ETV Bharat / sports

ಕೊನೆಯ ನಿಮಿಷದಲ್ಲಿ ಕಮ್​ಬ್ಯಾಕ್​ ಮಾಡಿದ್ದನ್ನು ಕೈಯ್ಯಾರೆ ವ್ಯರ್ಥ ಮಾಡಿಕೊಂಡು ಸೋಲುಂಡ ಬುಲ್ಸ್​!

ಅಂತಿಮ 45 ಸೆಕೆಂಡ್​ ಇದ್ದ ವೇಳೆ ಬೆಂಗಳೂರು 36-35ರಲ್ಲಿ ಒಂದು ಅಂಕದ ಮುನ್ನಡೆಯಲ್ಲಿತ್ತು. ಆದರೆ ಜೈಂಟ್ಸ್​ ತಂಡದ ಪರ್ದೀಪ್​ ರೈಡಿಂಗ್​ ಬಂದ ವೇಳೆ ಬುಲ್ಸ್​ ಡಿಫೆಂಡರ್​ಗಳು ಬೇಜಾವಬ್ದಾರಿ ಟ್ಯಾಕಲ್​ಗೆ ಪ್ರಯತ್ನಿಸಿ 2 ಅಂಕ ಬಿಟ್ಟುಕೊಟ್ಟರು. ನಂತರ ರೈಡಿಂಗ್​ಗೆ ಹೋದ ಭರತ್ ಕೂಡ​ ಔಟಾಗುವುದರೊಂದಿಗೆ ಬುಲ್ಸ್​ 36-38ರಲ್ಲಿ ಹಿನ್ನಡೆ ಅನುಭವಿಸಿತು. ಕೊನೆಯ ರೈಡ್​ನಲ್ಲೂ ಎದುರಾಳಿಯನ್ನು ಹಿಡಿಯುವುದು ಅನಿವಾರ್ಯವಾದ ಕಾರಣ ಬಾಕ್​ಲೈನ್​ನಲ್ಲಿ ಹಿಡಿಯುವ ಯತ್ನದಲ್ಲಿ ಮತ್ತೆ 2 ಅಂಕ ಬಿಟ್ಟುಕೊಟ್ಟು ಪಂದ್ಯವನ್ನು 36-40ರಲ್ಲಿ ಕಳೆದುಕೊಂಡಿತು.

Gujarat Giants beats Bengaluru Bulls 40-36
ಬೆಂಗಳೂರಿ ಬುಲ್ಸ್​ಗೆ ಸೋಲು
author img

By

Published : Feb 6, 2022, 10:44 PM IST

ಬೆಂಗಳೂರು: ಆರಂಭದಿಂದಲೂ ಹಿನ್ನಡೆಗೆ ಒಳಗಾದರೂ, ಕೊನೆಯ 3 ನಿಮಿಷಗಳಲ್ಲಿ ಅದ್ಭುತವಾಗಿ ಕಮ್​ಬ್ಯಾಕ್​ ಮಾಡಿ 2 ಅಂಕ ಮುನ್ನಡೆ ಪಡೆದುಕೊಂಡರೂ ಸಹಾ, ಅಂತಿಮ 45 ಸೆಕೆಂಡ್​ಗಳ ಆಟ ಇರುವಾಗ ಡಿಫೆಂಡಿಂಗ್​ನಲ್ಲಿ ಮಾಡಿದ ಎಡವಟ್ಟಿನಿಂದ ಬೆಂಗಳೂರು ಬುಲ್ಸ್​ ಸೋಲು ಕಂಡು ನಿರಾಶೆಯನುಭಿಸಿದೆ.

ಬೆಂಗಳೂರು ಬುಲ್ಸ್​ ಭಾನುವಾರ ನಡೆದ ಪಂದ್ಯದಲ್ಲಿ ಗುಜುರಾತ್​ ಜೈಂಟ್ಸ್​ ವಿರುದ್ಧ 40-36ರಲ್ಲಿ ಸೋಲು ಕಂಡಿದೆ. ಈ ಮೂಲಕ ನಾಕೌಟ್​ ಸ್ಥಾನವನ್ನು ಕಳೆದುಕೊಳ್ಳುವ ಭೀತಿ ಕೂಡ ಎದುರಾಗಿದೆ.

