ದಾಖಲೆ ಬರೆಯಲು ರಾಫೆಲ್ ನಡಾಲ್ ಒಂದೇ ಒಂದು ಮೆಟ್ಟಿಲು ಬಾಕಿ ಇದೆ. ಶುಕ್ರವಾರ ನಡೆದ ಫ್ರೆಂಚ್ ಓಪನ್ 2022 ಸೆಮಿಫೈನಲ್‌ನಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಸೋಲಿಸಿ ನಡಾಲ್ ಫೈನಲ್‌ಗೆ ಪ್ರವೇಶಿಸಿದರು. ಈ ಮೂಲಕ 14ನೇ ಬಾರಿ ಪ್ರಶಸ್ತಿ ಹಂತಕ್ಕೆ ತುಲಪಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಶುಕ್ರವಾರ ರೊಲ್ಯಾಂಡ್ ಗ್ಯಾರೋಸ್ನಲ್ಲಿ ನಡೆದ ಸೆಮಿಫೈನಲ್ ಪಂದ್ಯದ ಎರಡನೇ ಸೆಟ್‌ನ 12 ನೇ ಗೇಮ್‌ನಲ್ಲಿ ಜ್ವೆರೆವ್ ಸ್ನಾಯು ಸೆಳತಕ್ಕೆ ಒಳಗಾಗಿ ಕುಸಿದು ಬಿದ್ದರು. ಜರ್ಮನ್ ಆಟಗಾರ ನಡಾಲ್ ವಿರುದ್ಧ 7-6(8), 6-6 ಹಿನ್ನಡೆಯಲ್ಲಿದ್ದರು. ಗಾಯಗೊಂಡ ಜ್ವೆರೆವ್ ಆಟದಿಂದ ಹೊರ ನಡೆಯಬೇಕಾಯಿತು. ಅತ್ತ ನಡಾಲ್ ಅನಾಯಾಸವಾಗಿ ದಾಖಲೆಯ ಪ್ರಶಸ್ತಿಯತ್ತ ಮತ್ತೊಂದು ಹೆಜ್ಜೆ ಮುಂದಿಟ್ಟರು.
ಆದ್ರೆ ಸ್ನಾಯು ಸೆಳೆತಕ್ಕೆ ಒಳಗಾದ ಹಿನ್ನೆಲೆ ಆಟದಿಂದ ಹೊರನಡೆದರು. ಅದ್ಭುತವಾಗಿ ಆಟವಾಡಿದ ಜ್ವೆರೆವ್ಗೆ ಕೋರ್ಟ್ನಲ್ಲಿ ಪ್ರೇಕ್ಷಕರು ಎದ್ದು ನಿಂತು ಬೀಳ್ಕೊಟ್ಟರು.
ಫೈನಲ್ ಪ್ರವೇಶಿಸಿದ ಬಳಿಕ ಮಾತನಾಡಿದ ಫ್ರೆಂಚ್ ಓಪನ್ನ ಸರದಾರ ನಡಾಲ್, ತುಂಬಾ ದುಃಖವಾಗಿದೆ. ಅವರು ಗ್ರ್ಯಾಂಡ್ ಸ್ಲಾಮ್ ಗೆಲ್ಲಲು ಎಷ್ಟು ಹೋರಾಡುತ್ತಿದ್ದಾರೆಂದು ನನಗೆ ತಿಳಿದಿದೆ. ಅವರು ಒಂದಲ್ಲ ಒಂದಕ್ಕಿಂತ ಹೆಚ್ಚು ಬಾರಿ ಗೆಲ್ಲುತ್ತಾರೆ ಎಂದು ನನಗೆ ತಿಳಿದಿದೆ. ನಾನು ಅವರಿಗೆ ಶುಭ ಹಾರೈಸುತ್ತೇನೆ ಎಂದರು. ಇದೇ ವೇಳೆ ಮಾತನಾಡಿದ ಜ್ವೆರೆವ್, ಟೂರ್ನಾಮೆಂಟ್ನಲ್ಲಿ ಅವರೊಬ್ಬ ಅಸಾಧಾರಣ ಎದುರಾಳಿ, ಅವರು ಫೈನಲ್ ಪ್ರವೇಶಿಸಿದ್ದು ಒಳ್ಳೆಯದು, ಅವರಿಗೆ ಶುಭವಾಗಲಿ ಎಂದು ಹೇಳಿದ್ದಾರೆ.
ಭಾನುವಾರ ನಡಾಲ್ ಮತ್ತು ಸಿ ರುಡ್ ಮಧ್ಯೆ ಫ್ರೆಂಚ್ ಓಪನ್ ಪುರುಷರ ಫೈನಲ್ ಪಂದ್ಯ ನಡೆಯಲಿದೆ. ಇನ್ನು ಇಂದು ಮಹಿಳೆಯರ ಫೈನಲ್ ಪಂದ್ಯದಲ್ಲಿ ಅಮೆರಿಕಾದ ಕೊಕೊ ಗೌಫ್ ಮತ್ತು ಒನ್ ಇಗಾ ಸ್ವಿಯಾಟೆಕ್ ಸೆಣಸಲಿದ್ದಾರೆ.
(ಇದನ್ನೂ ಓದಿ: ಅತಿ ಹೆಚ್ಚು ವಾರಗಳ ಕಾಲ ನಂ.1: ಫೆಡರರ್ ಹಿಂದಿಕ್ಕಿ ವಿಶ್ವ ದಾಖಲೆ ಬರೆದ ನೊವಾಕ್ ಜೋಕೊವಿಕ್)