ರೂರ್ಕೆಲಾ, ಒಡಿಶಾ: ಶುಕ್ರವಾರ ನಡೆದ ಎಫ್‌ಐಎಚ್ ಒಡಿಶಾ ಹಾಕಿ ವಿಶ್ವಕಪ್ 2023 ಪೂಲ್ ಎ ಪಂದ್ಯದಲ್ಲಿ ಆಸ್ಟ್ರೇಲಿಯಾ 9-2 ಗೋಲುಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ರಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತ ಅರ್ಜೆಂಟೀನಾ ತಂಡ ಫ್ರಾನ್ಸ್ ವಿರುದ್ಧ 5-5 ಡ್ರಾ ಸಾಧಿಸಿದೆ. ಅನುಭವಿ ಬ್ಲೇಕ್ ಗೋವರ್ಸ್ ಅವರ ಹ್ಯಾಟ್ರಿಕ್ ಸೇರಿದಂತೆ ನಾಲ್ಕು ಗೋಲುಗಳೊಂದಿಗೆ ಆಸ್ಟ್ರೇಲಿಯಾ ಎರಡು ಗೆಲುವುಗಳು ಮತ್ತು ಡ್ರಾದೊಂದಿಗೆ ಪೂಲ್ ಎ ನಲ್ಲಿ ಅಗ್ರಸ್ಥಾನದಲ್ಲಿ ಉಳಿದುಕೊಂಡಿದೆ. ಬೆಲ್ಜಿಯಂ ಮತ್ತು ಜಪಾನ್ ನಡುವೆ ನಡೆದ ಪಂದ್ಯದಲ್ಲಿ ಬೆಲ್ಜಿಯಂ ತಂಡವು ಜಪಾನ್ ಅನ್ನು 7-1 ಗೋಲುಗಳಿಂದ ಸೋಲಿಸಿದೆ.
-
Australia dominates the competition, crushing it with a massive lead at the final buzzer.
— Hockey India (@TheHockeyIndia) January 20, 2023 " class="align-text-top noRightClick twitterSection" data="
🇦🇺 AUS 9:2 RSA 🇿🇦 #IndiaKaGame #HockeyIndia #HWC2023 #StarsBecomeLegends #HockeyWorldCup #AUSvsRSA @CMO_Odisha @sports_odisha @IndiaSports @Media_SAI @Kookaburras @SA_Hockey pic.twitter.com/ZvtZU9dw8e
">Australia dominates the competition, crushing it with a massive lead at the final buzzer.
— Hockey India (@TheHockeyIndia) January 20, 2023
🇦🇺 AUS 9:2 RSA 🇿🇦 #IndiaKaGame #HockeyIndia #HWC2023 #StarsBecomeLegends #HockeyWorldCup #AUSvsRSA @CMO_Odisha @sports_odisha @IndiaSports @Media_SAI @Kookaburras @SA_Hockey pic.twitter.com/ZvtZU9dw8eAustralia dominates the competition, crushing it with a massive lead at the final buzzer.
— Hockey India (@TheHockeyIndia) January 20, 2023
🇦🇺 AUS 9:2 RSA 🇿🇦 #IndiaKaGame #HockeyIndia #HWC2023 #StarsBecomeLegends #HockeyWorldCup #AUSvsRSA @CMO_Odisha @sports_odisha @IndiaSports @Media_SAI @Kookaburras @SA_Hockey pic.twitter.com/ZvtZU9dw8e
ನಾಲ್ಕನೇ ಮತ್ತು ಕೊನೆಯ ಪಂದ್ಯ ಜರ್ಮನಿ ಮತ್ತು ದಕ್ಷಿಣ ಕೊರಿಯಾ ನಡುವೆ ನಡೆಯಿತು. ಈ ಪಂದ್ಯದಲ್ಲಿ, ಮೊದಲ ಕ್ವಾರ್ಟರ್‌ನಿಂದ ನಾಲ್ಕನೇ ಕ್ವಾರ್ಟರ್‌ವರೆಗೆ ಮಾತ್ರ ಜರ್ಮನ್ ತಂಡ ಮಾತ್ರ ಪ್ರಾಬಲ್ಯ ಸಾಧಿಸಿತು. ದಕ್ಷಿಣ ಕೊರಿಯಾ ಕೆಲವು ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದರೂ ತಂಡಕ್ಕೆ ಅದರ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಜರ್ಮನಿ ಪಂದ್ಯವನ್ನು 7-2 ಅಂತರದಿಂದ ಗೆದ್ದುಕೊಂಡಿತು.
