ETV Bharat / sports

ಹಾಕಿ ವಿಶ್ವಕಪ್​: ಜಪಾನ್​ ವಿರುದ್ಧ ಗೆದ್ದು ಬೀಗಿದ ಜರ್ಮನಿ, ಪ್ರತಿರೋಧ ಇಲ್ಲದೇ ಗೆದ್ದ ಬೆಲ್ಜಿಯಂ - ಬಿರ್ಸಾ ಮುಂಡಾ ಅಂತರಾಷ್ಟ್ರೀಯ ಹಾಕಿ ಕ್ರೀಡಾಂಗಣ

ಹಾಕಿ ವಿಶ್ವಕಪ್​ನಲ್ಲಿ ಇಂದು ಸಿ ಮತ್ತು ಬಿ ಪೋಲ್​ನ ದೇಶಗಳ ನಡುವೆ ಪಂದ್ಯಗಳು ನಡೆದಿದ್ದು, ಸಿ ಪೋಲ್​ನ ನ್ಯೂಜಿಲ್ಯಾಂಡ್​, ನೆದರ್‌ಲ್ಯಾಂಡ್ ಮತ್ತು ಬಿ ಪೋಲ್​ನ ಬೆಲ್ಜಿಯಂ, ಜರ್ಮನಿಗೆ ಗೆಲುವು ಸಾಧಿಸಿದೆ.

Hockey World Cup  match updates
ಜಪಾನ್​ ವಿರುದ್ಧ ಗೆದ್ದು ಬೀಗಿದ ಜರ್ಮನಿ,
author img

By

Published : Jan 14, 2023, 11:02 PM IST

ರೂರ್ಕೆಲಾ(ಒಡಿಶಾ): ಹಾಕಿ ವಿಶ್ವಕಪ್​ನ ಎರಡನೇ ದಿನವಾದ ಇಂದು ಸಿ ಮತ್ತು ಬಿ ಪೋಲ್​ನ ನಾಲ್ಕು ಪಂದ್ಯಗಳು ನಡೆದವು. ಸಿ ಪೋಲ್​ನ ಎರಡು ಪಂದ್ಯಗಳು ರೂರ್ಕೆಲಾ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆಯಿತು. ಸಿ ಗುಂಪಿನ ನ್ಯೂಜಿಲ್ಯಾಂಡ್​ ಮತ್ತು ಚಿಲಿ ನಡುವೆ ಹಾಗೂ ನೆದರ್‌ಲ್ಯಾಂಡ್ ಮತ್ತು ಮಲೇಷ್ಯಾ ನಡುವೆ ನಡೆಯಿತು. ಇದರಲ್ಲಿ ನ್ಯೂಜಿಲ್ಯಾಂಡ್ 3 ಗೋಲ್​ ಗಳಿಸಿ ಗೆದ್ದರೆ, ನೆದರ್‌ಲ್ಯಾಂಡ್ 4 ಗೋಲ್​ ಗಳಿಸಿ ವಿಜಯ ಸಾಧಿಸಿತು.

ಬಿ ಗುಂಪಿನ ಪಂದ್ಯಗಳು ಭುವನೇಶ್ವರದಲ್ಲಿ ನಡೆಯಿತು. ಬಿ ಗುಂಪಿನ ಬೆಲ್ಜಿಯಂ ಮತ್ತು ಕೊರಿಯಾ ನಡುವೆ ಹಾಗೇ ಜಪಾನ್ ಮತ್ತು ಜರ್ಮನಿ ನಡುವೆ ಪಂದ್ಯಗಳು ನಡೆದವು. ಇದರಲ್ಲಿ ಬೆಲ್ಜಿಯಂ ಪ್ರತಿರೋಧ ಇಲ್ಲದೇ 5-0 ಗೋಲ್​ನಿಂದ ಗೆಲುವು ದಾಖಲಿಸಿದರೆ, ಇತ್ತ ಜರ್ಮನಿಯೂ ಸಹ ಜಪಾನ್​ನ್ನು ನೀರಸವಾಗಿ ಸೋಲಿಸಿತು. ಜಪಾನ್​ ನೀಡಿದ ಪೆನಾಲ್ಟಿ ಅವಕಾಶವನ್ನು ಜರ್ಮನಿ ಬಳಸಿಕೊಂಡು ಗೆಲುವು ಸಾಧಿಸಿತು.

ಭುವನೇಶ್ವರದ ಸ್ಟೇಡಿಯಂನಲ್ಲಿ ವಿಶ್ವಕಪ್​ನ ಎಂಟನೇ ಪಂದ್ಯದಲ್ಲಿ ಜರ್ಮನಿ ಮತ್ತು ಜಪಾನ್ ಎದುರಾದವು. ಜಪಾನ್ ನೀಡಿದ 5 ಪೆನಾಲ್ಟಿಯಲ್ಲಿ ಮೂರನ್ನು ಗೋಲ್​ ಮಾಡಿತು. ಗ್ರಾಮ್​ಬಷ್ ಮ್ಯಾಟ್ಸ್, ರೂಹ್ರ್ ಕ್ರಿಸ್ಟೋಫರ್ ಮತ್ತು ಪ್ರಿಂಜ್ ಥೀಸ್ ತಲಾ ಒಂದೊಂದು ಗೋಲ್​ ಗಳಿಸಿದರು. ಆದರೆ, ಜಪಾನ್​ಗೆ ಜರ್ಮನಿ ಯಾವುದೇ ಪೆನಾಲ್ಟಿ ಅವಕಾಶ ನೀಡಲಿಲ್ಲ.