ಮೊದಲಾರ್ಧದದಲ್ಲಿ ಎರಡೂ ತಂಡಗಳೂ ಉತ್ತಮ ಪೈಪೋಟಿ ನೀಡಿದವು. ಅರ್ಧ ಆಟ ಮುಗಿದಾಗ ಬುಲ್ಸ್​ (14-15) ಕೇವಲ ಒಂದು ಅಂಕದ ಹಿನ್ನಡೆ ಅನುಭವಿಸಿತ್ತು. ಆದರೆ ದ್ವಿತೀಯಾರ್ಧದ ಮೊದಲ 10 ನಿಮಿಷದಲ್ಲಿ ಪ್ರಾಬಲ್ಯ ಪ್ರದರ್ಶನ ತೋರಿದ ಗುಜರಾತ್​ ಬುಲ್ಸ್ ತಂಡವನ್ನು ಆಲೌಟ್​ ಮಾಡಿ 26-20ರಲ್ಲಿ ಮುನ್ನಡೆಯನ್ನು ಹೆಚ್ಚಿಸಿಕೊಂಡಿತು.

ಕೊನೆಯ 3 ನಿಮಿಷದಲ್ಲಿ ಭರತ್​ ಮತ್ತು ಪವನ್​ ಅತ್ಯುತ್ತಮ ರೈಡ್​ ಮಾಡಿ ಎದುರಾಳಿಯನ್ನು ಆಲೌಟ್​ ಮಾಡುವ ಮೂಲಕ ಕೊನೆಯ ಒಂದುವರೆ ನಿಮಿಷದ ವೇಳೆಗೆ ಅಂಕವನ್ನು 35-35ಕ್ಕೆ ತಂದು ನಿಲ್ಲಿಸಿದರು.

ಅಂತಿಮ 45 ಸೆಕೆಂಡ್​ ಇದ್ದ ವೇಳೆ ಬೆಂಗಳೂರು 36-35ರಲ್ಲಿ ಒಂದು ಅಂಕದ ಮುನ್ನಡೆಯಲ್ಲಿತ್ತು. ಆದರೆ ಜೈಂಟ್ಸ್​ ತಂಡದ ಪರ್ದೀಪ್​ ರೈಡಿಂಗ್​ ಬಂದ ವೇಳೆ ಬುಲ್ಸ್​ ಡಿಫೆಂಡರ್​ಗಳು ಬೇಜಾವಬ್ದಾರಿ ಟ್ಯಾಕಲ್​ಗೆ ಪ್ರಯತ್ನಿಸಿ 2 ಅಂಕ ಬಿಟ್ಟುಕೊಟ್ಟರು. ನಂತರ ರೈಡಿಂಗ್​ಗೆ ಹೋದ ಭರತ್ ಕೂಡ​ ಔಟಾಗುವುದರೊಂದಿಗೆ ಬುಲ್ಸ್​ 36-38ರಲ್ಲಿ ಹಿನ್ನಡೆ ಅನುಭವಿಸಿತು. ಕೊನೆಯ ರೈಡ್​ನಲ್ಲೂ ಎದುರಾಳಿಯನ್ನು ಹಿಡಿಯುವುದು ಅನಿವಾರ್ಯವಾದ ಕಾರಣ ಬಾಕ್​ಲೈನ್​ನಲ್ಲಿ ಹಿಡಿಯುವ ಯತ್ನದಲ್ಲಿ ಮತ್ತೆ 2 ಅಂಕ ಬಿಟ್ಟುಕೊಟ್ಟು ಪಂದ್ಯವನ್ನು 36-40ರಲ್ಲಿ ಕಳೆದುಕೊಂಡಿತು.

7 ಅಂಕಗಳ ಹಿನ್ನಡೆಯನ್ನು ಮೆಟ್ಟಿ ನಿಂತು ಒಂದು ಅಂಕ ಮುನ್ನಡೆ ಕಂಡುಕೊಂಡರು ಕೊನೆಯ 45 ಸೆಕೆಂಡ್​​ನಲ್ಲಿ ಯಾಮಾರಿದ್ದರಿಂದ ಸೋಲುವ ಪಂದ್ಯವನ್ನು ಗೆದ್ದು ಮತ್ತೆ ಕೈಚೆಲ್ಲಿದಂತಾಯಿತು. ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ವಿರುದ್ಧವೂ 10 ಅಂಕಗಳ ಮುನ್ನಡೆಯಲ್ಲಿದ್ದರೂ ಸಹಾ ಕೊನೆಯ ನಿಮಿಷಗಳಲ್ಲಿ ವೈಫಲ್ಯ ಕಂಡು ಟೈ ಮಾಡಿಕೊಂಡಿತ್ತು.

ಇದನ್ನೂ ಓದಿ: ಐಸಿಸಿ U19 ವಿಶ್ವಕಪ್ 'ಅತ್ಯಂತ ಮೌಲ್ಯಯುತ ತಂಡ'ಕ್ಕೆ ಯಶ್​ ಧುಲ್ ನಾಯಕ, 3 ಭಾರತೀಯರಿಗೆ ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.