ಕಟಕ್(ಒಡಿಶಾ): ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ವತಿಯಿಂದ ಆಯೋಜನೆ ಗೊಂಡಿರುವ 15ನೇ ಆವೃತ್ತಿಯ ಹಾಕಿ ವಿಶ್ವಕಪ್ಗೆ ನಾಳೆ ಅದ್ಧೂರಿ ಚಾಲನೆ ಸಿಗಲಿದೆ. ಒಡಿಶಾದ ಕಟಕ್ನ ಬಾರಾಬಬತಿ ಕ್ರಿಡಾಂಗಣದಲ್ಲಿ ಮಹಾಕುಂಭದ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಾಲಿವುಡ್ನ ಪ್ರಸಿದ್ಧ ಕಲಾವಿದರು ಮನರಂಜನಾ ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಕಲಾವಿದರ ಮನರಂಜನಾ ಕಾರ್ಯಕ್ರಮಕ್ಕೆ ಬಾರಾಬತಿ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ. ಇಡೀ ನಗರ ಮದುವಣಗಿತ್ತಿಯಂತೆ ಶೃಂಗಾರವಾಗಿದೆ.
ಇಂದು ಸಂಜೆ ಹಾಕಿ ವಿಶ್ವಕಪ್ ಟ್ರೋಫಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಕಟಕ್ ಜಿಲ್ಲಾಡಳಿತವು ಹಾಕಿ ವಿಶ್ವಕಪ್ ಅನ್ನು ಸ್ವೀಕರಿಸಿ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಇರಿಸಿದೆ. ನಾಳೆ ವಿಶ್ವಕಪ್ ಅನ್ನು ಅನಾವರಣಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಟ್ರೋಫಿ ಅನಾವಣದ ನಂತರ ನಗರದ ಪ್ರಮುಖ ಪ್ರದೇಶಗಳಲ್ಲಿ ಮೆರವಣಿಗೆಗೊಳ್ಳಲಿದೆ. ನಂತರ ಹಾಕಿ ವಿಶ್ವಕಪ್ ಟ್ರೋಫಿ ನಾಳೆ ಮಧ್ಯಾಹ್ನ 1 ಗಂಟೆಗೆ ಬಾರಾಬತಿ ಕ್ರೀಡಾಂಗಣಕ್ಕೆ ಆಗಮಿಸಲಿದೆ.
-
Just 2️⃣ days to go!
— Odisha Sports (@sports_odisha) January 9, 2023 " class="align-text-top noRightClick twitterSection" data="
Watch your favourite stars at the #Celebrations of #HWC2023, to be held at the historic #BarabatiStadium in #Cuttack.
Also catch them LIVE 🔴 on DSYS YouTube Channel, DD Sports & https://t.co/PDBHO9iOdb on Jan 11th, from 6 PM onwards.
#HockeyHaiDilMera pic.twitter.com/bj0LtOyII4
">Just 2️⃣ days to go!
— Odisha Sports (@sports_odisha) January 9, 2023

#HockeyHaiDilMera pic.twitter.com/bj0LtOyII4Just 2️⃣ days to go!
— Odisha Sports (@sports_odisha) January 9, 2023
Watch your favourite stars at the #Celebrations of #HWC2023, to be held at the historic #BarabatiStadium in #Cuttack.
Also catch them LIVE 🔴 on DSYS YouTube Channel, DD Sports & https://t.co/PDBHO9iOdb on Jan 11th, from 6 PM onwards.
#HockeyHaiDilMera pic.twitter.com/bj0LtOyII4
ಮೆರವಣಿಗೆ ವೇಳೆ ನಗರದ ವಿವಿಧೆಡೆ ಟ್ರೋಫಿಯನ್ನು ಸ್ವಾಗತಿಸಲಾಗುವುದು. ಮಧ್ಯಾಹ್ನ 3 ಗಂಟೆಯೊಳಗೆ ಬಾರಾಬತಿ ಕ್ರೀಡಾಂಗಣಕ್ಕೆ ತಲುಪುವಂತೆ ಸಿಎಂಸಿ ಆಯುಕ್ತರು ಮನವಿ ಮಾಡಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಒಡಿಶಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು, ಇತರ ನ್ಯಾಯಾಧೀಶರು, ಮುಖ್ಯಮಂತ್ರಿಗಳು, ಸಚಿವರು ಮತ್ತು ರಾಜ್ಯದ ಹೊರಗಿನಿಂದ ಬರುವ ಗಣ್ಯರು ಭಾಗವಹಿಸಲಿದ್ದಾರೆ. ಬಾರಬತಿ ಸ್ಟೇಡಿಯಂನಲ್ಲಿ ನಾಳೆ 6 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಿದ್ಧತೆ: ಬಾರಾಬತಿ ಕ್ರೀಡಾಂಗಣ ನಾಳೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಪೂರ್ಣ ಸಜ್ಜಾಗಿದೆ. ನಾಳೆಯ ಮನರಂಜನಾ ಕಾರ್ಯಕ್ರಮಕ್ಕಾಗಿ ವಿವಿಧ ಕಲಾತಂಡಗಳು ಅಭ್ಯಾಸ ನಡೆಸುತ್ತಿವೆ. ಒಡಿಶಾ ರಾಜ್ಯದ ಸಂಸ್ಕೃತಿಕ ಮೆರುಗನ್ನು ತೋರ್ಪಡಿಸುವ ಮತ್ತು ಗ್ರಾಮೀಣ ಮನರಂಜನಾ ನೃತ್ಯಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ.
