ETV Bharat / sports

Hockey India: ಭಾರತದ ಪುರುಷ, ಮಹಿಳಾ ಜೂನಿಯರ್‌ ಹಾಕಿ ತಂಡಕ್ಕೆ ಹರ್ಮನ್ ಕ್ರೂಸ್ ಹೊಸ ಕೋಚ್‌ - ETV Bharath Kannada news

Herman Kruis: ಈ ವರ್ಷಾಂತ್ಯದಲ್ಲಿ ಜೂನಿಯರ್​ ಹಾಕಿ ವಿಶ್ವಕಪ್ ನಡೆಯಲಿದ್ದು ಹರ್ಮನ್ ಕ್ರೂಸ್ ಅವರನ್ನು ಭಾರತದ ತಂಡದ ಹೊಸ ಮುಖ್ಯ ಕೋಚ್​ ಆಗಿ ನೇಮಿಸಲಾಗಿದೆ.

Herman Kruis
ಹರ್ಮನ್ ಕ್ರೂಸ್
author img

By

Published : Aug 8, 2023, 4:35 PM IST

Updated : Aug 8, 2023, 4:44 PM IST

ನವದೆಹಲಿ: ಭಾರತೀಯ ಪುರುಷ ಮತ್ತು ಮಹಿಳಾ ಹಾಕಿ ಜೂನಿಯರ್ ತಂಡಗಳ ನೂತನ ತರಬೇತುದಾರರಾಗಿ ಎರಡು ದಶಕಗಳ ಕಾಲ ಕೋಚ್​ ಆಗಿ ಕಾರ್ಯನಿರ್ವಹಿಸಿದ ಅನುಭವವಿರುವ ನೆದರ್‌ಲ್ಯಾಂಡ್‌ನ ಹರ್ಮನ್ ಕ್ರೂಸ್ ಅವರನ್ನು ನೇಮಕ ಮಾಡಿರುವುದಾಗಿ ಹಾಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ವರ್ಷದ ಕೊನೆಯಲ್ಲಿ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್​ (ಎಫ್​ಐಎಚ್​) ಅಡಿಯಲ್ಲಿ ಪುರುಷರ ಜೂನಿಯರ್ ಹಾಕಿ ವಿಶ್ವಕಪ್ 2023 ಮತ್ತು ಸ್ಯಾಂಟಿಯಾಗೊದಲ್ಲಿ ಮಹಿಳಾ ಜೂನಿಯರ್ ಹಾಕಿ ವಿಶ್ವಕಪ್‌ 2023 ನಡೆಯಲಿದೆ. ಹರ್ಮನ್ ಕ್ರೂಸ್ ಈ ಎರಡೂ ಟೂರ್ನಿಗೂ ಭಾರತ ತಂಡಕ್ಕೆ ಕೋಚ್‌ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಹರ್ಮನ್ ಕ್ರೂಸ್ ನೆದರ್ಲ್ಯಾಂಡ್ಸ್ ಮೂಲದ ಹಾಕಿ ಕ್ಲಬ್ ಡೆನ್ ಬಾಷ್​ನಲ್ಲಿ ಮುಖ್ಯಕೋಚ್​ ಆಗಿ ಕೆಲಸ ಮಾಡಿದ್ದರು. ಇವರು ತರಬೇತಿ ನೀಡಿದ ತಂಡ 8 ಬಾರಿ ಯುರೋಪಿಯನ್ ಕಪ್ ಜಯಿಸಿದೆ. 2006ರಿಂದ 2008ರಲ್ಲಿ ನೆದರ್ಲ್ಯಾಂಡ್ಸ್ ಒಳಾಂಗಣ ಮಹಿಳಾ ಹಾಕಿ ತಂಡದ ರಾಷ್ಟ್ರೀಯ ಮುಖ್ಯ ತರಬೇತುದಾರರಾಗಿದ್ದರು. 2008ರಿಂದ 2010ರ ನಡುವೆ ನೆದರ್ಲ್ಯಾಂಡ್ಸ್ ಹೊರಾಂಗಣ ತಂಡಕ್ಕೆ ರಾಷ್ಟ್ರೀಯ ಮುಖ್ಯ ತರಬೇತುದಾರರೂ ಆಗಿದ್ದರು. 2016ರಿಂದ ಆಗಸ್ಟ್ 2023 ರವರೆಗೆ ಬೆಲಾರಸ್ ಒಳಾಂಗಣ ಮತ್ತು ಹೊರಾಂಗಣ ತಂಡದ ರಾಷ್ಟ್ರೀಯ ಮುಖ್ಯ ತರಬೇತುದಾರರಾಗಿದ್ದರು. ಕ್ರೂಸ್‌ ಅವರು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ತರಬೇತುದಾರ ಶಿಕ್ಷಕರಾಗಿದ್ದಾರೆ.

