ನವದೆಹಲಿ: ಭಾರತದ ಗ್ರ್ಯಾಂಡ್ ಮಾಸ್ಟರ್ ಡಿ.ಗುಕೇಶ್ ಅವರು ವಿಶ್ವನಾಥನ್ ಆನಂದ್ ಅವರ 37 ವರ್ಷದ ದಾಖಲೆ ಮುರಿದು ಭಾರತದ ನಂ.1 ಚೆಸ್ ಶ್ರೇಯಾಂಕಿತ ಚೆಸ್ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಐದು ಬಾರಿಯ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್‌ರನ್ನು ಅಂತರರಾಷ್ಟ್ರೀಯ ಚೆಸ್ ಫೆಡರೇಶನ್ (FIDE) ನೀಡುವ ರೇಟಿಂಗ್‌ನಲ್ಲಿ ಗುಕೇಶ್ ಹಿಮ್ಮೆಟ್ಟಿಸಿದ್ದು, 8ನೇ ಸ್ಥಾನ ಗಳಿಸಿದ್ದಾರೆ.
ಜುಲೈ 1986ರಿಂದ ಆನಂದ್ ಭಾರತದ ನಂ.1 ಚೆಸ್ ಆಟಗಾರರಾಗಿದ್ದರು. ಆದರೆ, ಫಿಡೆ ಇಂದು ಬಿಡುಗಡೆ ಮಾಡಿದ ರ್‍ಯಾಂಕಿಂಗ್ ಪಟ್ಟಿಯಲ್ಲಿ 17 ವರ್ಷದ ಗುಕೇಶ್ 8ನೇ ಸ್ಥಾನ ಪಡೆದುಕೊಂಡಿದ್ದಾರೆ. ವಿಶ್ವನಾಥನ್ ಆನಂದ್ 9ನೇ ಶ್ರೇಯಾಂಕದಲ್ಲಿದ್ದಾರೆ. ರೇಟಿಂಗ್ ಪಟ್ಟಿಯಲ್ಲಿ ಭಾರತೀಯರಾದ ಗುಕೇಶ್ ಮತ್ತು ಆನಂದ್ ಟಾಪ್ 10ರಲ್ಲಿರುವ ಆಟಗಾರರು. ಗುಕೇಶ್ 7 ಅಂಕಗಳನ್ನು ಪಡೆದುಕೊಂಡು 2,758 ಅಂಕಗಳನ್ನು ಹೊಂದಿದರೆ, ವಿಶ್ವನಾಥನ್ ಆನಂದ್ 2,754 ಅಂಕಗಳನ್ನು ಹೊಂದಿದ್ದಾರೆ.
-
It's official! Gukesh is India's #1 in the #FIDErating list!
— International Chess Federation (@FIDE_chess) September 1, 2023 " class="align-text-top noRightClick twitterSection" data="
🔥 The 17-year-old prodigy makes history by overtaking the five-time World Champion Vishy Anand and terminating his uninterrupted 37-year reign as India's top-rated player!
📷 Stev Bonhage pic.twitter.com/paDli9hslX
">It's official! Gukesh is India's #1 in the #FIDErating list!
— International Chess Federation (@FIDE_chess) September 1, 2023
🔥 The 17-year-old prodigy makes history by overtaking the five-time World Champion Vishy Anand and terminating his uninterrupted 37-year reign as India's top-rated player!
📷 Stev Bonhage pic.twitter.com/paDli9hslXIt's official! Gukesh is India's #1 in the #FIDErating list!
— International Chess Federation (@FIDE_chess) September 1, 2023
🔥 The 17-year-old prodigy makes history by overtaking the five-time World Champion Vishy Anand and terminating his uninterrupted 37-year reign as India's top-rated player!
📷 Stev Bonhage pic.twitter.com/paDli9hslX
ಡಿ.ಗುಕೇಶ್ ಇತ್ತೀಚೆಗೆ ಅಜೆರ್ಬೈಜಾನ್ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್ನ ಕ್ವಾರ್ಟರ್ ಫೈನಲ್ನಲ್ಲಿ ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್‌ರನ್ನು ಎದುರಿಸಿ ವೀರೋಚಿತ ಸೋಲು ಕಂಡಿದ್ದರು. ಚೆಸ್ ವಿಶ್ವಕಪ್ನಲ್ಲಿ ಬೆಳ್ಳಿ ಪದಕ ಗೆದ್ದ ಪ್ರಜ್ಞಾನಂದ, ರ್‍ಯಾಂಕಿಂಗ್ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿದ್ದಾರೆ. ವಿಶ್ವಕಪ್ ಗೆದ್ದ ಮ್ಯಾಗ್ನಸ್ ಕಾರ್ಲ್‌ಸನ್ 2,839 ರೇಟಿಂಗ್ನಿಂದ ಅಗ್ರಸ್ಥಾನದಲ್ಲಿ ಭದ್ರವಾಗಿದ್ದಾರೆ.
