆ.

ಈ ವರ್ಷದ ಮಲೇಷ್ಯಾ ಓಪನ್​ನಲ್ಲಿ ಪ್ರಶಸ್ತಿ ಗೆದ್ದ ಪ್ರಣಯ್​ ತಮ್ಮ ಜರ್ನಿಯನ್ನು ಉತ್ತಮವಾಗಿ ಮುಂದುವರೆಸಿದರು. ನಂತರ ಇಂಡೋನೇಷ್ಯಾ ಓಪನ್​ ಸೆಮಿಫೈನಲ್​, ಚೈನೀಸ್​ ತೈಪೆ ಓಪನ್​ ಮತ್ತು ಜಪಾನ್​ ಓಪನ್​ನಲ್ಲಿ ಕ್ವಾರ್ಟ್​ರ್​ ಫೈನಲ್​ವರೆಗೆ ಸ್ಪರ್ಧಿಸಿದ್ದರು. ಲಕ್ಷ್ಯ ಸೇನ್​ ಕೆನಡಾ, ಯುಎಸ್​ ಮತ್ತು ಜಪಾನ್​ ಓಪನ್​ನಲ್ಲಿ ಸೆಮಿಫೈನಲ್​ವರೆಗೆ ತಲುಪಿ ಉತ್ತಮ ಪ್ರದರ್ಶನ ನೀಡಿದ್ದರು. ​

ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸ್ವಿಸ್​, ಇಂಡೋನೇಷ್ಯಾ ಮತ್ತು ಕೊರಿಯಾ ಓಪನ್​ನಲ್ಲಿ ಫೈನಲ್​ನಲ್ಲಿ ಗೆದ್ದರೆ, ಜಪಾನ್​ ಓಪನ್​ನಲ್ಲಿ ಕ್ವಾರ್ಟರ್​ ಫೈನಲ್​ನಲ್ಲಿ ಎಡವಿದರು.

ಇದನ್ನೂ ಓದಿ: Ravindra Jadeja: ತಂಡದಲ್ಲಿ ಯಾರಿಗೂ ಅಹಂಕಾರ ಇಲ್ಲ.. ಮಾಜಿ ಆಟಗಾರರಿಗೆ ತಂಡದ ಬಗ್ಗೆ ಮಾತನಾಡುವ ಅಧಿಕಾರ ಇದೆ: ಜಡೇಜ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.