ನಾಳೆ ಮಧ್ಯಾಹ್ನದ ನಂತರ ರಜೆ ಘೋಷಣೆ: ಬಾರಾಬತಿ ಕ್ರೀಡಾಂಗಣದಲ್ಲಿ ನಾಳೆ ಉದ್ಘಾಟನಾ ಸಮಾರಂಭ ಇರುವುದರಿಂದ ಕಟಕ್ ಜಿಲ್ಲೆಯ ಎಲ್ಲಾ ಶಾಲೆ ಕಾಲೇಜುಗಳಿಗೆ ಮಧ್ಯಾಹ್ನದ ನಂತರ ರಜೆ ಘೋಷಿಸಲಾಗಿದೆ. ಈ ಬಗ್ಗೆ ಕಟಕ್ ಜಿಲ್ಲಾಧಿಕಾರಿ ಇಂದು ಆದೇಶ ಹೊರಡಿಸಿದ್ದಾರೆ. ಈವೆಂಟ್ನ ಪಾಸ್ ಆಥವಾ ಟಿಕೆಟ್ ಹೊಂದಿರುವವರಿಗೆ ನಗರದಿಂದ ಕ್ರೀಡಾಂಗಣಕ್ಕೆ ಬರಲು ಉಚಿತ ಬಸ್ ಸೇವೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೇ ಸರ್ಕಾರಿ ಕಚೇರಿ ಮತ್ತು ಖಾಸಗಿ ಕಂಪನಿಗಳೂ ಸಹ ರಜೆ ಘೋಷಿಸಿವೆ.
ಒಡಿಶಾದಲ್ಲಿ ಹಾಕಿ ವಿಶ್ವಕಪ್: 2023ರ ಹಾಕಿ ವಿಶ್ವಕಪ್‌ನ 15ನೇ ಆವೃತ್ತಿಯು ಒಡಿಶಾದ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ಜನವರಿ 13 ರಿಂದ 29 ರವರೆಗೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ವಿಶ್ವದ 16 ದೇಶಗಳು ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಆಡಲಿವೆ. 13 ರಂದು ವಿಶ್ವದ ನಾಲ್ಕನೇ ಅತಿ ದೊಡ್ಡ ಹಾಕಿ ಕ್ರೀಡಾಂಗಣವಾದ ಬಿರ್ಸಾ ಮುಂಡಾ ಮೈದಾನದಲ್ಲಿ ಭಾರತ ಮತ್ತು ಸ್ಪೇನ್ ನಡುವೆ ಪಂದ್ಯ ನಡೆಯಲಿದೆ.
16 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ - ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಫ್ರಾನ್ಸ್, ಅರ್ಜೆಂಟೀನಾ. ಬಿ ಗುಂಪಿನಲ್ಲಿ - ಬೆಲ್ಜಿಯಂ, ಜಪಾನ್, ಕೊರಿಯಾ, ಜರ್ಮನಿ. ಸಿ ಗುಂಪಿನಲ್ಲಿ - ನೆದರ್‌ಲ್ಯಾಂಡ್, ಚಿಲಿ, ಮಲೇಷ್ಯಾ, ನ್ಯೂಜಿಲ್ಯಾಂಡ್ ಮತ್ತು ಡಿ ಗುಂಪಿನಲ್ಲಿ - ಭಾರತ, ವೇಲ್ಸ್, ಸ್ಪೇನ್, ಇಂಗ್ಲೆಂಡ್ ತಂಡಗಳಿವೆ. ನಾಲ್ಕು ಬಾರಿ ಚಾಂಪಿಯನ್ ಆದ ಪಾಕಿಸ್ತಾನ ಈ ಬಾರಿ ವಿಶ್ವಕಪ್ಗೆ ಪ್ರವೇಶ ಪಡೆದಿಲ್ಲ.
ಇದನ್ನೂ ಓದಿ: Hockey World Cup: 1972ರ ಮ್ಯೂನಿಚ್ ಒಲಿಂಪಿಕ್ಸ್‌ನ ಭಾರತದ ಅಗ್ರ ಸಾಧನೆ