ನಿನ್ನೆ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ಆಸ್ಟ್ರೇಲಿಯಾದ ಗೋವರ್ಸ್ 4, 15, 19 ಮತ್ತು 20 ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಇದು ಮೊದಲಾರ್ಧದವರೆಗೆ ಆಸ್ಟ್ರೇಲಿಯಾ 7-1 ರಿಂದ ಪ್ರಬಲ ಮುನ್ನಡೆ ಸಾಧಿಸಲು ನೆರವಾಯಿತು. ಆಸ್ಟ್ರೇಲಿಯಾ ಪರ ಟಾಮ್ ಕ್ರೇಗ್ (10ನೇ ನಿಮಿಷ), ಜೇಕ್ ಹಾರ್ವೆ (22ನೇ ನಿಮಿಷ), ಡೇನಿಯಲ್ ಬೀಲ್ (28ನೇ ನಿಮಿಷ), ಜೆರೆಮಿ ಹೇವರ್ಡ್ (32ನೇ ನಿಮಿಷ) ಮತ್ತು ಟಿಮ್ ಬ್ರಾಂಡ್ (47ನೇ ನಿಮಿಷ) ಕೂಡ ಗೋಲು ಗಳಿಸಿದರು. ದಕ್ಷಿಣ ಆಫ್ರಿಕಾ ಪರ ನತುಲಿ ಎನ್‌ಕೊಬೈಲ್ (8ನೇ ನಿಮಿಷ) ಮತ್ತು ಕೊಕೆ ಟೆವಿನ್ (58ನೇ ನಿಮಿಷ) ಗೋಲು ಗಳಿಸಿದರು. ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 9-2 ಗೋಲುಗಳಿಂದ ಸುಲಭವಾಗಿ ಗೆದ್ದಿತ್ತು.
-
Germany emerges victorious in today's last match, sealing their victory with a dominating performance at full-time.
— Hockey India (@TheHockeyIndia) January 20, 2023 " class="align-text-top noRightClick twitterSection" data="
🇰🇷KOR 2-7 GER🇩🇪#IndiaKaGame #HockeyIndia #HWC2023 #StarsBecomeLegends #HockeyWorldCup #BELvsJPN @CMO_Odisha @sports_odisha @IndiaSports @Media_SAI @DHB_hockey pic.twitter.com/FUFMmhvAgC
">Germany emerges victorious in today's last match, sealing their victory with a dominating performance at full-time.
— Hockey India (@TheHockeyIndia) January 20, 2023
🇰🇷KOR 2-7 GER🇩🇪#IndiaKaGame #HockeyIndia #HWC2023 #StarsBecomeLegends #HockeyWorldCup #BELvsJPN @CMO_Odisha @sports_odisha @IndiaSports @Media_SAI @DHB_hockey pic.twitter.com/FUFMmhvAgCGermany emerges victorious in today's last match, sealing their victory with a dominating performance at full-time.