ಇಂಟರ್ನ್ಯಾಷನಲ್ ಚೆಸ್ ಫೆಡರೇಶನ್ ತನ್ನ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ "ಫಿಡೆ ರೇಟಿಂಗ್ ಪಟ್ಟಿಯಲ್ಲಿ ಗುಕೇಶ್ ಭಾರತದ 1 ಚೆಸ್ ಆಟಗಾರನಾಗಿದ್ದಾರೆ. 17 ವರ್ಷದ ಚೆಸ್ ಆಟಗಾರ ಐದು ಬಾರಿಯ ವಿಶ್ವ ಚಾಂಪಿಯನ್ ಆನಂದ್ ಅವರನ್ನು ಹಿಂದಿಕ್ಕುವ ಮೂಲಕ ಇತಿಹಾಸ ನಿರ್ಮಿಸಿದರು. ಈ ಮೂಲಕ ಭಾರತದ ಅಗ್ರ ಶ್ರೇಯಾಂಕದಲ್ಲಿ ನಿರಂತರ 37 ವರ್ಷಗಳಿಂದಿದ್ದ ಅನಂದ್ ಆಳ್ವಿಕೆ ಕೊನೆಗೊಂಡಿದೆ" ಎಂದು ಬರೆದಿದೆ.
-
The September #FIDErating lists are out!
— International Chess Federation (@FIDE_chess) September 1, 2023 " class="align-text-top noRightClick twitterSection" data="
Both Open and Women's lists saw changes mainly due to the 2023 #FIDEWorldCup. The most noteworthy were:
🔝 17-year-old Gukesh entered the top 10 for the first time thanks to a 7-point gain
🔥 #FIDEWorldCup runner-up Praggnanandhaa gained… pic.twitter.com/QhKsYa0QWq
">The September #FIDErating lists are out!
— International Chess Federation (@FIDE_chess) September 1, 2023
Both Open and Women's lists saw changes mainly due to the 2023 #FIDEWorldCup. The most noteworthy were:
🔝 17-year-old Gukesh entered the top 10 for the first time thanks to a 7-point gain
🔥 #FIDEWorldCup runner-up Praggnanandhaa gained… pic.twitter.com/QhKsYa0QWqThe September #FIDErating lists are out!
— International Chess Federation (@FIDE_chess) September 1, 2023
Both Open and Women's lists saw changes mainly due to the 2023 #FIDEWorldCup. The most noteworthy were:
🔝 17-year-old Gukesh entered the top 10 for the first time thanks to a 7-point gain
🔥 #FIDEWorldCup runner-up Praggnanandhaa gained… pic.twitter.com/QhKsYa0QWq
ಚೆಸ್ ಫೆಡರೇಶನ್ ಬಿಡುಗಡೆ ಮಾಡಿದ ಪಟ್ಟಿಯಂತೆ ಟಾಪ್ 30ರಲ್ಲಿ ಭಾರತದ ಐವರಿದ್ದಾರೆ. ಗುಕೇಶ್, ಆನಂದ್ ಮತ್ತು ಪ್ರಜ್ಞಾನಂದ ಟಾಪ್ 20ರೊಳಗಿದ್ದರೆ, ವಿದಿತ್ ಸಂತೋಷ್ 27ನೇ ಸ್ಥಾನ ಮತ್ತು ಅರ್ಜುನ್ ಎರಿಗೈಸಿ 29ನೇ ಶ್ರೇಯಾಂಕದಲ್ಲಿದ್ದಾರೆ. ಅನುಭವಿ ಪಿ.ಹರಿಕೃಷ್ಣ 31ನೇ ಸ್ಥಾನದಲ್ಲಿದ್ದಾರೆ.
ಮುಂಬರುವ ಏಷ್ಯನ್ ಗೇಮ್ಸ್‌ಗಾಗಿ ಭಾರತೀಯ ತಂಡದ ಭಾಗವಾಗಿ ಆಯ್ಕೆಯಾಗಿರುವ ಗುಕೇಶ್ ಮತ್ತು ಪ್ರಗ್ನಾನಂದ ಕೋಲ್ಕತ್ತಾದಲ್ಲಿ ಪೂರ್ವಸಿದ್ಧತಾ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ನಂತರ ಸೆಪ್ಟೆಂಬರ್ 5 ರಿಂದ ಟಾಟಾ ಸ್ಟೀಲ್ ಚೆಸ್ ಇಂಡಿಯಾ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಚೆಸ್ ಚತುರ ಪ್ರಜ್ಞಾನಂದನಿಗೆ ಅಭಿನಂದಿಸಿದ ಕ್ರೀಡಾ ಸಚಿವ ಅನುರಾಗ್ ಠಾಕೂರ್