"ಹಿರಿಯ ಕೋಚ್ ಹರ್ಮನ್ ಕ್ರೂಸ್ ಅವರನ್ನು ಜೂನಿಯರ್ ತಂಡಗಳ ತರಬೇತುದಾರರಾಗಿ ಸ್ವಾಗತಿಸಲು ಹಾಕಿ ಇಂಡಿಯಾ ಉತ್ಸುಕವಾಗಿದೆ. ಅವರು ಜೂನಿಯರ್ ಪುರುಷ ಮತ್ತು ಮಹಿಳಾ ತಂಡಗಳಿಗೆ ತರಬೇತಿ ನೀಡಲಿದ್ದಾರೆ. ಮುಂಬರುವ ಎಫ್‌ಐಹೆಚ್ ಜೂನಿಯರ್ ಹಾಕಿ ವರ್ಲ್ಡ್‌ ಕಪ್‌ನಲ್ಲಿ ತಂಡದ ಪ್ರದರ್ಶನವನ್ನು ಉತ್ತಮಗೊಳಿಸುತ್ತಾರೆ ಎಂಬ ವಿಶ್ವಾಸವಿದೆ. ಅವರು ಭಾರತ ಜೂನಿಯರ್ ಮಹಿಳಾ ತಂಡಕ್ಕೆ ಮತ್ತು ಪುರುಷರ ತಂಡಕ್ಕೆ ತುಷಾರ್ ಖಂಡ್ಕರ್ ಹಾಗೂ ಸಿಆರ್ ಕುಮಾರ್ ಅವರ ಜೊತೆ ಕಾರ್ಯ ನಿರ್ವಹಿಸಲಿದ್ದಾರೆ'' ಎಂದು ಹಾಕಿ ಇಂಡಿಯಾ ಅಧ್ಯಕ್ಷೆ ಪದ್ಮಾ ಹೇಳಿದ್ದಾರೆ.

"ಎಫ್‌ಐಎಚ್ ಜೂನಿಯರ್ ಹಾಕಿ ವಿಶ್ವಕಪ್ 2023ರಲ್ಲಿ ನಿರೀಕ್ಷಿತ ಫಲಿತಾಂಶಕ್ಕಾಗಿ ಹಾಕಿ ಇಂಡಿಯಾ ಕಾರ್ಯನಿರ್ವಾಹಕ ಮಂಡಳಿಯು ಹರ್ಮನ್ ಕ್ರೂಸ್ ಪರಿಣತಿಯನ್ನು ಕೋಚಿಂಗ್​ನಲ್ಲಿ ತರುವ ಮೂಲಕ ಸಿಬ್ಬಂದಿಯನ್ನು ಬಲಪಡಿಸುವ ನಿರ್ಧಾರ ಮಾಡಿದೆ. ಅವರ ಅನುಭವ ಎರಡೂ ತಂಡಗಳಿಗೆ ಉತ್ತಮ ಮೌಲ್ಯ ನೀಡಲಿದೆ. ಈ ವರ್ಷ ಪ್ರತಿಷ್ಠಿತ ಈವೆಂಟ್‌ಗಾಗಿ ತಂಡಗಳು ತಯಾರಿ ನಡೆಸುತ್ತಿವೆ" ಎಂದು ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಭೋಲಾ ನಾಥ್ ಸಿಂಗ್ ತಿಳಿಸಿದ್ದಾರೆ.

ಇನ್ನೊಂದೆಡೆ, "ಭಾರತದಲ್ಲಿ ಯುವ ಪ್ರತಿಭೆಗಳೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ" ಎಂದು ಕ್ರೂಸ್ ಹೇಳಿದ್ದಾರೆ. "ನಾನು ಹಾಕಿ ಇಂಡಿಯಾದೊಂದಿಗೆ ಈ ಹೊಸ ಪಾತ್ರವನ್ನು ಎದುರು ನೋಡುತ್ತಿದ್ದೇನೆ. ಭಾರತದ ಜೂನಿಯರ್ ಪುರುಷ ಮತ್ತು ಮಹಿಳಾ ಹಾಕಿ ತಂಡಗಳಲ್ಲಿ ಕೆಲವು ಪ್ರತಿಭಾವಂತ ಆಟಗಾರರಿದ್ದಾರೆ. ಜೂನಿಯರ್ ವಿಶ್ವಕಪ್‌ಗಳು ರೋಮಾಂಚನಕಾರಿಯಾಗಿರಲಿದೆ." ಎಂದಿದ್ದಾರೆ.

ಇದನ್ನೂ ಓದಿ: Daniel Vettori: ಲಾರಾ ಕೈ ಬಿಟ್ಟ ಸನ್‌ರೈಸರ್ಸ್ ಹೈದರಾಬಾದ್‌​; ಡೇನಿಯಲ್ ವೆಟ್ಟೋರಿ ಹೊಸ ಕೋಚ್​​

Last Updated : Aug 8, 2023, 4:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.