ETV Bharat / sports

ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್ಸ್​: ಲಾಂಗ್​ಜಂಪ್​ನಲ್ಲಿ ಚಿನ್ನ ಜಸ್ಟ್​ ಮಿಸ್, ಬೆಳ್ಳಿ ಪದಕ ಗೆದ್ದ ಶೈಲಿ ಸಿಂಗ್ - ಅಮಿತ್ ಖತ್ರಿ

ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ 17 ವರ್ಷದ ಶೈಲಿ 6.59 ಸೆಂಟಿ ಮೀಟರ್​ ದೂರ ಜಿಗಿದರು. ಆದರೆ ಹಾಲಿ ಯುರೋಪಿಯನ್​ ಚಾಂಪಿಯನ್​ ಜೂನಿಯರ್​ ಚಾಂಪಿಯನ್​ ಆಗಿರುವ ಸ್ವೀಡನ್​ನ ಮಜಾ ಅಸ್ಕಾಗ್​ 6.60 ಮೀಟರ್​ ಜಿಗಿದು ಚಿನ್ನದ ಪದಕ ಗೆದ್ದರು. ಲೀಗ್​ನಿಂದಲೂ ಉತ್ತಮ ಪ್ರದರ್ಶನ ತೋರಿದ್ದ ಶೈಲಿ ಕೇವಲ ಒಂದು ಸೆಂಟಿ ಮೀಟರ್​ ಅಂತರದಲ್ಲಿ ಐತಿಹಾಸಿಕ ಚಿನ್ನದ ಪದಕ ತಪ್ಪಿಸಿಕೊಂಡರು.

U 20 World Athletics Championships
ಶೈಲಿ ಸಿಂಗ್​
author img

By

Published : Aug 22, 2021, 9:48 PM IST

ನೈರೋಬಿ: ಭಾರತ ಪ್ರತಿಭಾನ್ವಿತ ಲಾಂಗ್ ಜಂಪರ್​ ಶೈಲಿ ಸಿಂಗ್​ ಭಾನುವಾರ ನಡೆದ ಅಂಡರ್​ 20 ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆಲ್ಲುವ ಅವಕಾಶವನ್ನು ಕೂದಲೆಳೆಯಂತರದಲ್ಲಿ ಕಳೆದುಕೊಂಡರೂ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ 17 ವರ್ಷದ ಶೈಲಿ 6.59 ಸೆಂಟಿ ಮೀಟರ್​ ದೂರ ಜಿಗಿದು ಬೆಳ್ಳಿ ಪದಕ ಸಾಧಿಸಿದರು. ಹಾಲಿ ಯುರೋಪಿಯನ್​ ಜೂನಿಯರ್​ ಚಾಂಪಿಯನ್​ ಆಗಿರುವ ಸ್ವೀಡನ್​ನ ಮಜಾ ಅಸ್ಕಾಗ್​ 6.60 ಮೀಟರ್​ ಜಿಗಿದು ಚಿನ್ನದ ಪದಕ ಗೆದ್ದರು. ಲೀಗ್​ನಿಂದಲೂ ಉತ್ತಮ ಪ್ರದರ್ಶನ ತೋರಿದ್ದ ಶೈಲಿ ಕೇವಲ 1 ಸೆಂಟಿ ಮೀಟರ್​ ಅಂತರದಲ್ಲಿ ಐತಿಹಾಸಿಕ ಚಿನ್ನದ ಪದಕ ತಪ್ಪಿಸಿಕೊಂಡರು.

  • Maja Åskag – double #WorldAthleticsU20 champion 🥇🥇

    The Swede leaps to a personal best 6.60m to add the long jump title to her triple jump crown from Friday!

    India's Shaili Singh wins 🥈 just 1cm shy of Åskag's winning mark with Ukraine's Mariia Horielova taking 🥉. pic.twitter.com/in5dd57lWh

    — World Athletics (@WorldAthletics) August 22, 2021 " class="align-text-top noRightClick twitterSection" data=" ">

ಲೆಜೆಂಡರಿ ಲಾಂಗ್​ ಜಂಪರ್​ ಅಂಜು ಬಾಬಿ ಜಾರ್ಜ್​ ಅವರಿಂದ ತರಬೇತಿ ಪಡೆದಿದ್ದ ಶೈಲಿ ಮೂರನೇ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದರು. ಆದರೆ ಸ್ವೀಡನ್​ನ 18ನೇ ವರ್ಷದ ಅಥ್ಲೀಟ್​ ನಾಲ್ಕನೇ ಸುತ್ತಿನಲ್ಲಿ ಶೈಲಿಗಿಂತ ಒಂದು ಸೆಂಟಿ ಮೀಟರ್ ಹೆಚ್ಚು ಜಿಗಿದು ಚಿನ್ನಕ್ಕೆ ಮುತ್ತಿಟ್ಟರು. ಉಕ್ರೇನ್​ನ ಮರಿಯಾ ಹೊರೀಲೋವಾ 6.50 ಮೀಟರ್ ಜಿಗಿದು ಕಂಚಿನ ಪದಕ ಪಡೆದರು.

ಭಾರತ ಚಾಂಪಿಯನ್​ಶಿಪ್​ನಲ್ಲಿ 2 ಬೆಳ್ಳಿ ಮತ್ತು 1 ಕಂಚು ಸೇರಿದಂತೆ 3 ಪದಕಗಳೊಡನೆ ತನ್ನ ಅಭಿಯಾನವನ್ನು ಅಂತ್ಯಗೊಳಿಸಿತು. ಶನಿವಾರ 10,000 ಮೀಟರ್​ ನಡಿಗೆ ಸ್ಪರ್ಧೆಯಲ್ಲಿ ಅಮಿತ್​ ಖತ್ರಿ ಬೆಳ್ಳಿ ಪದಕ ಪಡೆದರೆ, ಬುಧವಾರ 4x400 ಮಿಶ್ರ ರಿಲೆಯಲ್ಲಿ ಭಾರತ ತಂಡ ಕಂಚು ಜಯಿಸಿತ್ತು. ಈ ಹಿಂದಿನ 2 ಆವೃತ್ತಿಗಳಲ್ಲಿ ಭಾರತ ತಲಾ ಒಂದು ಚಿನ್ನದ ಪದಕ ಗೆದ್ದಿತ್ತು. 2016ರಲ್ಲಿ ನೀರಜ್​ ಚೋಪ್ರಾ ಜಾವಲಿನ್​ ಥ್ರೋನಲ್ಲಿ ಚಿನ್ನ ಗೆದ್ದರೆ, 2018ರಲ್ಲಿ ಹಿಮಾದಾಸ್​ 400 ಮೀಟರ್​ ಓಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು.

ಇದನ್ನು ಓದಿ:10,000 ಮೀ. ನಡಿಗೆ ಸ್ಪರ್ಧೆಯಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಭಾರತದ ಅಮಿತ್​ ಖತ್ರಿ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.