ಭುವನೇಶ್ವರದ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬೆಲ್ಜಿಯಂ 5-0 ಗೋಲುಗಳಿಂದ ಕೊರಿಯಾವನ್ನು ಸೋಲಿಸಿತು. ಕೊರಿಯಾ 6 ಬಾರಿ ಪೆನಾಲ್ಟಿ ಗೋಲು ಗಳಿಸಲು ಅವಕಾಶವನ್ನು ಹೊಂದಿತ್ತು, ಆದರೆ ಅದರ ಆಟಗಾರರು ಅದನ್ನು ಸದ್ಭಳಕೆ ಮಾಡಿಕೊಳ್ಳಲಿಲ್ಲ. ಭುವನೇಶ್ವರದ ಕಿಂಗ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಕೊರಿಯಾ ವಿರುದ್ಧ ಬೆಲ್ಜಿಯಂ ಏಕಪಕ್ಷೀಯ ಗೆಲುವು ಸಾಧಿಸಿದೆ.

ಬೆಲ್ಜಿಯಂನಿಂದ 30ನೇ ನಿಮಿಷದಲ್ಲಿ ಹೆಂಡ್ರಿಕ್ಸ್ ಅಲೆಕ್ಸಾಂಡರ್ ಪೆನಾಲ್ಟಿ ಗೋಲು ಗಳಿಸಿದರು. 42ನೇ ನಿಮಿಷದಲ್ಲಿ ಕೊಸ್ನಿ ಟ್ಯಾಂಗ್ವೆ ಫೀಲ್ಡ್ ಗೋಲು ದಾಖಲಿಸಿದರೆ, 49ನೇ ನಿಮಿಷದಲ್ಲಿ ವ್ಯಾನ್ ಆಬೆಲ್ ಫ್ಲೋರೆಂಟ್ ಪೆನಾಲ್ಟಿ ಗೋಲು ದಾಖಲಿಸಿದರು. ಸೆಬಾಸ್ಟಿಯನ್ ಡಾಕರ್ 51ನೇ ನಿಮಿಷದಲ್ಲಿ ಫೀಲ್ಡ್ ಗೋಲು ಗಳಿಸಿದರು. ನಂತರ 57ನೇ ನಿಮಿಷದಲ್ಲಿ ಬೆಲ್ಜಿಯಂನ ಆರ್ಥರ್ ಡಿ ಸ್ಲೋವರ್ ಮತ್ತೊಂದು ಗೋಲು ದಾಖಲಿಸಿದರು. ಕೊರಿಯಾ 6 ಬಾರಿ ಪೆನಾಲ್ಟಿ ಗೋಲು ಗಳಿಸಲು ಅವಕಾಶವನ್ನು ಹೊಂದಿತ್ತು, ಆದರೆ ಅದರ ಆಟಗಾರರು ಅದನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ.

ಸಿ ಪೋಲ್​ನ ಪಂದ್ಯಗಳು: ಇದಕ್ಕೂ ಮುನ್ನ ಬಿರ್ಸಾ ಮುಂಡಾ ಅಂತರಾಷ್ಟ್ರೀಯ ಹಾಕಿ ಕ್ರೀಡಾಂಗಣದಲ್ಲಿ ಹಾಕಿ ವಿಶ್ವಕಪ್ ಟೂರ್ನಿಯ ಆರನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ಮಲೇಷ್ಯಾವನ್ನು 4-0 ಗೋಲುಗಳಿಂದ ಸೋಲಿಸಿತು. ನೆದರ್ಲೆಂಡ್ಸ್​ಗೆ ಮಲೇಷ್ಯಾ ಮೊದಲ ಕ್ವಾರ್ಟರ್​ನಲ್ಲಿ ಸ್ಪರ್ಧಾತ್ಮಕ ಎದುರಾಳಿಯಾಗಿತ್ತು. ಎರಡನೇ ಕ್ವಾರ್ಟರ್​ನಲ್ಲಿ ನೆದರ್ಲೆಂಡ್ಸ್ ಎರಡು ಗೋಲು ಗಳಿಸಿತು. ನಂತರ ಕೊನೆಯ 15 ನಿಮಿಷದಲ್ಲಿ ಮತ್ತೆರಡು ಗೋಲ್​ ಗಳಿಸಿ 4-0 ಯಿಂದ ವಿಜಯ ದಾಖಲಿಸಿತು.

ಇಲ್ಲಿ ನಡೆದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಚಿಲಿಯನ್ನು 3-1 ಗೋಲುಗಳಿಂದ ಸೋಲಿಸಿತು. ನ್ಯೂಜಿಲೆಂಡ್‌ನ ಸ್ಯಾಮ್ ಲೇನ್ ಈ ಪಂದ್ಯದ ಅತ್ಯುತ್ತಮ ಆಟಗಾರ ಎಂದು ಪರಿಗಣಿಸಲ್ಪಟ್ಟರು. ನ್ಯೂಜಿಲೆಂಡ್ ಮೊದಲ ಕ್ವಾರ್ಟರ್​ನಲ್ಲೇ 2 ಗೋಲ್​ ಗಳಿಸಿತು. 9ನೇ ನಿಮಿಷದಲ್ಲಿ ಮತ್ತು 11ನೇ ನಿಮಿಷದಲ್ಲಿ ಗೋಲ್​ಗಳು ದಾಖಲಾದವು.

ಇದನ್ನೂ ಓದಿ: ಹಾಕಿ ವಿಶ್ವಕಪ್​: ಭಾರತದ ಮುಂದೆ ಮಂಡಿಯೂರಿದ ಸ್ಪೇನ್: 2-0 ಗೋಲ್​ಗಳಿಂದ ಗೆಲುವು​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.