ಪ್ರಾಗ್ (ಝೆಕ್ ಗಣರಾಜ್ಯ): ಭಾರತದ ಓಟದ ವಿಭಾಗದಲ್ಲಿ ಕ್ರಾಂತಿಯೆಬ್ಬಿಸುತ್ತಿರುವ ಅಸ್ಸೋಂ ಮೂಲದ ಹಿಮಾ ದಾಸ್ ಕೇವಲ 15 ದಿನಗಳಲ್ಲಿ 4ನೇ ಅಂತಾರಾಷ್ಟ್ರೀಯ ಬಂಗಾರ ಗೆದ್ದಿದ್ದಾರೆ.
-
Won another gold today in 200m and improved my timings to 23.25s at Tabor GP. pic.twitter.com/mXwQI2W2BI
— Hima MON JAI (@HimaDas8) July 17, 2019 " class="align-text-top noRightClick twitterSection" data="
">Won another gold today in 200m and improved my timings to 23.25s at Tabor GP. pic.twitter.com/mXwQI2W2BI
— Hima MON JAI (@HimaDas8) July 17, 2019Won another gold today in 200m and improved my timings to 23.25s at Tabor GP. pic.twitter.com/mXwQI2W2BI
— Hima MON JAI (@HimaDas8) July 17, 2019
ಝೆಕ್ ರಿಪಬ್ಲಿಕ್‌ನಲ್ಲಿ ನಡೆದ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‌ನ 200 ಮೀ. ಓಟದಲ್ಲಿ 23.25 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿದ ಹಿಮಾ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ.
ಜುಲೈ 2ರಂದು ಪೋಲೆಂಡ್ನ ಪೊನ್ಝಾನ್ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ ಹಿಮಾ ದಾಸ್ 200 ಮೀ. ಓಟವನ್ನು 23.65 ಸೆಕೆಂಡ್ಗಳಲ್ಲಿ ತಲುಪುವ ಮೂಲಕ ಚಿನ್ನ ಗೆದ್ದಿದ್ದರು. ನಂತರ ಜುಲೈ 7ರಂದು ಕುಂತೊ ಅಥ್ಲೆಟಿಕ್ಸ್ ಕೂಟದ ಮಹಿಳೆಯರ 200 ಮೀ. ಓಟವನ್ನು 23.97 ಸೆಕೆಂಡ್ನಲ್ಲಿ ತಲುಪಿ ಎರಡನೇ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.
ಕ್ಲಾಡ್ನೋ ಮೆಮೋರಿಯಲ್ ಅಥ್ಲೆಟಿಕ್ಸ್ನಲ್ಲಿ ಮಹಿಳೆಯರ 200 ಮೀ. ಓಟದ ವಿಭಾಗದಲ್ಲಿ 23.43 ಸೆಕೆಂಡ್ನಲ್ಲಿ ಗುರಿ ತಲುಪುವ ಮೂಲಕ ಮೂರನೇ ಚಿನ್ನದ ಪದಕ ಪಡೆದುಕೊಂಡಿದ್ದರು.
ಇತ್ತೀಚೆಗೆ ಅಸ್ಸೋಂನಲ್ಲಿ ಉಂಟಾದ ಪ್ರವಾಹ ಸಂತ್ರಸ್ಥರ ನೆರವಿಗಾಗಿ ತನ್ನ ವೇತನದ ಅರ್ಧ ಭಾಗವನ್ನ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿ ಮಾನವೀಯತೆ ಮೆರೆದಿದ್ದರು.