— Hockey India (@TheHockeyIndia) January 20, 2023
🇰🇷KOR 2-7 GER🇩🇪#IndiaKaGame #HockeyIndia #HWC2023 #StarsBecomeLegends #HockeyWorldCup #BELvsJPN @CMO_Odisha @sports_odisha @IndiaSports @Media_SAI @DHB_hockey pic.twitter.com/FUFMmhvAgC
ಮತ್ತೊಂದೆಡೆ ಅರ್ಜೆಂಟೀನಾ ವರ್ಸಸ್ ಫ್ರಾನ್ಸ್ ಪಂದ್ಯದಲ್ಲಿ ಅರ್ಜೆಂಟೀನಾ ಎರಡನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಉತ್ತಮ ಆರಂಭವನ್ನು ಕಂಡು ಕೊಂಡಿತ್ತು. ಬಳಿಕ ಫ್ರಾನ್ಸ್ 10 ನೇ ನಿಮಿಷದಲ್ಲಿ ಸ್ಕೋರ್ ಅನ್ನು ಸಮಗೊಳಿಸಲು ಪ್ರಬಲ ಪುನರಾಗಮನವನ್ನು ಮಾಡಿದ್ದು, ಮೂರು ಬಾರಿ ಮುನ್ನಡೆ ಸಾಧಿಸಿತು. ಅರ್ಜೆಂಟೀನಾ ಅಂತಿಮ ಕ್ಷಣದವರೆಗೂ ಹೋರಾಡಿದ್ದು, ಪಂದ್ಯವನ್ನು 5-5 ರಲ್ಲಿ ಸಮಗೊಳಿಸಿತು.
ಆಸ್ಟ್ರೇಲಿಯಾ ಎರಡು ಫಲಿತಾಂಶಗಳಿಂದ ಏಳು ಅಂಕಗಳೊಂದಿಗೆ ಪೂಲ್ ಎ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಅರ್ಜೆಂಟೀನಾ ಒಂದು ಗೆಲುವು ಮತ್ತು ಎರಡು ಡ್ರಾದಿಂದ ಐದು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಫ್ರಾನ್ಸ್ ಒಂದು ಗೆಲುವು, ಒಂದು ಡ್ರಾ ಮತ್ತು ಒಂದು ಸೋಲಿನಿಂದ ನಾಲ್ಕು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದರೆ, ಅರ್ಜೆಂಟೀನಾ ಮತ್ತು ಫ್ರಾನ್ಸ್ ಕ್ರಾಸ್‌ಒವರ್ ಹಂತವನ್ನು ತಲುಪಿವೆ.
ರಾತ್ರಿ 7 ಗಂಟೆಗೆ ಆರಂಭವಾದ ಬೆಲ್ಜಿಯಂ vs ಜಪಾನ್ ನಡುವಿನ ಪಂದ್ಯದಲ್ಲಿ ಬೆಲ್ಜಿಯಂ ತಂಡ ಜಪಾನ್ ತಂಡವನ್ನು 7-1 ಗೋಲುಗಳಿಂದ ಸೋಲಿಸಿತು. ಬೆಲ್ಜಿಯಂ ತಂಡ ಮೊದಲ ಕ್ವಾರ್ಟರ್‌ನಿಂದ ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸಿತು ಮತ್ತು ಕೊನೆಯ ನಿಮಿಷದವರೆಗೆ ಗೋಲು ಗಳಿಸುವ ಮೂಲಕ ತಂಡವು ಅದ್ಭುತ ಜಯ ಸಾಧಿಸಿತು. ಬೆಲ್ಜಿಯಂ ತಂಡ ಇದೀಗ ನೇರವಾಗಿ ಕ್ವಾರ್ಟರ್ ಫೈನಲ್ ತಲುಪಿದ್ದು, ಜಪಾನ್ ತಂಡ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ. ರಾತ್ರಿ 9 ಗಂಟೆಗೆ ನಡೆದ ಜರ್ಮನಿ vs ದಕ್ಷಿಣ ಕೊರಿಯಾ ಪಂದ್ಯದಲ್ಲಿ ಜರ್ಮನಿ 7-2 ರಿಂದ ಎದುರಾಳಿ ತಂಡವನ್ನು ಸೋಲಿಸಿತು.