ಕೊಲೊರಾಡೋ (ಯುಎಸ್) : ಫಾರ್ಮುಲಾ ಒನ್ ರೇಸ್ನ 2020ರ ಪರಿಷ್ಕೃತ ವೇಳಾಪಟ್ಟಿ ಮಂಗಳಾವಾರ ಪ್ರಕಟಿಸಲಾಗಿದ್ದು, ಆಸ್ಟ್ರಿಯನ್ ಗ್ರ್ಯಾಂಡ್ ಪ್ರಿಕ್ಸ್‌ನೊಂದಿಗೆ ಜುಲೈನಲ್ಲಿ ಇದು ಪ್ರಾರಂಭವಾಗಲಿದೆ.
ಜುಲೈ 5 ರಂದು ಆಸ್ಟ್ರೇಲಿಯಾದ ರೆಡ್ ಬುಲ್ ರಿಂಗ್‌ನಲ್ಲಿ ಆಸ್ಟ್ರಿಯನ್ ಗ್ರ್ಯಾಂಡ್ ಪ್ರಿಕ್ಸ್‌ನೊಂದಿಗೆ ಸೀಸನ್ ಪ್ರಾರಂಭವಾಗಲಿದ್ದು, ಒಂದು ವಾರದ ನಂತರ ಅದೇ ಟ್ರ್ಯಾಕ್‌ನಲ್ಲಿ ಎರಡನೇ ರೇಸ್ ನಡೆಯಲಿದೆ. ನಂತರ ಸಿಲ್ವರ್‌ಸ್ಟೋನ್‌ನಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ರೇಸ್‌ಗಳು ನಡೆಯಲಿದೆ.
ಹಂಗೇರಿಯನ್ ಗ್ರ್ಯಾಂಡ್ ಪ್ರಿಕ್ಸ್ ಕೊನೆಗೊಂಡ ಒಂದು ವಾರದ ಬಳಿಕ ಫಾರ್ಮುಲಾ ಒನ್ ಸೀಸನ್ ಪ್ರಾರಂಭವಾಗಲಿದೆ. ನಂತರ ಬಾರ್ಸಿಲೋನಾದಲ್ಲಿ ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ ನಡೆಯಲಿದೆ. ಇದರ ಬಳಿಕ ಬೆಲ್ಜಿಯಂ ಗ್ರ್ಯಾಂಡ್ ಪ್ರಿಕ್ಸ್ ನಡೆಯಲಿದ್ದು, ಸೆಪ್ಟೆಂಬರ್ 6 ರಂದು ಮೊನ್ಜಾದಲ್ಲಿ ಇಟಾಲಿಯನ್ ಗ್ರ್ಯಾಂಡ್ ಪ್ರಿಕ್ಸ್ ನಡೆಯಲಿದೆ.
ಎಫ್ ಒನ್ ರೇಸ್‌ಗಳು ಪ್ರಾರಂಭವಾದರೂ ವೀಕ್ಷಕರು ಅಥವಾ ಅಭಿಮಾನಿಗಳು ರೇಸ್ ವೀಕ್ಷಿಸುವುದು ಅಸಾಧ್ಯ ಎನ್ನಲಾಗುತ್ತಿದ್ದು, ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅವಕಾಶ ದೊರೆಯುವ ಸಾಧ್ಯತೆಗಳಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಎಫ್ 1 ಅಧ್ಯಕ್ಷ ಮತ್ತು ಸಿಇಒ ಚೇಸ್ ಕ್ಯಾರಿ, ಕಳೆದ ವಾರದ ನಮ್ಮ ಪಾಲುದಾರರು ಮತ್ತು ಎಫ್ಐಎ ತಂಡಗಳೊಂದಿಗೆ 2020 ರ ಪರಿಷ್ಕೃತ ವೇಳಾಪಟ್ಟಿ ತಯಾರಿಸಲು ಚರ್ಚೆ ನಡೆಸಿದ್ದೇವೆ. ಈಗ ಬಿಡುಗಡೆ ಮಾಡಿರುವ ವೇಳಾಪಟ್ಟಿ ಸುರಕ್ಷಿತವಾಗಿ ರೇಸಿಂಗ್ ನಡೆಸಲು ಅನುವು ಮಾಡಿಕೊಡುತ್ತದೆ ಎಂದಿದ್ದಾರೆ.